‘ಕಾಂಗ್ರೆಸ್ ನವರ ಮಧ್ಯರಾತ್ರಿ ಮ್ಯಾಜಿಕ್ ನಿಂದ ನನಗೆ ಸೋಲು’ – ನಿಖಿಲ್ ಕುಮಾರಸ್ವಾಮಿ ಹೀಗೆಂದಿದ್ದೇಕೆ?

‘ಕಾಂಗ್ರೆಸ್ ನವರ ಮಧ್ಯರಾತ್ರಿ ಮ್ಯಾಜಿಕ್ ನಿಂದ ನನಗೆ ಸೋಲು’ – ನಿಖಿಲ್ ಕುಮಾರಸ್ವಾಮಿ ಹೀಗೆಂದಿದ್ದೇಕೆ?

ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದ ನಿಖಿಲ್ ಕುಮಾರಸ್ವಾಮಿ ವಿಧಾನಸಭಾ ಚುನಾವಣೆಯಲ್ಲಾದ್ರೂ ಜನ ನನ್ನ ಕೈ ಹಿಡಿಯಬಹುದು ಅನ್ಕೊಂಡಿದ್ರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ರು. ಆದರೆ ಈ ಬಾರಿಯೂ ಕೂಡ ಜನ ಕೈ ಹಿಡಿಯಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲೊಪ್ಪಿಕೊಂಡಿದ್ದಾರೆ. ಸೋ ಸೋಲಿಗೆ ಕಾಂಗ್ರೆಸ್ ನವರ ಮಧ್ಯರಾತ್ರಿ ಮ್ಯಾಜಿಕ್ ಕಾರಣ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಪುತ್ತೂರಿನಲ್ಲಿ ಪೊಲೀಸರ ಅಮಾನುಷ ವರ್ತನೆ – ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವೆಂದ ಅಲೋಕ್ ಕುಮಾರ್!

ಕಾಂಗ್ರೆಸ್‌ನವರು (Congress) ಮಧ್ಯರಾತ್ರಿ 3 ಸಾವಿರ ರೂ. ಕೂಪನ್‌ ಕಾರ್ಡ್‌ ಕೊಟ್ಟು ಆರ್ಥಿಕವಾಗಿ ಹಿಂದುಳಿದವರ ದಾರಿ ತಪ್ಪಿಸಿ ಮತ ಪಡೆದಿದ್ದಾರೆ. ಈ ಮೂಲಕ ನನ್ನನ್ನ ಸೋಲಿಸಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಬೇಸರ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣದಲ್ಲಿ (Channapatna Constituency) ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ನಿಖಿಲ್, ನಮ್ಮಪ್ಪ ನಿಮ್ಮನ್ನ ನಂಬಿ ಸ್ಪರ್ಧೆ ಮಾಡಿದರು ನೀವು ಕೈಹಿಡಿದ್ರಿ, ಪಕ್ಷ ಅಧಿಕಾರಕ್ಕೆ ತರಲು ಪಂಚರತ್ನ ಯಾತ್ರೆ ಮಾಡಿದರು. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನ ಅವರನ್ನು ಗೆಲ್ಲಿಸಿದರು‌. ಯುವಕರು, ರೈತರು ಎಲ್ಲರೂ ಕುಮಾರಣ್ಣನ ಕೈಹಿಡಿದಿದ್ದಾರೆ. ಕುಮಾರಣ್ಣನ (HD Kumaraswamy) ಮೇಲೆ ಜನರ ಪ್ರೀತಿ ಕಂಡು ನಾನೇ ಬೆರಗಾದೆ ಎಂದಿದ್ದಾರೆ.

ಇದೇ ವೇಳೆ ಇಡೀ ರಾಮನಗರ ಜಿಲ್ಲೆಯಲ್ಲಿ ಅತಿಹೆಚ್ಚು ನಿಷ್ಠಾವಂತ ಕಾರ್ಯಕರ್ತರು ಇರುವುದು ಚನ್ನಪಟ್ಟಣದಲ್ಲೇ. ನಾನು ಸೋತಿರಬಹುದು, ಆದರೆ ರಾಮನಗರದ ಜನ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಅದು ವರ್ಣಿಸಲು ಸಾಧ್ಯವಿಲ್ಲ. ಎಂದಿಗೂ ನಾನು ಚಿರಋಣಿ. ನಿಮ್ಮ ಜೊತೆಯಲ್ಲಿ ನಾನು ನನ್ನ ಕುಟುಂಬ ಇರುತ್ತದೆ. ಸೋತ ಮಾತ್ರಕ್ಕೆ ಮನೆಯಲ್ಲಿ ಕೂರುವುದಿಲ್ಲ‌. ನಿಮ್ಮ ಜತೆ ಇರುತ್ತೇನೆ. ಸೋಲು-ಗೆಲುವು ನಮ್ಮ ಕುಟುಂಬಕ್ಕೆ ಹೊಸತಲ್ಲ ಎಂದಿದ್ದಾರೆ. 2004 ರಿಂದ ಕುಮಾರಸ್ವಾಮಿ ಅವರು ರಾಮನಗರದಿಂದ ಸ್ಪರ್ಧೆ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದ್ರೆ ಈ ಬಾರಿ ಜನರು ಬೇರೆ ರೀತಿ ತೀರ್ಮಾನ ತೆಗೆದುಕೊಂಡಿದ್ದಾರೆ. ಮಂಡ್ಯದ ರೀತಿಯೇ ಇಲ್ಲಿಯೂ ಆಗಿರುವ ಬಗ್ಗೆ ನಿಮ್ಮ‌ ಬಳಿ ಹಂಚಿಕೊಂಡಿದ್ದೆ. ಇಲ್ಲಿ ಕಾಂಗ್ರೆಸ್ ನವರು ಮಧ್ಯರಾತ್ರಿ 3 ಸಾವಿರ ರೂ. ಕೂಪನ್ ಕಾರ್ಡ್‌ ಕೊಟ್ಟು ಆರ್ಥಿಕವಾಗಿ ಹಿಂದುಳಿದವರ ಮತ ಪಡೆದು ಅವರನ್ನ ದಾರಿ ತಪ್ಪಿಸಿದ್ದಾರೆ, ನನ್ನನ್ನ ಸೋಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ಅರಿವಾಗುತ್ತದೆ ಎಂದು ತಿಳಿಸಿದ್ದಾರೆ.

suddiyaana