ಆಪ್ ಇನ್ಮುಂದೆ ರಾಷ್ಟ್ರೀಯ ಪಕ್ಷ-ಬಿಜೆಪಿ, ಕಾಂಗ್ರೆಸ್​ಗೆ ಆಮ್ ಆದ್ಮಿ ಸವಾಲ್!

ಆಪ್ ಇನ್ಮುಂದೆ ರಾಷ್ಟ್ರೀಯ ಪಕ್ಷ-ಬಿಜೆಪಿ, ಕಾಂಗ್ರೆಸ್​ಗೆ ಆಮ್ ಆದ್ಮಿ ಸವಾಲ್!

ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಐದು ಕ್ಷೇತ್ರಗಳನ್ನ ಗೆಲ್ಲುತ್ತಲೇ, ಅರವಿಂದ ಕೇಜ್ರಿವಾಲ್ ತಮ್ಮದು ರಾಷ್ಟ್ರೀಯ ಪಕ್ಷ ಅಂತಾ ಘೋಷಿಸಿದ್ದಾರೆ. ಸ್ಥಾಪನೆಯಾಗಿ 10 ವರ್ಷಗಳಲ್ಲೇ ಆಪ್​ ರಾಷ್ಟ್ರೀಯ ಪಕ್ಷ ಎನಿಸಿಕೊಂಡಿದೆ. 2012ರ ನವೆಂಬರ್​​ನಲ್ಲಿ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಹೆಸರಿನ ಪಕ್ಷವನ್ನು ಘೋಷಣೆ ಮಾಡಿದ್ರು. 2013ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಆಪ್ ಹೊರ ಹೊಮ್ಮಿತ್ತು. 2015ರಲ್ಲಿ ಮತ್ತೆ ಚುನಾವಣೆ ನಡೆಯುತ್ತಲೇ ಆಪ್ ಮೊಟ್ಟ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿತ್ತು. ಬಳಿಕ 2020ರ ಚುನಾವಣೆಯಲ್ಲಿ ಎರಡನೇ ಬಾರಿಗೆ ದೆಹಲಿಯಲ್ಲಿ ಕೇಜ್ರಿವಾಲ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಿತು. ಬಳಿಕ ಇದೇ ವರ್ಷ ಪಂಜಾಬ್​​ನಲ್ಲೂ ಗೆದ್ದು ಆಪ್​​ ಅಧಿಕಾರಕ್ಕೇರಿದೆ. ಗುಜರಾತ್​​ ವಿಧಾನಸಭೆ ಚುನಾವಣೆಯಲ್ಲಿ ಐದು ಸ್ಥಾನಗಳನ್ನ ಪಡೆದಿದೆ. ಹೀಗಾಗಿ ಅರವಿಂದ್ ಕೇಜ್ರಿವಾಲ್, ಆಮ್​ ಆದ್ಮಿ ಇನ್ನು ರಾಷ್ಟ್ರೀಯ ಪಕ್ಷ ಅಂತಾ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಗಳಿಗೆ ಸಂದೇಶ ಕೂಡ ರವಾನಿಸಿದ್ದಾರೆ.

ಹಾಗಿದ್ರೆ ಚುನಾವಣಾ ಆಯೋಗದ ಪ್ರಕಾರ ಒಂದು ರಾಜಕೀಯ ಪಾರ್ಟಿ ರಾಷ್ಟ್ರೀಯ ಪಕ್ಷ ಎನಿಸಿಕೊಳ್ಳಲು ಬೇಕಿರೋ ಮಾನದಂಡಗಳು ಏನು ಅನ್ನೋದನ್ನ ನೋಡೋಣ.

ರಾಷ್ಟ್ರೀಯ ಪಕ್ಷವಾಗುವುದು ಹೇಗೆ? 

  • ಪಕ್ಷ 4 ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಗುರುತಿಸಿಕೊಂಡಿರಬೇಕು
  • ಚುನಾವಣೆಯಲ್ಲಿ ಅಭ್ಯರ್ಥಿಗಳು ಶೇಕಡಾ 6ರಷ್ಟು ಮತ ಗಳಿಸಿರಬೇಕು
  • ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಶೇ.6ರಷ್ಟು ಮತ ಅಗತ್ಯ
  • ಪಕ್ಷ ಕನಿಷ್ಠ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಶೇ.6ರಷ್ಟು ಮತ ಗಳಿಸಿರಬೇಕು
  • ಪಕ್ಷ ಕನಿಷ್ಠ ನಾಲ್ಕು ಮಂದಿ ಲೋಕಸಭಾ ಸದಸ್ಯರನ್ನು ಹೊಂದಿರಬೇಕು
  • ಪಕ್ಷ ವಿಧಾನಸಭೆಯಲ್ಲಿ ಕನಿಷ್ಠ ಇಬ್ಬರು ಶಾಸಕರನ್ನು ಹೊಂದಿರಬೇಕು

ಆಪ್ ಇನ್ಮುಂದೆ ರಾಷ್ಟ್ರೀಯ ಪಕ್ಷ- ಬಿಜೆಪಿ, ಕಾಂಗ್ರೆಸ್ಗೆ ಆಮ್ ಆದ್ಮಿ ಸವಾಲ್!

ರಾಷ್ಟ್ರೀಯ ಪಕ್ಷವಾಗಲು ಬೇಕಾದ ಅರ್ಹತೆಯನ್ನು ಆಮ್​ ಆದ್ಮಿ ಈಗಾಗಲೇ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಅರವಿಂದ ಕೇಜ್ರಿವಾಲ್ ಆಪ್​ ಇನ್ನು ಮುಂದೆ ರಾಷ್ಟ್ರೀಯ ಪಕ್ಷ ಅಂತಾ ಘೋಷಿಸಿದ್ದಾರೆ. ಮುಂಬರುವ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ವಿಧಾನಸಭೆ ಚುನಾವಣೆಯಲ್ಲಿ ಕೂಡ ಅಭ್ಯರ್ಥಿಗಳು ಕಣಕ್ಕಿಸೋಕೆ ಆಪ್​ ಪ್ಲ್ಯಾನ್ ಮಾಡುತ್ತಿದೆ. ರಾಷ್ಟ್ರೀಯ ಪಕ್ಷವಾಗಿ 2014ರ ಲೋಕಸಭೆ ಚುನಾವಣೆಯಲ್ಲಿ ಆಪ್ ಮತ್ತಷ್ಟು ಪ್ರಭಾವಿಯಾಗೋ ಸಾಧ್ಯತೆ ಇದೆ ಅನ್ನೋದು ರಾಜಕೀಯ ಪಂಡಿತರು ಅಭಿಪ್ರಾಯ.

suddiyaana