ನಿಖಿಲ್ ಕುಮಾರಸ್ವಾಮಿಗೆ ಸೋಲಿನ ಸರದಾರ ಹಣೆಪಟ್ಟಿ – ಮೈತ್ರಿ ಚಕ್ರವ್ಯೂಹ ಭೇದಿಸಿದ ಸಿ.ಪಿ ಯೋಗೇಶ್ವರ್

ನಿಖಿಲ್ ಕುಮಾರಸ್ವಾಮಿಗೆ ಸೋಲಿನ ಸರದಾರ ಹಣೆಪಟ್ಟಿ – ಮೈತ್ರಿ ಚಕ್ರವ್ಯೂಹ ಭೇದಿಸಿದ ಸಿ.ಪಿ ಯೋಗೇಶ್ವರ್

ಎಲ್ಲರ ಕಣ್ಣು ನೆಟ್ಟಿದ್ದು ಚನ್ನಪಟ್ಟಣ ಬೈ ಎಲೆಕ್ಷನ್ ಕ್ಷೇತ್ರದತ್ತ.. ಯಾರು ಗೆಲ್ತಾರೆ..? ಯಾರು ಸೋಲ್ತಾರೆ? ಅನ್ನೋ ಕುತೂಹಲ ಅಭ್ಯರ್ಥಿಗಳ ಜೊತೆ ರಾಜ್ಯದ ಜನರಿಗೂ ಹೆಚ್ಚಾಗಿತ್ತು.. ಅಷ್ಟರ ಮಟ್ಟಿಗೆ ಈ ಬೈ ಎಲೆಕ್ಷನ್ ರಿಸಲ್ಟ್ ರಾಜ್ಯಾ ರಾಜಕೀಯದಲ್ಲಿ ಹಲ್‌ಚಲ್ ಎಬ್ಬಿಸಿತ್ತು.. ಕೊನೆಗೂ  ಸೈನಿಕ ಹಾಗೂ ಜಾಗ್ವಾರ್ ಜಿದ್ದಾಜಿದ್ದಿನ ಹೋರಾಟದಲ್ಲಿ  ಸಿಪಿ ಯೋಗೇಶ್ವರ್‌  ಗೆದ್ದು ಬೀಗಿದ್ದಾರೆ.. ನಿಖಿಲ್‌ಗೆ ಸತತ 3 ನೇ ಸೋಲಾಗಿದ್ದು,  ಮತ ಏಣಿಕೆ ಆರಂಭ ಆದಾಗಿನಿಂದ ಹಾವು ಏಣಿಯಂತಿದ್ದ ರಿಸಲ್ಟ್‌ನಲ್ಲಿ ಕೊನೆಗೆ ಚನ್ನಪಟ್ಟಣ ಕ್ಷೇತ್ರ ಯೋಗೇಶ್ವರ್‌  ವಶವಾಗಿದೆ.. ಯಾರು ಕೂಡ ಊಹೇ ಮಾಡಿಕೊಳ್ಳದ ರೀತಿಯಲ್ಲಿ ಸೈನಿಕ ಗೆಲುವಿನ ಕೇಕೆ ಹಾಕಿದ್ದಾರೆ.  ಚನ್ನಪಟ್ಟಣ ಉಪಚುನಾವಣೆ ಮತ ಎಣಿಕೆ ಮುಕ್ತಾಯವಾಗಿದ್ದು, ಯೋಗೇಶ್ವರ್ 25,515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು – ಇ ಅನ್ನಪೂರ್ಣ ಭರ್ಜರಿ ಜಯಭೇರಿ

ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಇಳಿ ವಯಸ್ಸಿನಲ್ಲಿ ಬಂದು ಮೊಮ್ಮಗನ ಪರ ಮತಯಾಚಿಸಿದ್ದರು. ದೇವೇಗೌಡರ ನೀರಾವರಿ ಕೊಡುಗೆ, ಕೇಂದ್ರ ಸಚಿವ ಕುಮಾರಸ್ವಾಮಿರವರ ಸಾಧನೆ ಮುಂದಿಟ್ಟು ಜೆಡಿಎಸ್ ಮತಯಾಚಿಸಿತು. ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಜೆಡಿಎಸ್ ಪರ ಪ್ರಚಾರ ನಡೆಸಿದರು. ಆದ್ರೆ ಇದ್ಯಾವುದು ಡಿಕೆ ಬದ್ರರ್ಸ್‌ ಮಂದೆ ವರ್ಕೌಟ್ ಆಗಿಲ್ಲ. ಡಿಸಿಎಂ ಡಿಕೆಶಿ  ತಂತ್ರಗಾರಿಕೆ, ಯೋಗೇಶ್ವರ್ ವೈಯಕ್ತಿಕ ವರ್ಚಸ್ಸು, ಸಿಂಪತಿಯೂ ಕೆಲಸ ಮಾಡಿದೆ. ಹಾಗೇ ನಿಖಿಲ್ ಕೊನೆ ಕ್ಷಣದ ಆಯ್ಕೆ?, ಪ್ರಜ್ವಲ್ ವಿಚಾರ, ಬಿಜೆಪಿ ಅಷ್ಟಾಗಿ ಸಾಥ್ ನೀಡದೇ ಇರೋದು ನಿಖಿಲ್ ಸೋಲಿಗೆ ಕಾರಣವಾಗಿದೆ ಎನ್ನಲಾಗ್ತಿದೆ.

ಚನ್ನಪಟ್ಟಣದಲ್ಲಿ ಎರಡು ಬಾರಿ ಸೋತಿರುವ ಅನುಕಂಪ ಯೋಗೇಶ್ವರ್​ ಕೈ ಹಿಡಿದಿರಬಹುದು. ಇಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಯೋಗೇಶ್ವರ್ ಅವರಿಗೆ ಅವರದ್ದೇ ಆದ ವೈಯಕ್ತಿಕ ವರ್ಚಸ್ಸು ಇದೆ. ಯೋಗೇಶ್ವರ್ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿರುವುದರಿಂದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ಲಸ್ ಆಗುರಬಹುದು. ಜೊತೆ ಡಿಕೆ ಸಹೋದರರು ಯೋಗೇಶ್ವರ್​ ಬೆನ್ನಿಗೆ ನಿಂತಿರುವುದು ಕೂಡ ನೆರವಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಒಗ್ಗಟ್ಟು ಪ್ರದರ್ಶನ ಸೇರಿ ಹಲವು ವಿಚಾರಗಳು ಸಿಪಿವೈಗೆ ವರವಾಗಿ ಪರಿಣಮಿಸಿದವು.

suddiyaana