ಜೆಸಿಂಡಾ ಅರ್ಡೆರ್ನ್ ರಾಜೀನಾಮೆ – ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಆಯ್ಕೆ!

ಜೆಸಿಂಡಾ ಅರ್ಡೆರ್ನ್ ರಾಜೀನಾಮೆ – ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಆಯ್ಕೆ!

ನ್ಯೂಜಿಲೆಂಡ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡೋದಾಗಿ ಜೆಸಿಂಡಾ ಅರ್ಡೆರ್ನ್ ಘೋಷಣೆ ಬಳಿಕ ಈಗ ಹೊಸ ಪ್ರಧಾನಿಯ ನೇಮಕವಾಗಿದೆ. ಜೆಸಿಂಡಾ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಲೇಬರ್ ಪಕ್ಷದ ಸಂಸದ ಹಾಗೂ  ಶಿಕ್ಷಣ ಸಚಿವ ಕ್ರಿಸ್ ಹಿಪ್ಕಿನ್ಸ್​​ರನ್ನ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ : ಲಕ್ಷ್ಮೀ ಹೆಬ್ಬಾಳ್ಕರ್ ಗಿಂತ ನಾನೇ ಹೆಚ್ಚು ಹಣ ಕೊಡ್ತೇನೆ – ರಮೇಶ್ ಜಾರಕಿಹೊಳಿ ಬಹಿರಂಗ ಆಮಿಷ..!

ಸಂಸದ ಕ್ರಿಸ್ ಹಿಪ್ಕಿನ್ಸ್​ರಿಂದ ಏಕೈಕ ನಾಮನಿರ್ದೇಶನ ಸ್ವೀಕರಿಸಿದ ನಂತರ ಆಡಳಿತಾರೂಢ ಲೇಬರ್​ ಪಾರ್ಟಿ ಈ ನಿರ್ಧಾರವನ್ನ ಘೋಷಣೆ ಮಾಡಿದೆ. ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್​​ಅವರನ್ನು ಆಯ್ಕೆ ಮಾಡಿರೋದಾಗಿ ಆಡಳಿತಾರೂಢ ಲೇಬರ್‌ ಪಕ್ಷದ ಮೂಲಗಳು ತಿಳಿಸಿವೆ. ದೇಶದ 41ನೇ ಪ್ರಧಾನಿಯಾಗಿ 44 ವರ್ಷದ ಕ್ರಿಸ್ ಹಿಪ್ಕಿನ್ಸ್‌ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. 42 ವರ್ಷದ ಜೆಸಿಂಡಾ ಅರ್ಡೆರ್ನ್ ಅವರು ದಿಢೀರ್ ರಾಜೀನಾಮೆ ಘೋಷಣೆ ಮಾಡಿದ ಬಳಿಕ ಲೇಬರ್‌ ಪಕ್ಷ ಈ ನಿರ್ಧಾರ ಕೈಗೊಂಡಿದೆ.

ಕ್ರಿಸ್ ಹಿಪ್ಕಿನ್ಸ್‌ ಅವರು ಜೆಸಿಂಡಾ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ಲಾಕ್‌ಡೌನ್‌ ಸಮಯದಲ್ಲಿ ಅವರ ಕಾರ್ಯನಿರ್ವಹಣೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಲೇಬರ್ ಪಕ್ಷದಿಂದ ಹಿಪ್ಕಿನ್ಸ್ ಒಬ್ಬರನ್ನೇ ನಾಮನಿರ್ದೇಶನ ಮಾಡಿದ್ದರಿಂದ ಅವರು ಅವಿರೋಧವಾಗಿ ನೇಮಕವಾಗಿದ್ದಾರೆ. ಪಕ್ಷವು ಸದ್ಯ ಜನಾಭಿಪ್ರಾಯದಲ್ಲಿ ಹಿನ್ನಡೆ ಅನುಭವಿಸಿದೆ. ಅಪರಾಧ ಪ್ರಕರಣಗಳ ಹೆಚ್ಚಳ, ಬಡತನ ಮತ್ತು ಏರುತ್ತಿರುವ ಬೆಲೆಗಳ ನಡುವೆ ವಿರೋಧ ಪಕ್ಷಗಳು ನಿರಂತರವಾಗಿ ಟೀಕಾ ಪ್ರಹಾರ ಮಾಡುತ್ತಿದ್ದು, ಆಡಳಿತಾರೂಢ ಲೇಬರ್​ ಪಕ್ಷಕ್ಕೆ ಸಂಕಷ್ಟದ ಹಾದಿ ಎದುರಾಗಿದೆ. ಇದೆಲ್ಲವನ್ನು ಮೆಟ್ಟಿ ನಿಂತು ಪಕ್ಷವನ್ನು ಕ್ರಿಸ್​ ಮುನ್ನಡೆಸಬೇಕಿದೆ.

ಭಾನುವಾರ ಮಧ್ಯಾಹ್ನ 1 ಗಂಟೆಗೆ ಲೇಬರ್​ ಪಕ್ಷದ ಸಭೆ ನಡೆಯಲಿದ್ದು, ನಾಮನಿರ್ದೇಶನವನ್ನು ಅನುಮೋದಿಸಿ, ಕ್ರಿಸ್ ಹಿಪ್ಕಿನ್ಸ್ ಅವರನ್ನು ಪಕ್ಷದ ನಾಯಕರಾಗಿ ದೃಢೀಕರಿಸಲಿದ್ದಾರೆ ಎಂದು ಲೇಬರ್​ ಪಕ್ಷದ ಹಿರಿಯ ಸದಸ್ಯ ಡಂಕನ್ ವೆಬ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕಳೆದ ಗುರುವಾರ ಪಿಎಂ ಜೆಸಿಂಡಾ ಆರ್ಡರ್ನ್ ತಾವು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯೋದಾಗಿ ಘೋಷಣೆ ಮಾಡಿದ್ದರು. ಕಳೆದ ಐದೂವರೆ ವರ್ಷಗಳಿಂದ ಪ್ರಧಾನಿಯಾಗಿದ್ದ 42 ವರ್ಷದ ಜೆಸಿಂಡಾ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದಿದ್ದಾರೆ.

 

suddiyaana