4 ನಿಮಿಷದಲ್ಲಿ ಒಂದು ಮೈಲಿ ಓಡಿ ದಾಖಲೆ ನಿರ್ಮಿಸಿದ 9 ತಿಂಗಳ ಗರ್ಭಿಣಿ!

4 ನಿಮಿಷದಲ್ಲಿ ಒಂದು ಮೈಲಿ ಓಡಿ ದಾಖಲೆ ನಿರ್ಮಿಸಿದ 9 ತಿಂಗಳ ಗರ್ಭಿಣಿ!

ಗರ್ಭಿಣಿಯರು ಹೆಚ್ಚು ವಿಶ್ರಾಂತಿ ಪಡೆಯುವುದು ಅತ್ಯವಶ್ಯಕ. ಹೀಗಾಗಿ ತಾನು ಗರ್ಭಿಣಿ ಅಂತಾ ಗೊತ್ತಾದಾಗಿನಿಂದ ಎಲ್ಲ ವಿಚಾರದಲ್ಲೂ ಜಾಗರೂಕತೆ ವಹಿಸುತ್ತಾರೆ. ಅಲ್ಲದೇ ಸಣ್ಣ ಪುಟ್ಟ ಕೆಲಸಗಳನ್ನು ಮಾತ್ರ ಮಾಡುತ್ತಾ, ವ್ಯಾಯಾಮ ಮಾಡುತ್ತಾ ಕಾಲಕಳೆಯುತ್ತಾರೆ. ಹಾಗೇ ಗರ್ಭಿಣಿಯರು ತುಂಬಾ ಜಾಗರೂಕತೆಯಿಂದ ಓಡಾಡುತ್ತಾರೆ. ಇನ್ನು ಹೆರಿಗೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅವರಿಗೆ ಓಡಾಡಲು ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚು ಹೊತ್ತು ವಿಶ್ರಾಂತಿಯಲ್ಲೇ ಕಾಲಕಳೆಯುತ್ತಾರೆ. ಆದರೆ ಇಲ್ಲೊಬ್ಬರು 9 ತಿಂಗಳ ಗರ್ಭಿಣಿ ಸುಮಾರು 1 ಮೈಲಿ ಓಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಅಮ್ಮನಿಗೆ ಕಡಿದ ಹಾವಿನ ವಿಷ ಬಾಯಿಂದ ಕಚ್ಚಿ ಹೊರತೆಗೆದ ಮಗಳು

ಹೌದು, ಕ್ಯಾಲಿಫೋರ್ನಿಯಾದ 30 ವರ್ಷದ ಮಕೆನ್ನಾ ಮೈಲರ್ ತುಂಬು ಗರ್ಭಿಣಿ. ಮಕೆನ್ನಾ ವೃತ್ತಿಪರ  ಅಥ್ಲಿಟ್ ಆಗಿದ್ದು, ಈಗ ಆಕೆ 9 ತಿಂಗಳ ಗರ್ಭಿಣಿ. ಆದರೂ ಕ್ಯಾಲಿಫೋರ್ನಿಯಾದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಒಂದು ಮೈಲು ದೂರವನ್ನು ಕೇವಲ 4 ನಿಮಿಷ 17 ಸೆಕೆಂಡುಗಳಲ್ಲಿ ಕ್ರಮಿಸಿ ತಮ್ಮ ಗುರಿಯನ್ನು ತಲುಪಿ ದಾಖಲೆ ನಿರ್ಮಿಸಿದ್ದಾರೆ.

ಮಕೆನ್ನಾ ಸಾಮಾನ್ಯವಾಗಿ 5 ಕಿಲೋ ಮೀಟರ್ ಹಾಗೂ 10 ಕಿಲೋ ಮೀಟರ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. 2020ರಲ್ಲಿ ತಮ್ಮ ಮೊದಲ ಪ್ರಗ್ನೆನ್ಸಿಯಲ್ಲಿಯೂ ಆಕೆ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಮಕೆನ್ನಾ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಕೇವಲ 5 ನಿಮಿಷ 25 ಸೆಕೆಂಡುಗಳಲ್ಲಿ1 ಮೈಲಿ ದೂರವನ್ನು ತಲುಪಿ ದಾಖಲೆ ನಿರ್ಮಿಸಿದ್ದರು. ಇದೀಗ ಮಕೆನ್ನಾ 4 ನಿಮಿಷ 17 ಸೆಕೆಂಡುಗಳಲ್ಲಿ 1 ಮೈಲು ದೂರ ಕ್ರಮಿಸಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು ಹಾಕಿದ್ದಾರೆ.

ಗರ್ಭಿಣಿಯಾಗಿದ್ದಾಗ ಕಠಿಣ ಅಭ್ಯಾಸ ಮಾಡಬಾರದು. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಬೇಕು ಅಂತಾ ಸುತ್ತಮುತ್ತಲಿನವರು ಆಗಾಗ ಹೇಳುತ್ತಿದ್ದರು. ನಾನು ಗರ್ಭಿಣಿಯಾಗುವುದಕ್ಕಿಂತ ಮುಂಚೆಯೂ ಅಭ್ಯಾಸ ಮಾಡುತ್ತಿದ್ದರಿಂದ ಯಾವುದೇ ತೊಂದರೆಯಾಗುವುದಿಲ್ಲ ಅನ್ನೋ ನಂಬಿಕೆ ಇತ್ತು. ಹೀಗಾಗಿ ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ ಅಂತಾ ಮಕೆನ್ನಾ ಹೇಳಿದ್ದಾರೆ.

suddiyaana