ಕೇರಳ ನಿಮಿಷ ಪ್ರಿಯಾಗೆ ಮರುಜನ್ಮ – ಸಂಧಾನ ಸಕ್ಸಸ್.. ಗಲ್ಲು ಕ್ಯಾನ್ಸಲ್
ಜೈಲಿಂದ ರಿಲೀಸ್, ಭಾರತಕ್ಕೆ ವಾಪಸ್?

ಭಾರತದ ರಾಜತಾಂತ್ರಿಕತೆಗೆ ಒಂದು ದೊಡ್ಡ ಜಯ ಸಿಕ್ಕಿದೆ.. ಯೆಮೆನ್ನಲ್ಲಿ ಮರಣ ದಂಡನೆ ಶಿಕ್ಷೆಗೆ ಒಳಗಾಗಿದ್ದ ನಿಮಿಷ ಪ್ರಿಯಾಗೆ ಮರು ಜನ್ಮ ಸಿಕ್ಕಿದೆ. ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಗಲ್ಲುಶಿಕ್ಷೆಯನ್ನು ರದ್ದು ಮಾಡಲಾಗಿದೆ ಅನ್ನೋ ಗುಡ್ನ್ಯೂಸ್ ಹೊರ ಬಿದ್ದಿದೆ. ಯೆಮೆನ್ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಗಲ್ಲುಶಿಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಕ್ರೈಸ್ತ ಧರ್ಮಪ್ರಚಾರಕ ಕೆ.ಎ ಪಾಲ್ ಹೇಳಿದ್ದಾರೆ.
ನಿಮಿಷಾ ಅವರ ಬಿಡುಗಡೆಗೆ, ಭಾರತ ಸರ್ಕಾರ ಇರಾನ್ ಸೇರಿದಂತೆ ಹಲವು ರಾಷ್ಟ್ರಗಳ ಜೊತೆ ಮಾತುಕತೆ ನಡೆಸಿತ್ತು. ಅವರ ಮರಣದಂಡನೆಯನ್ನು ಮುಂದೂಡಿದ ನಂತರ ಬಿಡುಗಡೆಗೆ ರಾಜತಾಂತ್ರಿಕ ಪ್ರಯತ್ನಗಳು ಚುರುಕಾಗಿದ್ದವು. ಯೆಮೆನ್ ಜೊತೆ ಉತ್ತಮ ಸಂಬಂಧ ಹೊಂದಿರುವ ರಾಷ್ಟ್ರಗಳ ಜೊತೆ ಮಾತುಕತೆ ನಡೆಸಿ ನಿಮಿಷಾಳ ಬಿಡುಗಡೆಗೆ ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು. ಇದೀಗ ಅದರ ಫಲವಾಗಿಯೋ ಪ್ರಿಯಾ ಮರಣದಂಡನೆೆಯಿಂದ ಪಾರಾಗಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಪಾಲ್ ಅವರು ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತಕ್ಕೆ ಬರಲಿದ್ದಾರೆ ನಿಮಿಷಾ ಪ್ರಿಯಾ
ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲು ಸಹಾಯ ಮಾಡಿದ ಎಲ್ಲ ನಾಯಕರಿಗೆ ನಾನು ಕೆ.ಎ ಪಾಲ್ ಧನ್ಯವಾದ ಹೇಳಿದ್ದಾರೆ. ಹಾಗೇ ದೇವರ ಆಶೀರ್ವಾದದಿಂದ ನಿಮಿಷಾ ಶೀಘ್ರದಲ್ಲೇ ಬಿಡುಗಡೆಯಾಗಿ ಭಾರತಕ್ಕೆ ಹಿಂತಿರುಗಲಿದ್ದಾರೆ ಎಂದು ತಿಳಿಸಿದ್ದಾರೆ. ನಿಮಿಷಾ ಪ್ರಿಯಾ ಅವರನ್ನು ಕರೆದುಕೊಂಡು ಬರೋಕೆ ಭಾರತ ಈಗಾಗಲೇ ರಾಜತಾಂತ್ರಿಕರನ್ನು ಕಳುಹಿಸಿದೆ.
ಅಂದಹಾಗೇ.. ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಪ್ರಿಯಾ, ತನ್ನ ನರ್ಸಿಂಗ್ ತರಬೇತಿ ಪೂರ್ಣಗೊಳಿಸಿದ ಬಳಿಕ 2011ರಲ್ಲಿ ಯೆಮೆನ್ಗೆ ಹೋಗ್ತಾರೆ.. ಇಲ್ಲಿ ತುಂಬಾ ಬಡತನ ಇದ್ರಿಂದ ಅಲ್ಲಿಗೆ ಹೋಗಿ ಹೊಸ ಬದುಕು ಕಟ್ಟಿಕೊಳ್ಳುವುದ್ದಕ್ಕೆ ಮುಂದಾಗ್ತಾರೆ.. ಯೆಮೆನ್ ಹಲವು ಆಸ್ಪತ್ರೆಗಳಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದ ಪ್ರಿಯಾ, ಒಂದಷ್ಟು ಅನುಭವ ಪಡೆದ ನಂತರ ತನ್ನದೇ ಹೊಸ ಕ್ಲಿನಿಕ್ ತೆರಯುವ ಹಂಬಲ ಹೊಂದಿದ್ದಳು. ಆದ್ರೆ ಇಲ್ಲಿಂದ ಹೋದ ಪ್ರಿಯಾಗೆ ಆ ದೇಶದ ಪೌರತ್ವ ಇಲ್ಲದೇ ಯಾವುದೇ ಬ್ಯುಸನೆಸ್ ಮಾಡೋಕೆ ಆಗಲ್ಲ.. ಹೀಗಾಗಿ ನಿಮಿಷಾ ಅಲ್ಲಿ ತನಗೆ ಪರಿಚಯವಿದ್ದ ತಲಾಲ್ ಅಬೋ ಮಹ್ದಿ ಮತ್ತು ಆಕೆಯ ಪತ್ನಿಯನ್ನು ಸಂಪರ್ಕ ಮಾಡ್ತಾಳೆ. 2014ರಲ್ಲಿ ಮಹಿ ಎಂಬಾತ ಯೆಮನ್ನಲ್ಲಿ ಪ್ರಿಯಾಗೆ ಕ್ಲಿನಿಕ್ ಪ್ರಾರಂಭಿಸಲು ಸಹಾಯ ಮಾಡುವುದಾಗಿ ಭರವಸೆ ಕೊಟ್ಟ. ಇಲ್ಲಿಂದಲೇ ಆಕೆಯ ಹಣೆಬರಹ ಕೆಟ್ಟು ಹೋಗುತ್ತೆ.. Vis Flow..
