ಮೇಕಪ್ ಆರ್ಟಿಸ್ಟ್ನ ಹಿಂದೆ ಬಿದ್ದು ಮದುವೆಯಾದ! – ವಿವಾಹವಾದ ಒಂದೇ ತಿಂಗಳಲ್ಲಿ ಯುವ ಉದ್ಯಮಿ ದುರಂತ ಅಂತ್ಯ!

ಪ್ರೀತಿಸಿ ಮದುವೆಯಾದ ಒಂದೇ ತಿಂಗಳಿನಲ್ಲಿ ಉದ್ಯಮಿ ಆತ್ಮತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಇದೀಗ ಉದ್ಯಮಿಯ ಸಾವು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ಮಾವ ಹಾಗೂ ಸೊಸೆಯ ಮಧ್ಯೆ ಆರೋಪ ಪ್ರತ್ಯಾರೋಪಗಳು ಶುರುವಾಗಿದೆ.
ಇದನ್ನೂ ಓದಿ: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್! – ನೀರು, ವಿದ್ಯುತ್, ಟೋಲ್ ದರ ಏರಿಕೆ!
ಈ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಸುದೀಪ್ ಶೆಟ್ಟಿ ಮೃತ ರಿಯಲ್ ಎಸ್ಟೇಟ್ ಉದ್ಯಮಿ.
ಏನಿದು ಘಟನೆ?
ಸುದೀಪ್ ಶೆಟ್ಟಿಗೆ ಕಳೆದ ಒಂದು ವರ್ಷದ ಹಿಂದೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ, ಮೇಕಪ್ ಆರ್ಟಿಸ್ಟ್ ಹಾಗೂ ನಾಟಕ ತಂಡಗಳಲ್ಲಿ ಕಲಾವಿದೆಯಾಗಿದ್ದ ಸೌಮ್ಯ ಶೆಟ್ಟಿಯ ಪರಿಚಯವಾಗಿದೆ. ಬಳಿಕ ಸುದೀಪ್ ಆಕೆಯನ್ನು ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದ. ಕೊನೆಗೂ ಒಂದು ವರ್ಷದ ನಂತರ ಈಕೆ ಆತನ ಮೆಸೇಜ್‌ಗೆ ರಿಪ್ಲೈ ಮಾಡಿದ್ದೇ ತಡ ಆಕೆಗೆ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಈ ಬೆನ್ನಲ್ಲೇ ಮನೆಯವರನ್ನ ಒಪ್ಪಿಸಿದರೆ ನಾನು ಮದುವೆಯಾಗುತ್ತೇನೆ ಎಂದು ಸೌಮ್ಯ ಹೇಳಿದ್ದಾಳೆ. ಈ ಬೆನ್ನಲ್ಲೇ ಸುದೀಪ್ ಎರಡೂ ಮನೆಯವರನ್ನ ಒಪ್ಪಿಸಿ ಸೌಮ್ಯಳನ್ನು ಮದುವೆಯಾಗಿದ್ದಾನೆ. ಈ ಜೋಡಿ ಕಳೆದ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ರಿಜಿಸ್ಟರ್ ಮದುವೆ ಕೂಡ ಆಗಿದ್ದು, ಉಡುಪಿಯ ಕಾರ್ಕಳದಲ್ಲಿರುವ ಸೌಮ್ಯ ಮನೆಯಲ್ಲಿ ಸುದೀಪ್ ಜೊತೆ ಕೆಲ ಸಮಯ ಕಳೆದಿದ್ದರು. ಅದಾದ ಬಳಿಕ ಈ ಸಂಬಂಧದ ಸಂಪೂರ್ಣ ಚಿತ್ರಣವೇ ಬದಲಾಗಿದೆ.
ಸುದೀಪ್ ತನ್ನ ಮನೆಗೆ ಹೋಗಿದ್ದೇ ತಡ ಆತ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಬಳಿಕ ಸುದೀಪ್ ತನ್ನ ತಾಯಿ ಜೊತೆ ಕಾರಲ್ಲಿ ಹೋಗುತ್ತಿರುವುದನ್ನ ಕಂಡು ಆಕೆ ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಅತ್ತೆ ಜೊತೆ ಮಾತುಕತೆ ಆಗಿದೆ. ಅದಾದ ಬಳಿಕ ಸುದೀಪ್ ಕಾರ್ಕಳದಲ್ಲಿರೋ ಪತ್ನಿ ಮನೆಗೆ ಬಂದು ಮರುದಿನ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ. ಪತ್ನಿ ಸೌಮ್ಯ ಆತನನ್ನ ಆಸ್ಪತ್ರೆಗೆ ದಾಖಲಿಸಿದ ಬಳಿಕ ಗೊತ್ತಾಗಿದ್ದು, ಆತ ವಿಷ ಸೇವನೆ ಮಾಡಿದ್ದಾನೆ ಅನ್ನೋದು. ಕೂಡಲೇ ಸುದೀಪ್ ತಂದೆ ಮಗನನ್ನ ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ದಾಖಲಿಸಿದ ಬಳಿಕ ಆತ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಈಗ ಮಗನ ಸಾವಿಗೆ ಸೊಸೆಯ ಪ್ರಚೋದನೆ ಕಾರಣ ಅಂತ ಮಾವ ದೂರು ದಾಖಲಿಸಿದ್ದಾರೆ. ಇತ್ತ ನಾನೇನು ತಪ್ಪು ಮಾಡಿಲ್ಲ. ಜೊತೆಯಲ್ಲಿರುವಾಗ ಖುಷಿಯಲ್ಲೇ ಇದ್ದೆವು. ಅತ್ತೆಗೆ ಮಗನ ಪ್ರೀತಿ ಇಷ್ಟವಿರಲಿಲ್ಲ. ಸಾಲದ ಚಿಂತೆಯೂ ಇತ್ತು. ಒಂದು ವೇಳೆ ನಾನು ಕಾರಣ ಆದರೆ ನಾನ್ಯಾಕೆ ಗಂಡನನ್ನು ಎರಡೆರಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆ. ಈ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿ ದೂರನ್ನು ನೀಡಲು ಮುಂದಾಗಿದ್ದಾರೆ ಸೌಮ್ಯ ಶೆಟ್ಟಿ. ಒಟ್ಟಾರೆ ಯುವತಿಯ ಹಿಂದೆ ಬಿದ್ದು ಒಲಿಸಿ ಮದುವೆಯಾಗಿದ್ದ ಉದ್ಯಮಿಯ ಜೀವನ ದುರಂತ ಅಂತ್ಯ ಕಂಡಿದೆ.

ನೋಡಿರಿ

