ಕ್ರಿಕೆಟ್ ಜಗತ್ತಿಗೆ ಪೂರನ್ ಶಾಕ್ – ದೇಶಕ್ಕಿಂತ ಹಣವೇ ಮುಖ್ಯವಾಯ್ತಾ?
ವಿಂಡೀಸ್ ಕ್ರಿಕೆಟ್ ಮುಳುಗುತ್ತಾ?

ಕ್ರಿಕೆಟ್ ಜಗತ್ತಿಗೆ ಪೂರನ್ ಶಾಕ್ –  ದೇಶಕ್ಕಿಂತ ಹಣವೇ ಮುಖ್ಯವಾಯ್ತಾ?ವಿಂಡೀಸ್ ಕ್ರಿಕೆಟ್ ಮುಳುಗುತ್ತಾ?

ನಿಕೋಲಸ್ ಪೂರನ್..ಸ್ಪೋಟಕ ಎಡಗೈ ಬ್ಯಾಟರ್‌. ಇವರು ಬ್ಯಾಟ್‌ ಹಿಡಿದು ಫೀಲ್ಡ್‌ಗಿಳಿದರೆಂದರೆ ಸಿಕ್ಸ್‌ಗಳ ಸರಿಮಳೆಯೇ ಹರಿಸುತ್ತಾರೆ.. ಹೊಡಿ ಬಡಿ ಆಟಕ್ಕೆ ಪೂರನ್ ಸಖತ್ ಫೇಮಸ್..  ತಮ್ಮ ಅಬ್ಬರದ ಬ್ಯಾಟಿಂಗ್‌ ಮೂಲಕ ಬರೀ ವೆಸ್‌ ಇಂಡೀಸ್‌ ಅಲ್ಲದೇ ಇಂಡಿಯಾದಲ್ಲೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದರು. ಆದರೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ಬಿಸ್ ಶಾಕ್‌ ಕೊಟ್ಟಂತಾಗಿದೆ.

ಇತ್ತೀಚೆಗಷ್ಟೇ ಟೀಂ ಇಡಿಯಾದ ಸ್ಟಾರ್ ಪ್ಲೇಯರ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದರು. ಬಳಿಕ ಆಸ್ಟ್ರೇಲಿಯಾ ತಂಡದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಏಕದಿನ ಕ್ರಿಕೆಟ್‌ಗೆ, ದಕ್ಷಿಣ ಆಫ್ರೀಕಾದ ಹೆನ್ರಿಕ್‌ ಕ್ಲಾಸೆನ್‌ ಅವರು 33ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರು. ಇದೀಗ ವೆಸ್ಟ್‌ ಇಂಡೀಸ್‌ ತಂಡದ ಸ್ಟಾಟ್‌ ಆಟಗಾರ ನಿಕೋಲಸ್‌ ಪೂರನ್‌ ವಿದಾಯ ಹೇಳಿದ್ದಾರೆ.  ‘ಆಲೋಚನೆ ಮಾಡಿದ ನಂತರವೇ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ,” ಎಂದು ಪೂರನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದು ತುಂಬಾ ಕಷ್ಟಕರ ನಿರ್ಧಾರವಾಗಿದೆ. ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನವು ಮುಕ್ತಾಯವಾಗಿದ್ದು,ವೆಸ್ಟ್ ಇಂಡೀಸ್ ಕ್ರಿಕೆಟ್ ಕುರಿತು ನನ್ನ ಪ್ರೀತಿ ಯಾವತ್ತೂ ಕಡಿಮೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ವೆಸ್ಟ ಇಂಡೀಸ್ ತನ್ನ ಗೆಲುವಿನ ಹಾದಿಯನ್ನು ಮುಂದುವರೆಸಲಿ ಎಂದು ಪೂರನ್ ಹೇಳಿದ್ದಾರೆ.

ಪೂರನ್ 2016 ರಲ್ಲಿ ಪಾಕಿಸ್ತಾನದ ವಿರುದ್ಧದ ಟಿ-20 ಸರಣಿಯಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಕೊನೆಯ ಬಾರಿಗೆ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಪಂದ್ಯದಲ್ಲಿ ಪ್ರತಿನಿಧಿಸಿದ್ದರು. 2023ರಲ್ಲಿ ಪೂರನ್ ವೆಸ್ಟ್ ಇಂಡೀಸ್ ಟಿ-20 ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಕೊನೆಯ ಬಾರಿಗೆ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಪಂದ್ಯದಲ್ಲಿ ಪ್ರತಿನಿಧಿಸಿದ್ದರು.

