ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದ ನಿಖಿಲ್ ಕುಮಾರಸ್ವಾಮಿ – ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾದ ಜೆಡಿಎಸ್ ಯುವ ಮುಖಂಡ

ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದ ನಿಖಿಲ್ ಕುಮಾರಸ್ವಾಮಿ – ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾದ ಜೆಡಿಎಸ್ ಯುವ ಮುಖಂಡ

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಜಕಾರಣಕ್ಕೆ ನಿಖಿಲ್ ಬರುವುದು ಬೇಡ ಅಂತಾ ಹೇಳಿದ್ದರು. ಇದೀಗ ಜೆಡಿಎಸ್ ಪಕ್ಷದ ಯುವ ಮುಖಂಡ, ನಟ ನಿಖಿಲ್ ಕುಮಾರಸ್ವಾಮಿ ಕೂಡಾ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಅವಕಾಶಗಳಿರುವುದರಿಂದ ಸದ್ಯ ನಿಖಿಲ್ ಕುಮಾರಸ್ವಾಮಿ ಸಿನಿಮಾ ಕೆಲಸಗಳಲ್ಲೂ ಬ್ಯುಸಿಯಾಗಿದ್ದಾರೆ. ಹೀಗಾಗಿ ನೋ ಪೊಲಿಟಿಕ್ಸ್ ಅಂತಾ ಹೇಳುತ್ತಿದ್ದಾರೆ.

ಇದನ್ನೂ ಓದಿ: ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಇರಾ ಖಾನ್ – ಆಮಿರ್ ಖಾನ್ ಮಗಳ ಮದುವೆಗೆ ಸಕಲ ಸಿದ್ಧತೆ

ಬೀದರ್ ನಲ್ಲಿ ಮಾತನಾಡಿರುವ ನಿಖಿಲ್, ‘ರಾಜಕೀಯದಿಂದ ದೂರುವಿರುತ್ತೇನೆ. ಆದರೆ, ಸಾಮಾನ್ಯ ಕಾರ್ಯಕರ್ತನಾಗಿ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲಾರೆ’ ಎಂದು ಹೇಳಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಇದೇ ಮಾತುಗಳನ್ನು ಆಡಿದ್ದರು. ಸಿನಿಮಾದಲ್ಲಿ ಸಾಕಷ್ಟು ಅವಕಾಶಗಳು ಇರುವುದರಿಂದ ಅಲ್ಲಿಯೇ ನೆಲೆಯೂರುವಂತೆ ಹೇಳಿದ್ದೇನೆ. ರಾಜಕಾರಣಕ್ಕೆ ನಿಖಿಲ್ ಬರುವುದು ಬೇಡ ಎಂದು ಕುಮಾರಸ್ವಾಮಿಗಳು ಹೇಳಿಕೆ ನೀಡಿದ್ದರು. ತಂದೆಯ ಮಾತನ್ನು ಪುತ್ರ ನಿಖಿಲ್ ಮತ್ತೆ ಪುನರುಚ್ಚರಿಸಿದ್ದಾರೆ.

ಸದ್ಯ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಈಗ ಇವರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಈ ಚಿತ್ರದ ನಾಯಕನಾಗಿ ನಿಖಿಲ್ ಕುಮಾರ್ ನಟಿಸುತ್ತಿದ್ದಾರೆ. ಲಕ್ಷ್ಮಣ್ ಅವರು ನಿರ್ದೇಶಕರು. ಈ ಹಿಂದೆ ‘ಸೀತಾರಾಮ ಕಲ್ಯಾಣ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಲೈಕಾ ಸಂಸ್ಥೆಯ ಸುಭಾಸ್ಕರನ್ ಮತ್ತು ನಿಖಿಲ್ ಭೇಟಿ ಮಾಡಿದ್ದರು. ಆ ಸಮಯದಲ್ಲಿ ‘ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರದಲ್ಲಿ ನೀವು ನಾಯಕರಾಗಿ ನಟಿಸಬೇಕು’ ಎಂದು ಸುಭಾಸ್ಕರನ್ ಹೇಳಿದ್ದರು. ಅದಕ್ಕೆ ನಿಖಿಲ್ ಒಪ್ಪಿಗೆ ಸೂಚಿಸಿದ್ದರು.

Sulekha