ಸಿಪಿವೈ ಅಖಾಡದಲ್ಲಿ ಅಭಿಮನ್ಯು ನಿಖಿಲ್ – ಗೊಂಬೆಯಾಟಕ್ಕೆ ನಿಖಿಲ್ ಭವಿಷ್ಯ ಬಲಿ?
3ನೇ ಅಗ್ನಿ ಪರೀಕ್ಷೆ ಗೆಲ್ತಾರಾ ಜಾಗ್ವಾರ್?   

ಸಿಪಿವೈ ಅಖಾಡದಲ್ಲಿ ಅಭಿಮನ್ಯು ನಿಖಿಲ್ – ಗೊಂಬೆಯಾಟಕ್ಕೆ ನಿಖಿಲ್ ಭವಿಷ್ಯ ಬಲಿ?3ನೇ ಅಗ್ನಿ ಪರೀಕ್ಷೆ ಗೆಲ್ತಾರಾ ಜಾಗ್ವಾರ್?   

ರಾಜ್ಯ ರಾಜಕೀಯದಲ್ಲಿ ಉಪಚುನಾವಣೆಯ ಕಣ ರಂಗೇರಿದ್ದು, ಕಾದ ಕೆಂಡತಾಗಿದೆ. ಮೂರು ಕ್ಷೇತ್ರಗಳ ನಡೆಯುತ್ತಿರುವ ಉಪಚುನಾವಣೆ ದೊಡ್ಡ ಯುದ್ಧದಂತೆ ನಡೆಯುತ್ತಿದೆ. ಕಾಂಗ್ರೆಸ್‌  ಹಾಗೂ ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಬಿಗ್ ಫೈಟ್‌ ನಡೆಯುತ್ತದೆ. ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಕ್ಷೇತ್ರಕ್ಕೆ  ಸಾಕಷ್ಟು ಸಕರ್ಸ್‌ ಮಾಡಿ ಟಿಕೆಟ್ ಪೈನಲ್ ಮಾಡಲಾಗಿದೆ. ಅದರಲ್ಲೂ ಚನ್ನಪಟ್ಟಣದಲ್ಲಿ ಯೋಗೇಶ್ವರ್‌   ಕಾಂಗ್ರೆಸ್ ಸೇರಿದ್ದು, ಮೈತ್ರಿಗೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ. ಸಿಪಿ ಯೋಗೇಶ್ವರ್‌ ಎದುರು ಯಾರನ್ನ ಕಣಕ್ಕೆ ಇಳಿಸೋದು ಅನ್ನೋದು ಮೈತ್ರಿ ಪಕ್ಷಗಳಿಗೆ ದೊಡ್ಡ ನೋವು ಆಗಿತ್ತು. ಅಂತೂ ಇಂತೂ 3 ಕ್ಷೇತ್ರಗಳಿಗೂ ಟಿಕೆಟ್ ಫೈನಲ್ ಆಗಿದೆ.

ಇದನ್ನೂ ಓದಿ: ರಾಹುಕಾಟಕ್ಕೆ ಬೆಲೆ ತೆತ್ತ ಕನ್ನಡಿಗ – NZ ಫೈಟ್.. KL ಗೆ ಗೇಟ್ ಪಾಸ್

ರಾಜ್ಯರಾಜಕೀಯದಲ್ಲಿ ಈಗ ಸುದ್ದು ಮಾಡ್ತಾ ಇರೋ ವಿಷ್ಯ ಅಂದ್ರೆ ಅದು 3 ಕ್ಷೇತ್ರಗಳ ಬೈ ಎಲೆಕ್ಷನ್.. ಅದರಲ್ಲೂ ಸಂಡೂರು ಮತ್ತು ಶಿಗ್ಗಾವಿಗಿಂತ ಸಾಕಷ್ಟು ಕುತೂಹಲ ಮೂಡಿಸಿದ ಕ್ಷೇತ್ರ ಅಂದ್ರೆ ಅದು ಚನ್ನಪಟ್ಟಣ. ಬಿಜೆಪಿಯಲ್ಲಿದ್ದ ಸಿಪಿ ಯೋಗೇಶ್ವರ್‌ಕಾಂಗ್ರೆಸ್‌ ಸೇರಿ, ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇದು ಮೈತ್ರಿ ಪಕ್ಷಗಳಿಗೆ ದೊಡ್ಡ ಹೊಡೆತೆ ನೀಡಿದೆ ಅಂತಾನೆ ಚರ್ಚೆ ಆಗುತ್ತಿದೆ. ಯಾಕಂದ್ರೆ ಚನ್ನಪಟ್ಟಣದಲ್ಲಿ ಸಿಪಿವೈಗೆ ಜನ ಬೆಂಬಲದ ಜೊತೆ ಕ್ಷೇತ್ರದ ಹಿಡಿತವಿದೆ. ಬಿಜೆಪಿಯಿಂದ ಟಿಕೆಟ್ ನೀಡಿದ್ರೆ ಅವರೇ ಗೆಲ್ಲುತ್ತಿದ್ದರು ಅನ್ನೋ ಮಾತು ಕೇಳಿ ಬರ್ತಿದೆ. ಅಷ್ಟರಲ್ಲೇ ಡಿಕೆಶಿ ಪಕ್ಕಾ ಪ್ಲ್ಯಾನ್ ಮಾಡಿ ಸಿಪಿ ಯೋಗೇಶ್ವರ್‌ನನ್ನ ಕೈ ವಶ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆಶಿವಕುಮಾರ್‌, ಡಿಕೆ ಸುರೇಶ್ ಸೇರಿದಂತೆ ಕಾಂಗ್ರೆಸ್ ನಾಯಕರ ನೇತೃತ್ವನದಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ನಾಮ ಪತ್ರ ಸಲ್ಲಿಸಿದ್ದಾರೆ.

