ಸೆಲ್ಫಿ ತೆಗೆದುಕೊಳ್ಳಲು ಬಂದರಿಂದಲೇ ನಟಿಗೆ ಕಿರುಕುಳ – ಸಿಕ್ಕಿದ್ದೇ ಚಾನ್ಸ್ ಎಂದು ಮೈ ಮುಟ್ಟಿದ್ರು!

ಸೆಲ್ಫಿ ತೆಗೆದುಕೊಳ್ಳಲು ಬಂದರಿಂದಲೇ ನಟಿಗೆ ಕಿರುಕುಳ – ಸಿಕ್ಕಿದ್ದೇ ಚಾನ್ಸ್ ಎಂದು ಮೈ ಮುಟ್ಟಿದ್ರು!

ಸಿನಿಮಾ ಸ್ಟಾರ್ಸ್‌ ಬರ್ತಾರೆ ಅಂದಾಗ ಅಲ್ಲಿ ನೂರಾರು ಮಂದಿ ಫ್ಯಾನ್ಸ್‌ ಮುಗಿಬೀಳುತ್ತಾರೆ. ತಮ್ಮ ಇಷ್ಟದ ನಟ, ನಟಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾರೆ. ಈ ವೇಳೆ ಸ್ಟಾರ್ಸ್‌ಗೆ ಕಿರಿಕಿರಿ ಅನ್ನಿಸುತ್ತೆ. ಇದೀಗ ನಿಧಿ ಅಗರ್ವಾಲ್‌ಗೆ ಫ್ಯಾನ್ಸ್‌ ಕಿರುಕುಳ ಕೊಟ್ಟಿದ್ದಾರೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ ಕೋಟ್ಯಂತರ ಮೌಲ್ಯದ ಬ್ಲೇಡ್‌ ದಾನ ಮಾಡಿದ ಉದ್ಯಮಿ!

ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಯಕಿ ನಿಧಿ ಅಗರ್ವಾಲ್ ವಾಪಸ್ ತೆರಳುವಾಗ ಕಹಿ ಅನುಭವ ಉಂಟಾಗಿದೆ. ದಿ ರಾಜಾ ಸಾಬ್ಚಿ ತ್ರದ ಸಹನಾ ಸಹನಾ  2ನೇ ಹಾಡು ನಿನ್ನೆ ಹೈದರಾಬಾದ್‌ನಲ್ಲಿ  ಅದ್ಧೂರಿಯಾಗಿ ರಿಲೀಸ್‌ ಆಯ್ತು. ಹೈದರಾಬಾದ್‌ನ ಮಾಲ್‌ವೊಂದರಲ್ಲಿ ನಡೆದ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಮೆಲೋಡಿ ಹಾಡನ್ನ ರಿಲೀಸ್‌ ಮಾಡಲಾಗಿತ್ತು. ಈ ವೇಳೆ ಫ್ಯಾನ್ಸ್‌ ಕ್ರೌಡ್‌ ಮಧ್ಯೆ ನಟಿ ಸಿಕ್ಕಿಕೊಂಡು ಭಾರೀ ಕಸಿವಿಸಿ ಅನುಭವಿಸಿದ್ದಾರೆ. ಈ ಕುರಿತ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನಿಧಿ ಕಾರ್ಯಕ್ರಮ ಮುಗಿಸಿ ಹೊರಗಡೆ ಬಂದಾಗ ಪ್ರಭಾಸ್‌ ಫ್ಯಾನ್ಸ್‌ ಒಮ್ಮಲೇ ಜೇನುಹುಳುಗಳಂತೆ ಮುತ್ತಿಕೊಂಡರು, ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಕೆಲವರು ಅವರ ದೇಹವನ್ನು ಟಚ್ ಮಾಡಲು ಕೆಲವರು ಪ್ರಯತ್ನಿಸಿದ್ದಾರೆ. ಇದರಿಂದ ಅವರಿಗೆ ಮುಜುಗರ ಆಗಿದೆ. ಕೊನೆಗೆ ಆಕೆಯ ಬಾಡಿಗಾರ್ಡ್ಸ್ ಹೇಗೋ ಸೇಫಾಗಿ ಕಾರು ಹತ್ತಿಸಿದ್ರು. ಆದರೂ ಕೆಲ ಕ್ಷಣಗಳು ಪರಿಸ್ಥಿತಿ ಕೈ ಮೀರಿತ್ತು. ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಅದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಒಂದು ಹಂತದಲ್ಲಿ ನಿಧಿ ಕಾರ್ ಹತ್ತುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರ್‌ ಒಳಗೆ ಕುಳಿತಾಗಲೇ ನಿಧಿ ನಿಟ್ಟುಸಿರು ಬಿಟ್ಟರು ಈ ಬಗ್ಗೆ ಕೆಲ ಸೆಲೆಬ್ರೆಟಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Shwetha M