ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ – ಐವರನ್ನು ವಶಕ್ಕೆ ಪಡೆದ NIA
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿದೆ. NIA ತಂಡ ಸಂಚುಕೋರರಿಗಾಗಿ ತೀವ್ರ ಶೋಧ ನಡೆಸುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ತಮಿಳುನಾಡಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: 2022ರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ – ಬಿಜೆಪಿ ಕಾರ್ಯಕರ್ತ ಅರೆಸ್ಟ್
ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ 7 ರಾಜ್ಯಗಳಲ್ಲಿ 17 ಕಡೆ ಎನ್ಐ ಎ ದಾಳಿ ನಡೆಸಿವೆ. ಚೆನ್ನೈನ ಮನ್ನಾಡಿ, ಮುಥಿಯಾಲ್ ಪೇಟ್ಟೈ ನಲ್ಲಿ ಮಂಗಳವಾರ ಬೆಳಗ್ಗೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿತ್ತು. ಆರಂಭದಲ್ಲಿ ಮೂವರು, ನಂತರ ಐವರನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯ ಬಳಿಕ ಐವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಬೆಂಗಳೂರು ಜೀವಂತ ಗ್ರನೇಡ್ ಹಾಗೂ ಜೀವಂತ ಗುಂಡುಗಳು ಸಿಕ್ಕಿದ್ದ ಪ್ರಕರಣ ಸಂಬಂಧಿಸಿದಂತೆ ಕೂಡ ದಾಳಿ ನಡೆಸಿ ತನಿಖೆ ಕೈಗೊಂಡಿರುವ ಅಧಿಕಾರಿಗಳು ಆರ್ ಟಿ ನಗರದ ಟಿ ನಝೀರ್ ಸಂಬಂಧಿತ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸುಲ್ತಾನ್ ಪಾಳ್ಯದಲ್ಲೂ ಎನ್ ಐ ಎ ಪರಿಶೀಲಿಸಿದ್ದಾರೆ. ಟಿ ನಝೀರ್ ಜೊತೆ ಸಂಪರ್ಕ ಹಾಗೂ ಐಸೀಸ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಹಿನ್ನಲೆ ಈ ದಾಳಿ ನಡೆದಿದೆ. ಚೆನ್ಬೈನ ರಾಮನಾಥಪುರಂ ಜಿಲ್ಲೆಯ ಕೀಲಕಾರೈ ಏರಿಯಾ ಬಳಿ ಇರುವ ಶಂಶುದ್ದಿನ್ ಎಂಬಾತನ ಮನೆ ಮೇಲೆ ದಾಳಿ ನಡೆದಿದೆ.
ಟಿ ನಝೀರ್ ಬ್ರೇನ್ ವಾಶ್ ಮಾಡಿ ಉಗ್ರವಾದಕ್ಕೆ ಪ್ರಚೋದನೆ ನೀಡುತ್ತಿದ್ದ ಶಂಕಿತ ಉಗ್ರನಾಗಿದ್ದು, ಈತನ ಸಂಪರ್ಕದಲ್ಲಿರುವ ಜುನೈದ್ ಎಂಬಾತ ಪರಾರಿಯಾಗಿದ್ದನು. ಜುನೈದ್ ಎಂಬಾತ ಗ್ರೇನೆಡ್ ಸಿಕ್ಕ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದನು. ಅಲ್ಲದೆ ಆತನ ಮೇಲೆ ಹವಾಲಾ ಆರೋಪ ಕೇಳೀಬಂದಿತ್ತು. ಉಗ್ರವಾದಕ್ಕೆ ಸಾಕಷ್ಟು ಯುವಕರನ್ನ ಸೇರಿಸುತ್ತಿದ್ದ ಆರೋಪ ಆತನ ಮೇಲಿದೆ. ಹೀಗಾಗಿ ಈ ಹಿನ್ನೆಲೆ ರಾಮೇಶ್ವರಂ ಕೆಫೆ ದಾಳಿಯಲ್ಲೂ ಆತನ ಪಾತ್ರ ಇರಬಹುದು ಎಂದು ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ತನಿಖೆ ಮುಂದುವರೆಸಿದ್ದಾರೆ.
ಮಾರ್ಚ್ 1 ಶುಕ್ರವಾರದಂದು ವೈಟ್ಫೀಲ್ಡ್ ಬಳಿ ಇರುವ ದಿ ರಾಮೇಶ್ವರಂ ಕೆಫೆಯಲ್ಲಿ 10 ಸೆಕೆಂಡ್ಗಳ ಅಂತರದಲ್ಲಿ ಎರಡು ಬಾಂಬ್ ಸ್ಫೋಟಗೊಂಡಿತ್ತು. ಈ ಬಾಂಬ್ ದಾಳಿಯಿಂದ 10 9 ಮಂದಿ ಗಾಯಗೊಂಡಿದ್ದರು. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.