ಸೈನಿಕನನ್ನ ಮಣಿಸಲು ನಿಖಿಲ್ ಕುಮಾರಸ್ವಾಮಿ ಅಖಾಡಕ್ಕೆ

ಚನ್ನಪಟ್ಟಣ ಉಪಚುನಾವಣೆ ರಾಜ್ಯ ರಾಜಕೀಯದಲ್ಲಿ ಹೈವೋಲ್ಟೇಜ್ ಎಲೆಕ್ಷನ್‌ಗೆ ಸಾಕ್ಷಿಯಾಗಿತ್ತಿದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ ಯೋಗೇಶ್ವರ್ ಅವರು ಸ್ಪರ್ಧಿಸಿದ ದಿನವೇ ಜೆಡಿಎಸ್ ತನ್ನ ದಾಳ ಉರುಳಿಸಿದೆ. ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್‌ ಅವರಿಗೆ ಎದುರಾಳಿ ಯಾರು ಅನ್ನೋ ಗೊಂದಲಕ್ಕೆ ತೆರೆ ಬಿದ್ದಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರೇ ಕಣಕ್ಕಿಳಿಯುವುದು ಬಹುತೇಕ ಫಿಕ್ಸ್ ಆಗಿದೆ. ಜೆಡಿಎಸ್ ವರಿಷ್ಠರು ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಖಿಲ್ ಅವರನ್ನ ಮತ್ತೊಂದು ಅಗ್ನಿಪರೀಕ್ಷೆಯ ಕಣಕ್ಕಿಳಿಸಲು ರೆಡಿಯಾಗಿದ್ದಾರೆ. ನಿಖಲ್ ಅಭ್ಯರ್ಥಿಯಾಗಬೇಕೆಂದು ಜೆಡಿಎಸ್‌ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಹಾಗೇ ಬಿಜೆಪಿ ಹೈಕಮಾಂಡ್‌ಗೆ ಕೂಡ ನಿಖಿಲ್ ಸ್ಪರ್ಧೆಗೆ ಒಲುವು ತೋರಿಸಿದೆ. ಯೋಗೇಶ್ವರ್‌ಗೆ ಪ್ರಭಾಲ ಪೈಪೋಟಿ ಕೂಡ ಆಗಲಿದ್ದಾರೆ ಅನ್ನೋ ಲೆಕ್ಕಚಾರ ಹಾಕಿ ನಿಖಿಲ್‌ ಅವರನ್ನ ಚನ್ನಪಟ್ಟಣ ಅಖಾಡಕ್ಕೆ ಇಳಿದಿದ್ದಾರೆ. ಒಂದು ವೇಳೆ ಈ ಚುನಾವಣೆಯಲ್ಲಿ ನಿಖಿಲ್ ಗೆದ್ರೆ ಮೊದಲ ಗೆಲುವು ಆಗುತ್ತೆ. ಒಂದು ವೇಳೆ ಸೋತ್ರೆ 3ನೇ ಸೋಲು ಆಗಲಿದೆ.. ಹೀಗಾಗಿ ಈ ಚುನಾವಣೆ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನಿರ್ಧರಿಸಲಿದೆ.

ಸಂಡೂರಿನಲ್ಲಿ ಅನ್ನಪೂರ್ಣ ನಾಮಪತ್ರ ಸಲ್ಲಿಕೆ

ನಿರೀಕ್ಷೆಯಂತೆ ಸಂಡೂರು ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್‌ ಟಿಕೆಟ್‌ನ ಸಂಸದ ಇ. ತುಕಾರಾಂ ಪತ್ನಿ ಅನ್ನಪೂರ್ಣಗೆ ನೀಡಲಾಗಿದೆ. ಈ ಮೂಲಕ ವಿಧಾನಸಭೆ. ಲೋಕಸಭೆಯಲ್ಲಿ ಗೆದ್ದುಬೀಗಿದ್ದ ತುಕಾರಾಂ ಕುಟುಂಬಕ್ಕೆ ಕಾಂಗ್ರೆಸ್ ಮಣೆ ಹಾಕಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ಧ ಅನ್ನಪೂರ್ಣ ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ. ಸಂಡೂರು ಅಭ್ಯರ್ಥಿಯಾಗಿ ಅನ್ನಪೂರ್ಣ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಚನ್ನಪಟ್ಟಣ, ಸಂಡೂರು ಅಭ್ಯರ್ಥಿಯನ್ನ ಘೋಷಣೆ ಮಾಡಿರೋ ಕಾಂಗ್ರೆಸ್‌ ಶಿಗ್ಗಾಂವಿ ಕ್ಷೇತ್ರವನ್ನ ಬಾಕಿ ಉಳಿಸಿಕೊಂಡಿದೆ.  ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಒಂದ್ಕಡೆ ಮುಸ್ಲಿಂ ಸಮುದಾಯ, ಮತ್ತೊಂದೆಡೆ ಲಿಂಗಾಯತ, ಈ ಮಧ್ಯೆ ಕುರುಬ ಸಮುದಾಯವೂ ಟಿಕೆಟ್ ಬೇಡಿಕೆ ಇಟ್ಟಿದೆ. ಆದ್ರೆ ಬಿಜೆಪಿಯಿಂದ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

Shwetha M