ಕೊಲೆ ಹಂತಕ್ಕೆ ಹೋಗಿದ್ದೇಕೆ?
ಮಹ್ದಿ ಸಹಾಯ ಮಾಡುವ ನೆಪದಲ್ಲಿ ಪ್ರಿಯಾಳನ್ನು ದುರಪಯೋಗ ಪಡಿಸಿಕೊಳ್ಳಲು ಮುಂದಾಗ್ತಾನೆ. ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಪ್ರಿಯಾಗೆ ಒತ್ತಾಯಿಸಿದ್ದ. ವಿಪರೀತ ಹಿಂಸೆಯ ಬೆನ್ನಲ್ಲೇ ಆಕೆ ಮಹ್ದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಂಧಿತನಾಗಿದ್ದ ಮಹ್ದಿ 2016ರಲ್ಲಿ ಜೈಲಿನಿಂದ ಹೊರಬಂದ. 2017ರಲ್ಲಿ ಆಕೆಗೆ ಮತ್ತಷ್ಟು ಹಿಂಸೆ ಕೊಡೋಕೆ ಮುಂದಾಗ್ತಾನಂತೆ. ಮಹ್ದಿ, ಪ್ರಿಯಾ ಬಳಿಯಿದ್ದ ಪಾಸ್ಪೋರ್ಟ್ ಅನ್ನು ಕಸಿದುಕೊಂಡಿದ್ದ. ಇದರಿಂದ ಕಂಗಾಲಾಗಿದ್ದ ಪ್ರಿಯಾ, ಆತನಿಂದ ಪಾಸ್ಪೋರ್ಟ್ ಪಡೆದು ಭಾರತಕ್ಕೆ ಹೋಗೋಕೆ ಪ್ಲ್ಯಾನ್ ಮಾಡ್ತಾಳೆ.. ಹೇಗಾದ್ರೂ ಇವನಿಂದ ಮುಕ್ತಿ ಸಿಕ್ಕಿದ್ರೆ ಸಾಕು ಅಂತ ಪ್ರಿಯಾ, ಮಜ್ಜಿಗೆ ನಿದ್ರೆ ಬರೋ ಔಷದಿ ನಿಡ್ತಾಳೆ.. ಇದು ಓವರ್ಡೋಸ್ ಆಗಿ ಮಹ್ದಿ ಸತ್ತು ಹೋಗ್ತಾನೆ.
ಕೊಲೆಗೈದ ಬಳಿಕ ಹೇಗೋ ದೇಹವನ್ನು ತನ್ನ ಸ್ನೇಹಿತೆಯೊಂದಿಗೆ ವಿಲೇವಾರಿ ಮಾಡಿದ್ದ ಪ್ರಿಯಾ, ಕಡೆಗೂ ಕೊಲೆ ಆರೋಪದಡಿ ಸಿಕ್ಕಿಬಿದ್ದಳು. ಈ ವೇಳೆ ಆಕೆಯ ಕೈವಾಡ ಇರುವುದು ಗೊತ್ತಾಗಿ ಯೆಮೆನ್ ಪೊಲೀಸರು ಆಕೆಯನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಕೋರ್ಟ್ ಪ್ರಿಯಾಳ ಸ್ನೇಹಿತೆಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಪ್ರಿಯಾಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. ಇದೇ ಜುಲೈ 16ರಂದು ಮರಣದಂಡನೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಅದು ಭಾರತದ ಮಧ್ಯಸ್ಥಿಕೆಯಲ್ಲಿ ಮುಂದೂಡಿಕೆಯಾಗಿತ್ತು.. ಅಲ್ಲದೇ ಮಹ್ದಿ ಕುಟುಂಬ ಬ್ಲಡ್ ಮನಿಯನ್ನೂ ನಿರಾಕರಿಸಿದ ಮೇಲೆ ಪ್ರಿಯಾರನ್ನ ಕಾಪಾಡೋದು ಕಷ್ಟ ಎನ್ನಲಾಗಿತ್ತು. ಆದ್ರೆ ಈಗ ನಿಮಿಷಾ ಪ್ರಿಯಾ ಮರಣದಂಡೆಯನ್ನೇ ರದ್ದು ಮಾಡಿದ್ದು , ಮರುಜನ್ಮ ಸಿಕ್ಕಿದೆ. ಇದು ಭಾರತಕ್ಕೆ ಸಿಕ್ಕ ದೊಡ್ಡ ರಾಜತಾಂತ್ರಿಕ ಜಯ ಅಂತಾನೇ ಹೇಳಬಹುದು..

ನೋಡಿರಿ

