IPLನಲ್ಲಿ 9 ಟೀಂ ಬದಲಿಸಿದ ಪಿಂಚ್ – ಆಸ್ಟ್ರೇಲಿಯನ್ ಬ್ಯಾಟರ್ ಜಂಪಿಂಗ್ ಸ್ಟಾರ್ ಆಗಿದ್ದೇಗೆ?

IPLನಲ್ಲಿ 9 ಟೀಂ ಬದಲಿಸಿದ ಪಿಂಚ್ – ಆಸ್ಟ್ರೇಲಿಯನ್ ಬ್ಯಾಟರ್ ಜಂಪಿಂಗ್ ಸ್ಟಾರ್ ಆಗಿದ್ದೇಗೆ?

ಐಪಿಎಲ್ ಇತಿಹಾಸವನ್ನ ಕೆದಕಿದ್ರೆ ಕಿಂಗ್ ವಿರಾಟ್ ಕೊಹ್ಲಿಯವ್ರ ಹಲವು ದಾಖಲೆಗಳನ್ನ ಯಾರಿಂದಲೂ ಬ್ರೇಕ್ ಮಾಡೋಕೆ ಆಗಿಲ್ಲ. ಅದ್ರಲ್ಲಿ ಮೇನ್ ಅಂದ್ರೆ ಒಮ್ಮೆಯೂ ಹರಾಜಿಗೆ ಬಾರದೆ ಬೇರೆ ಯಾವುದೇ ತಂಡಕ್ಕೂ ಹೋಗದೇ ಸತತ 19 ಸೀಸನ್‌ಗಳಲ್ಲಿ ಒಂದೇ ಫ್ರಾಂಚೈಸಿ ಪರ ಆಡಿದ ಏಕೈಕ ಆಟಗಾರ ಕಿಂಗ್ ವಿರಾಟ್ ಕೊಹ್ಲಿ. ಇಂಟ್ರೆಸ್ಟಿಂಗ್ ಅಂದ್ರೆ ಇರೋ ಹತ್ತು ಟೀಂಗಳ ಪೈಕಿ 9 ತಂಡಗಳನ್ನ ಬದಲಿಸಿರೋ ಪ್ಲೇಯರ್ ಕೂಡ ಐಪಿಎಲ್​ನಲ್ಲಿ ಇದ್ದಾರೆ.

ಇದನ್ನೂ ಓದಿ  : ಜಡ್ಡುಗೆ ಪಂತ್ ತಲ್ವಾರ್ ಪಂಚ್ – DSP ಅಟ್ಯಾಕ್.. ಲಂಕನ್ನರು ಅರೆಸ್ಟ್

19 ಸೀಸನ್​ಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿ 20ನೇ ಸೀಸನ್​ಗೆ ಸಜ್ಜಾಗ್ತಿದೆ ಐಪಿಎಲ್. ಈಗಾಗ್ಲೇ ಟ್ರೇಡ್ ವಿಂಡೋ ಓಪನ್ ಇದ್ದು ಕೆಲವ್ರ ಸ್ವ್ಯಾಪ್ ಡೀಲ್ ಕೂಡ ಆಗಿದೆ. ಇನ್ನೂ ಕೆಲವರ ಹೆಸರು ಮಾತುಕತೆ ಹಂತದಲ್ಲಿದೆ. ಇನ್ನೊಂದಷ್ಟು ತಂಡಗಳಲ್ಲಿ ಮಿನಿ ಆಕ್ಷನ್​ಗೆ ಯಾರನ್ನ ರಿಲೀಸ್ ಮಾಡ್ಬೇಕು ಯಾರನ್ನ ಟಾರ್ಗೆಟ್ ಮಾಡ್ಬೇಕು ಅನ್ನೋ ಲೆಕ್ಕಾಚಾರಗಳೂ ನಡೀತಿವೆ. ಈ ಪೈಕಿ ಒಂದಷ್ಟು ಆಟಗಾರರು ಒಂದೇ ತಂಡದ ಪರ ಆಡ್ತಾ ಐಕಾನಿಕ್ ಪ್ಲೇಯರ್ಸ್ ಥರ ಇದ್ರೆ ಈ ಪ್ಲೇಯರ್ ಮಾತ್ರ ಅವ್ರನ್ನ ಬಿಟ್ಟು ಇವ್ರನ್ನ ಬಿಟ್ಟು ಅವರ್ಯಾರು ಅನ್ನೋ ಥರ ತಂಡಗಳನ್ನ ಬದಲಿಸಿದ್ದಾರೆ ಌರನ್ ಪಿಂಚ್. ಹೌದು ಆಸ್ಟ್ರೇಲಿಯಾ ಮೂಲಕ ಪಿಂಚ್ ಐಪಿಎಲ್ ಇತಿಹಾಸದಲ್ಲಿ ಬರೋಬ್ಬರಿ 9 ತಂಡಗಳನ್ನ ಬದಲಿಸಿದ್ದಾರೆ.

