ಫುಟ್‌ಬಾಲ್‌ ತಾರೆ ನೇಮರ್‌ಗೆ ಕಾನೂನು ಸಂಕಷ್ಟ –  ಬರೋಬ್ಬರಿ 27 ಕೋಟಿ ರೂ. ದಂಡ

ಫುಟ್‌ಬಾಲ್‌ ತಾರೆ ನೇಮರ್‌ಗೆ ಕಾನೂನು ಸಂಕಷ್ಟ –  ಬರೋಬ್ಬರಿ 27 ಕೋಟಿ ರೂ. ದಂಡ

ಫುಟ್‌ಬಾಲ್‌ ತಾರೆ ನೇಮರ್‌ಗೆ ಕಾನೂನು ಸಂಕಷ್ಟ ಎದುರಾಗಿದೆ. ಮನೆ ನಿರ್ಮಿಸುವಾಗ ಪರಿಸರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈಗ ನೇಮರ್‌ಗೆ ಭಾರಿ ದಂಡ ವಿಧಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬ್ರೆಜಿಲ್‌ ಅಧಿಕಾರಿಗಳು, ನೇಮರ್‌ ಮನೆ ನಿರ್ಮಿಸುವಾಗ ಪರಿಸರ ನಿಯಮ ಉಲ್ಲಂಘಿಸಿದ್ದಾರೆ. ನೇಮರ್‌ ದಕ್ಷಿಣ ಬ್ರೆಜಿಲ್‌ನ ಕರಾವಳಿ ಪ್ರದೇಶದ ರಿಯೊ ಡಿ ಜನೈರೊದ ಹೊರವಲಯದಲ್ಲಿ ಐಷರಾಮಿ ಮನೆ ನಿರ್ಮಿಸಿದ್ದಾರೆ. ಅದಕ್ಕಾಗಿ ಶುದ್ಧ ನೀರಿನ ಮೂಲಗಳ ಬಳಕೆ, ಬಂಡೆ ಮತ್ತು ಮರಳು ಬಳಕೆ ವೇಳೆ ಪರಿಸರ ನಿಯಮ ಉಲ್ಲಂಘಿಸಿದ್ದಾರೆ. ಈ ಸಂಬಂಧ ನೇಮರ್‌ಗೆ  ಬರೋಬ್ಬರಿ 27 ಕೋಟಿ ರೂ. (3.3 ಮಿಲಿಯನ್‌ ಅಮೆರಿಕನ್‌ ಡಾಲರ್)‌ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಿಷಬ್ ಪಂತ್ ತಂಡಕ್ಕೆ ಮರಳಿದರೂ ಕೀಪಿಂಗ್ ಗ್ಲೌಸ್ ತೊಡುವುದು ಅನುಮಾನ..!

ಅವರ ನಿವಾಸದಲ್ಲಿ ಕೃತಕ ಕೊಳ ನಿರ್ಮಾಣದ ವೇಳೆ ಪರಿಸರಕ್ಕೆ ಹಾನಿ ಮಾಡಲಾಗಿದೆ ಎಂದು ಮಂಗರಟಿಬ ಸಿಟಿ ಕೌನ್ಸಿಲ್‌ ದೂರಿನಲ್ಲಿ ತಿಳಿಸಿದೆ. ಅನುಮತಿಯಿಲ್ಲದೆ ಪರಿಸರಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿರುವುದು, ನದಿ ನೀರನ್ನು ಬಳಸಿರುವುದು, ಸಸ್ಯವರ್ಗದ ಬೆಳವಣಿಗೆಗೆ ಅಡ್ಡಿಪಡಿಸಿರುವುದು ಸೇರಿದಂತೆ ಹಲವು ಅಪರಾಧಗಳನ್ನು ನೇಮರ್‌ ಮೇಲೆ ಹೊರಿಸಲಾಗಿದೆ.

ಬ್ರೆಜಿಲ್ ಫುಟ್‌ಬಾಲ್‌ ತಾರೆ ತಮ್ಮ ಬಲ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿಯಿಂದ ಅವರು ಫುಟ್ಬಾಲ್ ಪಂದ್ಯಗಳಲ್ಲಿ ಆಡಿಲ್ಲ.

suddiyaana