ಟೀಮ್ ಇಂಡಿಯಾ ಪಾಲಿಗೆ ಮಾರಕವಾಗುತ್ತಾ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದ ಪಿಚ್ – ಹಸಿರು ಪಿಚ್‌ನಲ್ಲಿ ಮ್ಯಾಜಿಕ್ ಮಾಡುತ್ತಾ ಭಾರತ

ಟೀಮ್ ಇಂಡಿಯಾ ಪಾಲಿಗೆ ಮಾರಕವಾಗುತ್ತಾ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದ ಪಿಚ್ – ಹಸಿರು ಪಿಚ್‌ನಲ್ಲಿ ಮ್ಯಾಜಿಕ್ ಮಾಡುತ್ತಾ ಭಾರತ

ಜನವರಿ 3 ರಿಂದ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಆತಿಥೇಯ ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟೆಸ್ಟ್ ಪಂದ್ಯ ಶುರುವಾಗಲಿದೆ. ಭಾರತ ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಕಾರಣ ದ್ವಿತೀಯ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆದರೆ, ಹಿಂದಿನ ಸೆಂಚುರಿಯನ್ ಪಿಚ್​ನಂತೆ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದ ಪಿಚ್ ಕೂಡ ಟೀಮ್ ಇಂಡಿಯಾಕ್ಕೆ ಮಾರಕವಾಗಲಿದೆ. ಪಿಚ್​ ಹೇಗಿದೆ? ಎಂಬ ವರದಿ ಇಲ್ಲಿದೆ.

ಇದನ್ನೂ ಓದಿ:  ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್‌ಗೆ ಕ್ವಾಲಿಫೈ ಆಗಲು ಟೀಮ್ ಇಂಡಿಯಾ ಮುಂದಿದೆ ಸವಾಲು..!