ರಾಜಸ್ಥಾನ ಪರ ಶುರು.. ಕೊಲ್ಕತ್ತಾದಲ್ಲಿ ಜರ್ನಿ ಮುಗಿಸಿದ ಪಿಂಚ್!

ಆಸ್ಟ್ರೇಲಿಯಾದ ಮಾಜಿ ಸ್ಫೋಟಕ ಬ್ಯಾಟರ್ ಆ್ಯರನ್ ಫಿಂಚ್ ಐಪಿಎಲ್ ಇತಿಹಾಸದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ವಿಭಿನ್ನ ಫ್ರಾಂಚೈಸಿಗಳ ಪರ ಆಡಿದ ಆಟಗಾರನಾಗಿದ್ದಾರೆ. 2010ರಲ್ಲಿ ಐಪಿಎಲ್ ಕೆರಿಯರ್ ಸ್ಟಾರ್ಟ್ ಮಾಡಿದ ಪಿಂಚ್ 2022 ರವರೆಗೆ 9 ಟೀಮ್​ಗಳ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ರು. ಸೋ ಅವ್ರ ಜರ್ನಿ ಹೇಗಿತ್ತು ಅನ್ನೋದನ್ನ ನೋಡ್ತಾ ಹೋಗೋಣ.

ಜಂಪಿಂಗ್ ಸ್ಟಾರ್ ಪಿಂಚ್!

ಸಂಖ್ಯೆ                                ಐಪಿಎಲ್ ತಂಡ                       ಆಡಿದ ವರ್ಷಗಳು

1                                   ರಾಜಸ್ಥಾನ್ ರಾಯಲ್ಸ್                              2010

2                                  ಡೆಲ್ಲಿ ಡೆರ್‌ ಡೆವಿಲ್ಸ್                                2011-12

3                              ಪುಣೆ ವಾರಿಯರ್ಸ್ ಇಂಡಿಯಾ                   2013

4                                ಸನ್‌ ರೈಸರ್ಸ್ ಹೈದರಾಬಾದ್                  2014

5                                ಮುಂಬೈ ಇಂಡಿಯನ್ಸ್                              2015

6                                ಗುಜರಾತ್ ಲಯನ್ಸ್                                 2016-17

7                                ಕಿಂಗ್ಸ್ XI ಪಂಜಾಬ್                                     2018

8                           ರಾಯಲ್ ಚಾಲೆಂಜರ್ಸ್ ಬೆಂಗಳೂರು            2020

9                                 ಕೋಲ್ಕತ್ತಾ ನೈಟ್ ರೈಡರ್ಸ್                         2022