ಪೂರನ್ 106 ಟಿ20 ಮತ್ತು 61 ಏಕದಿನ ಪಂದ್ಯಗಳನ್ನು ಆಡಿದ್ದು, ಎರಡೂ ಮಾದರಿಯಲ್ಲಿ 4000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಟಿ20ಗಳಲ್ಲಿ ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ನಿಕೋಲಸ್ ಪೂರನ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಪರವಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ 106 ಟಿ20 ಪಂದ್ಯಗಳಲ್ಲಿ, 13 ಅರ್ಧ ಶತಕಗಳೊಂದಿಗೆ  2,275 ರನ್ ಸಿಡಿಸಿದ್ದಾರೆ. 61 ಏಕದಿನದಲ್ಲಿ 3 ಶತಕ, 11 ಅರ್ಧ ಶತಕದೊಂದಿಗೆ 1,983 ರನ್ ಗಳಿಸಿದ್ದಾರೆ. ವಿಶ್ವದ ಬಹುತೇಕ ಲೀಗ್ ಮಾದರಿಯ ಪಂದ್ಯಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಐಪಿಎಲ್, ಸಿಪಿಎಲ್, ಪಿಎಸ್ಎಲ್‌, ಬಿಪಿಎಲ್ ಸೇರಿದಂತೆ ಹತ್ತಾರು ಲೀಗ್‌ನಲ್ಲಿ ಅವರು ಆಡಿದ್ದಾರೆ. ಐಪಿಎಲ್‌ನಲ್ಲಿ ಪೂರಾನ್ ಮುಂಬೈ ಇಂಡಿಯನ್ಸ್, ಪಂಜಾಬ್, ಹೈದರಾಬಾದ್ ತಂಡದಲ್ಲಿ ಆಡಿದ್ದರು. ಪ್ರಸ್ತುತ ಅವರು ಲಕ್ನೋ ಸೂಪರ್ ಜೈಂಟ್ಸ್ ಆಡುತ್ತಿದ್ದಾರೆ. ಈ ಸೀಸನ್‌ನಲ್ಲಿ ಪೂರಾನ್‌ ಭರ್ಜರಿ ಬ್ಯಾಟಿಂಗ್‌ನಿಂದ ಮಿಂಚಿದ್ದರು. ಸದ್ಯ ಅವರು ಐಪಿಎಲ್ ಸೇರಿದಂತೆ, ವಿವಿಧ ಲೀಗ್‌ನಲ್ಲಿ ಆಡುವುದನ್ನು ಮುಂದುವರೆಸಲಿದ್ದಾರೆ ಎಂದು ಹೇಳಿದ್ದಾರೆ. ಚೆನ್ನಾಗಿ ಆಡುತ್ತಿದ್ದ ಆಟಗಾರ ದೇಶಕ್ಕಾಗಿ ಇನ್ನೂಂದಷ್ಟು ವರ್ಷ ಆಡಬಹುದಿತ್ತು. ಆದ್ರೆ ಇವರಿಗೆ ಇದ್ದಕಿಂತ ಪ್ರಾಂಚೈಸಿ ಕ್ರಿಕೆಟ್‌ನಲ್ಲೇ ಒಳ್ಳೆಯ ದುಡ್ಡು ಸಿಗೋದ್ರಿಂದ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.

 ಟಿ-20 ವಿಶ್ವಕಪ್‌ ಟೈಂನಲ್ಲಿ ನಿವೃತ್ತಿ ಬೇಕಿತ್ತಾ?

ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ಕೇವಲ ಎಂಟು ತಿಂಗಳುಗಳು ಉಳಿದಿದ್ದು, ಇದಕ್ಕೂ ಮುಂಚೆಯೇ ನಿಕೋಲಸ್‌ ಪೂರನ್ ಅವರ ನಿವೃತ್ತಿಯಿಂದ ವೆಸ್ಟ್‌ ಇಂಡೀಸ್ ತಂಕ್ಕೆ ಆಘಾತ ಎದುರಾದಂತಾಗಿದೆ. ಇನ್ನೂ ವೆಸ್ಟ್ ಇಂಡೀಸ್ ನ ಕ್ರಿಕೆಟ್ ರಾಜಕೀಯ ಮತ್ತು ಅಲ್ಲಿನ ಸೌಲಭ್ಯ ಕೊರತೆಗೆ ಬೇಸತ್ತು ಬಹುತೇಕ ಕ್ರಿಕೆಟಿಗರು ಫ್ರಾಂಚೈಸಿ ಕ್ರಿಕೆಟ್ ನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ನಿಕೋಲಸ್ ಪೂರನ್ ಕೂಡ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.

 

Kishor KV