ಕ್ಷಮೆ ಇಲ್ಲ, ಗಲ್ಲು ಶಿಕ್ಷೆ ಜಾರಿಗೊಳಿಸಬೇಕು – ನರ್ಸ್‌ ನಿಮಿಷಾ ಪ್ರಿಯಾ ಮರಣದಂಡನೆಗೆ ಪಟ್ಟು

ಕ್ಷಮೆ ಇಲ್ಲ, ಗಲ್ಲು ಶಿಕ್ಷೆ ಜಾರಿಗೊಳಿಸಬೇಕು  – ನರ್ಸ್‌ ನಿಮಿಷಾ ಪ್ರಿಯಾ ಮರಣದಂಡನೆಗೆ ಪಟ್ಟು

ಯೆಮೆನ್‌ನಲ್ಲಿ ಬುಧವಾರ ಭಾರತೀಯ ನರ್ಸ್‌ ನಿಮಿಷಾ ಪ್ರಿಯಾ ಅವರಿಗೆ ಆಗಬೇಕಿದ್ದ ಗಲ್ಲು ಶಿಕ್ಷೆ ತಪ್ಪಿದೆ.  ಪ್ರಭಾವಿ ಸುನ್ನಿ ಮುಸ್ಲಿಂ ಧರ್ಮಗುರು ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯ ಪ್ರವೇಶದ ನಂತರ ಶಿಕ್ಷೆ ಮುಂದೂಡಲಾಗಿದೆ. ಹೀಗಾಗಿ ಸದ್ಯಕ್ಕೆ ನಿಮಿಷಾ ಪ್ರಿಯಾ ಅವರು ಗಲ್ಲು ಶಿಕ್ಷೆಯಿಂದ ಬಚಾವ್ ಆಗಿದ್ದಾರೆ. ಆದ್ರೂ ಈ ಕೇಸ್ ದಿನದಿನಕ್ಕೂ ಟ್ವಿಸ್ಟ್ ಪಡೆಯುತ್ತಿದೆ.

ಇದನ್ನೂ ಓದಿ: ಸಾವಿರಾರು ಅಡಿ ಎತ್ತರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ!

ಕೇರಳದಲ್ಲಿರುವ ನರ್ಸ್‌ ನಿಮಿಷಾ ಅವರ ಕುಟುಂಬ ದೊಡ್ಡ ಮೊತ್ತದ ಪರಿಹಾರ ನೀಡಲೂ ಸಿದ್ಧರಿದ್ದರೂ, ಯೆಮೆನ್‌ನಲ್ಲಿರುವ ಮೃತ ವ್ಯಕ್ತಿ ತಲಾಲ್ ಅಬ್ದೋ ಮಹ್ದಿ ಅವರ ಸಹೋದರ ಮಾತ್ರ ಬ್ಲಡ್ ಮನಿ  ಸ್ವೀಕರಿಸಲು ಒಪ್ಪಿಕೊಂಡಿಲ್ಲ.

ಕಿಸಾಸ್‌ ಪ್ರಕಾರವೇ ದೇವರ ಕಾನೂನನ್ನು ಕಟ್ಟುನಿಟ್ಟಾಗಿ ಅನ್ವಯಿಸಬೇಕು ಎಂದು ಮೃತನ ಕುಟುಂಬ ಪಟ್ಟು ಹಿಡಿದಿದೆ. ಇದು ನಿಮಿಷಾ ಪ್ರಿಯಾ, ಅವರ ಕುಟುಂಬ ಮತ್ತು ಅವರ ಜೀವವನ್ನು ಉಳಿಸಲು ಪ್ರಯತ್ನಿಸುತ್ತಿರುವ ಒಳ್ಳೆಯ ಹೃದಯದ ಜನರಿಗೆ ತೀವ್ರ ಹಿನ್ನಡೆಯಾಗಿದೆ.

ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬವು ಬ್ಲಡ್ ಮನಿ ಸ್ವೀಕರಿಸಲು ನಿರಾಕರಿಸಿದ್ದು, ಆರೋಪಿಗೆ ಕ್ಷಮೆ ಇಲ್ಲ. ಗಲ್ಲು ಶಿಕ್ಷೆ ಜಾರಿಗೊಳಿಸಬೇಕು ಎಂದು ಪಟ್ಟು ಹಿಡಿದಿದೆ ಎಂಬ ಮಾಹಿತಿ ಬಂದಿದೆ. ಗಲ್ಲು ಶಿಕ್ಷೆಗೆ ಬದಲಾಗಿ ಕ್ಷಮಾದಾನಕ್ಕೆ ಬ್ಲಡ್ ಮನಿ ಮೂಲಕ, ಕೊಲ್ಲಲ್ಪಟ್ಟ ವ್ಯಕ್ತಿಯ ಕುಟುಂಬಕ್ಕೆ ಹಣವನ್ನು ಪಾವತಿಸುವ ಅಂಶ ಷರಿಯಾ ಕಾನೂನಿನಲ್ಲಿದೆ. ಇದನ್ನು, ಯೆಮೆನ್ , ಸೌದಿ ಅರೆಬಿಯಾ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅನುಸರಿಸಲಾಗುತ್ತದೆ.

 

Kishor KV