ಹೀಗೆ ಅವ್ರ ಜರ್ನಿಯಲ್ಲಿ 2 ಸಲ ಬಿಟ್ರೆ ಉಳಿದೆಲ್ಲಾ ವರ್ಷಗಳಲ್ಲೂ ತಂಡಗಳನ್ನ ಬದಲಾಯಿಸಿದ್ದಾರೆ. ಹೀಗಿದ್ರೂ ಟೋಟಲ್ಲಾಗಿ ಅವ್ರ ಐಪಿಎಲ್ ಕರಿಯರ್​ನಲ್ಲಿ ಆರನ್ ಫಿಂಚ್ 92 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 2,091 ರನ್ ಗಳಿಸಿದ್ದಾರೆ, ಇದರಲ್ಲಿ 88 ರನ್‌ಗಳ ಅತ್ಯುತ್ತಮ ಸ್ಕೋರ್ ಅವ್ರ ಹೆಸ್ರಲ್ಲಿದೆ. ಐಪಿಎಲ್ ಹೊರತುಪಡಿಸಿದ್ರೆ ಟಿ20 ಕ್ರಿಕೆಟ್‌ನಲ್ಲಿ ಒಳ್ಳೆ ನಂಬರ್ಸ್ ಇದೆ. 387 ಟಿ20 ಪಂದ್ಯಗಳಲ್ಲಿ 138.16 ಸ್ಟ್ರೈಕ್ ರೇಟ್‌ನಲ್ಲಿ 11,458 ರನ್ ಗಳಿಸಿದ್ದಾರೆ, 8 ಶತಕಗಳು ಮತ್ತು 77 ಅರ್ಧಶತಕಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ಪರ ಫಿಂಚ್ ಐದು ಟೆಸ್ಟ್, 146 ಏಕದಿನ ಮತ್ತು 103 ಟಿ20 ಪಂದ್ಯಗಳನ್ನು ಆಡಿದ್ದಾರೆ. 2018 ರಲ್ಲಿ ಜಿಂಬಾಬ್ವೆ ವಿರುದ್ಧ 76 ಬಾಲಲ್ಲಿ 172 ರನ್ ಗಳಿಸಿದರು. ಇದು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್‌ ಆಗಿ ಉಳಿದಿದೆ. ಹೀಗೆ ಪಿಂಚ್ ಐಪಿಎಲ್​ನಲ್ಲಿ ತಂಡಗಳನ್ನ ಬದಲಿಸೋದ್ರಲ್ಲಿ ಟಾಪ್-1ನಲ್ಲಿದ್ರೆ ಆ ನಂತ್ರದಲ್ಲಿ ಜಯದೇವ್ ಉನದ್ಕತ್ 8 ಫ್ರಾಂಚೈಸಿ, ಶಾರ್ದೂಲ್ ಠಾಕೂರ್, ಮನೀಶ್ ಪಾಂಡೆ, ಇಶಾಂತ್ ಶರ್ಮಾ ತಲಾ 7 ಫ್ರಾಂಚೈಸಿಗಳನ್ನ ಬದಲಿಸಿ ನಂತರದ ಸ್ಥಾನದಲ್ಲಿದ್ದಾರೆ. ಸೋ ಇದು ತಂಡಗಳನ್ನ ಬದಲಿಸೋರ ಲಿಸ್ಟ್ ಆದ್ರೆ ಅದೇ ಐಪಿಎಲ್​ನಲ್ಲಿ ಏಕೈಕ ತಂಡದ ಪರ ಆಡಿದ ಹಲವು ಕ್ರಿಕೆಟರ್ಸ್ ಕೂಡ ಇದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಬಿಟ್ಟು ಬೇರೆ ಯಾವುದೇ ಫ್ರಾಂಚೈಸಿಯ ಜೆರ್ಸಿ ತೊಟ್ಟಿಲ್ಲ. ಹಾಗೇ ಕೀರನ್ ಪೊಲಾರ್ಡ್ ಕೂಡ ಮುಂಬೈ ಬಿಟ್ಟು ಹೊರ ಬಂದಿಲ್ಲ. ಇನ್ನು ಸುನಿಲ್ ನರೈನ್ ಕೆಕೆಆರ್ ನಲ್ಲೇ ಉಳಿದಿದ್ದಾರೆ. ಇನ್ನು ನಮ್ಮ ಕಿಂಗ್ ವಿರಾಟ್ ಕೊಹ್ಲಿ 19 ಆವೃತ್ತಿಗಳಿಂದಲೂ ಆರ್​ಸಿಬಿಯ ಭಾಗವೇ ಆಗಿದ್ದಾರೆ. ಒಟ್ನಲ್ಲಿ ಕೆಲ ಆಟಗಾರರು ಒಂದೇ ತಂಡದಲ್ಲಿದ್ದು ಐಕಾನಿಕ್ ಪ್ಲೇಯರ್ಸ್ ಥರ ಇದ್ರೆ ಇನ್ನೊಂದಷ್ಟು ಆಟಗಾರರಿಗೆ ತಂಡಗಳ ಬದಲಾವಣೆ ಅನಿವಾರ್ಯ ಕೂಡ ಆಗಿರುತ್ತೆ. ಈ ಪೈಕಿ ಪಿಂಚ್ ನಂಬರ್ 1 ಪ್ಲೇಸ್​ನಲ್ಲಿ ಇದ್ದಾರೆ ಅಷ್ಟೇ.

Shantha Kumari