ಲಿಫ್ಟ್‌ನಲ್ಲಿ 9 ಮಂದಿ 1 ಗಂಟೆ ಲಾಕ್!‌ – ಅಗ್ನಿಶಾಮಕ ಸಿಬ್ಬಂದಿ ರೋಚಕ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಲಿಫ್ಟ್‌ನಲ್ಲಿ 9 ಮಂದಿ 1 ಗಂಟೆ ಲಾಕ್!‌ – ಅಗ್ನಿಶಾಮಕ ಸಿಬ್ಬಂದಿ ರೋಚಕ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಶಾಪಿಂಗ್‌ ಮಾಲ್‌ನ ಲಿಫ್ಟ್‌ನಲ್ಲಿ 9 ಮಂದಿ ಲಾಕ್‌ ಆಗಿರುವ ಘಟನೆ ನಡೆದಿದೆ. ಸುಮಾರು 1 ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಜನರು ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳದ ತಂಡ ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸಾರಿಗೆ ಮುಷ್ಕರ ನಡೆಸುವಂತಿಲ್ಲ! – ಸಾರಿಗೆ ನೌಕರರಿಗೆ  ಹೈಕೋರ್ಟ್‌ ಖಡಕ್‌ ಆದೇಶ

ಈ ಘಟನೆ ಶಿವಮೊಗ್ಗದ ವಿಶಾಲ್ ಮಾರ್ಟ್ ಕಟ್ಟಡದ ಲಿಫ್ಟ್‌ನಲ್ಲಿ ಒಂದು ಗಂಟೆ ಕಾಲ 9 ಮಂದಿ ಲಾಖ್‌ ಆಗಿದ್ದರು.  ತಾಂತ್ರಿಕ ಸಮಸ್ಯೆಯಿಂದ ಲಿಫ್ಟ್‌ ಹಠಾತ್‌ ಆಗಿ ಮೊದಲ ಮಹಡಿಯಲ್ಲಿ ನಿಂತಿತ್ತು. ಅದರಲ್ಲಿ ಭರತ್ (37), ಅನುಷಾ (35), ಅನೀಸ್ ಫಾತಿಮಾ (44), ಮುಸರತ್ (39), ಸೂಬಿಯಾ (31), ಮಿಜ್ಜಾ (09), ಬಿಲಾಲ್ (06), ಪ್ರಶಾಂತ್ (28) ಹಾಗೂ ಪ್ರವೀಣ್ ಕುಮಾರ್ (47) ಎಂಬವರು ಸಿಲುಕಿದ್ದರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಒಳಗೆ ಇದ್ದರು.  ಲಿಫ್ಟ್‌ನಲ್ಲಿ ಕೆಲ ನಾಗರಿಕರು ಭಯಭೀತರಾಗಿ ಕಿರುಚಾಡಿದ್ದರು. ಅಲ್ಲದೇ ಮಹಿಳೆಯೋರ್ವರ ಆರೋಗ್ಯದಲ್ಲಿ ಏರುಪೇರಾಗಿತ್ತು.

ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಓವರ್ ಲೋಡ್ ಆಗಿ ಲಿಫ್ಟ್ ನಿಂತಿದ್ದು ಗೊತ್ತಾಗಿದೆ. ತಕ್ಷಣವೇ ಡ್ರಿಲ್ಲರ್ ಯಂತ್ರ ಬಳಸಿ ಕಾರ್ಯಾಚರಣೆ ನಡೆಸಿ, ಒಳಗಡೆ ಸಿಲುಕಿದ್ದ 9 ಜನರನ್ನು ಸುರಕ್ಷಿತವಾಗಿ ಹೊರೆಗೆ ಕರೆತಂದಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿಯ ಹರಸಾಹಸದಿಂದ ಅನಾಹುತ ತಪ್ಪಿದೆ. ಲಿಫ್ಟ್​ನಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದವರು ಹೊರಗೆ ಬರುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಲಿಫ್ಟ್​ನಿಂದ ಹೊರ ಬಂದು ಕೆಲಕಾಲ ವಿಶ್ರಾಂತಿ ಪಡೆದು ಬಳಿಕ ಮನೆಗೆ ವಾಪಸ್ ತೆರಳಿದ್ದಾರೆ.

Shwetha M