ಸೆಂಚೂರಿಯನ್​ನಲ್ಲಿ ನಡೆದ ಫಸ್ಟ್ ಟೆಸ್ಟ್​ ಮ್ಯಾಚ್​​ನಲ್ಲಿ ಫುಲ್​ ಬೌನ್ಸಿ ಮತ್ತು ಪೇಸ್ ಪಿಚ್​ಗೆ ಟೀಂ ಇಂಡಿಯಾದ ಬ್ಯಾಟ್ಸ್​ಮನ್​ಗಳು ಕಂಗಾಲಾಗಿದ್ರು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್​ರನ್ನ ಬಿಟ್ರೆ ಉಳಿದವರೆಲ್ಲರೂ ಪೆವಿಲಿಯನ್​ಗೆ ಪರೇಡ್ ಮಾಡಿದವರೇ. ಸೌತ್ ಆಫ್ರಿಕಾದ ಫಾಸ್ಟ್​ ಬೌಲಿರ್ಸ್​ಗಳಿಗೆ ನಮ್ಮವರು ಒದ್ದಾಡಿದ್ರು. ಕೇವಲ ಬ್ಯಾಟ್ಸ್​​ಮನ್​ಗಳು ಮಾತ್ರವಲ್ಲ ನಮ್ಮ ಬೌಲರ್ಸ್​​ಗಳು ಕೂಡ ಕಂಪ್ಲೀಟ್ ಫೇಲ್ ಆಗಿದ್ರು. ಜನವರಿ 3ರಿಂದ ಕೇಪ್​ಟೌನ್​ನಲ್ಲಿ ಸೆಕೆಂಡ್ & ಫೈನಲ್​ ಟೆಸ್ಟ್ ಮ್ಯಾಚ್ ನಡೀತಾ ಇದೆ. ಇದು ಕೂಡ ಸೆಂಚೂರಿಯನ್​ ರೀತಿಯದ್ದೇ ಗ್ರೀನ್ & ಬೌನ್ಸಿ, ಪೇಸ್ ಪಿಚ್. ಹಾಗೆಯೇ ಪಿಚ್ ಮೇಲ್ ಹುಲ್ಲು ಕೂಡ ಇದ್ದು ಎಕ್ಸ್​ಟ್ರಾ ಪೇಸ್, ಬೌನ್ಸ್ ಜೊತೆಗೆ ಬಾಲ್ ಸ್ವಿಂಗ್ ಕೂಡ ಆಗುತ್ತೆ. ಹೀಗಾಗಿ ಟೀಂ ಇಂಡಿಯಾ ಬ್ಯಾಟ್ಸ್​​ಮನ್​ಗಳಿಗೆ ಮತ್ತೊಂದು ಬಿಗ್ ಟೆಸ್ಟ್ ನಡೆಯೋದಂತೂ ಗ್ಯಾರಂಟಿ. ಫಾಸ್ಟ್ ಬೌಲರ್ಸ್​ಗಳಿಗೆ ಹೇಳಿ ಮಾಡಿಸಿದಂಥಾ ಪಿಚ್ ಇದಾಗಿದ್ದು, ಮ್ಯಾಚ್​ನ ಫಸ್ಟ್​ ಡೇಯಂತೂ ಪೇಸ್​​ ಬೌಲರ್ಸ್​ಗಳನ್ನ ಫೇಸ್​​ ಮಾಡೋದು ತುಂಬಾನೆ ಚಾಲೆಂಜಿಂಗ್ ಆಗಿರಲಿದೆ. ಹೀಗಾಗಿ ಫಸ್ಟ್​ ಬ್ಯಾಟಿಂಗ್ ಮಾಡೋ ತಂಡ ಎಸ್ಪೆಷಲಿ ಟೀಂ ಇಂಡಿಯಾ ಬ್ಯಾಟ್ಸ್​​ಮನ್​ಗಳಂತೂ ತುಂಬಾನೆ ಎಚ್ಚರಿಕೆಯಿಂದ ಆಡಬೇಕಾಗುತ್ತೆ. ಮ್ಯಾಚ್​ನ ಕೊನೆಯ ಎರಡು ದಿನ ಸ್ಪಿನ್ನರ್ಸ್​ಗಳಿಗೆ ಸ್ವಲ್ಪ ಹೆಲ್ಪ್ ಆಗಬಹುದು. ಹೀಗಾಗಿ ಮ್ಯಾಕ್ಸಿಮಮ್ ಇಲ್ಲಿ ಪೇಸ್​​ ಬೌಲರ್ಸ್​ಗಳದ್ದೇ ಆಟ ನಡೆಯೋದು. ಹೀಗಾಗಿ ನಮ್ಮ ಫಾಸ್ಟ್ ಬೌಲರ್ಸ್​ ಮತ್ತು ಬ್ಯಾಟ್ಸ್​​ಮನ್​ಗಳು ಯಾವ ರೀತಿ ಆಡ್ತಾರೆ ಅನ್ನೋದು ತುಂಬಾನೆ ಇಂಪಾರ್ಟೆಂಟ್ ಆಗುತ್ತೆ.

ಇನ್ನು ಕೇಪ್​ಟೌನ್​ ಗ್ರೌಂಡನ್​ ಟ್ರ್ಯಾಕ್​ರೆಕಾರ್ಡ್ ಹೇಗಿದೆ? ಫಸ್ಟ್ ಬ್ಯಾಟಿಂಗ್ ಟೀಂ ಎಷ್ಟು ಮ್ಯಾಚ್​ಗಳನ್ನ ಗೆದ್ದಿವೆ? ಸೆಕೆಂಡ್ ಬ್ಯಾಟಿಂಗ್ ಬ್ಯಾಟಿಂಗ್​ ಮಾಡಿದವರು ಎಷ್ಟು ಪಂದ್ಯಗಳನ್ನ ಗೆದ್ದಿದ್ದಾರೆ? ಹಾಗೆಯೇ ಟೆಸ್ಟ್​ ಕ್ರಿಕೆಟ್​​ನಲ್ಲಿ ಈ ಗ್ರೌಂಡ್​ನಲ್ಲಿ ಟೀಂ ಇಂಡಿಯಾದ ಪರ್ಫಾಮೆನ್ಸ್ ಹೇಗಿದೆ ಅನ್ನೋದು ಈ ಕೆಳಗೆ ವಿವರವಾಗಿ ನೋಡುವುದಾದರೆ,

ಕೇಪ್​ಟೌನ್ ಟ್ರ್ಯಾಕ್​ ರೆಕಾರ್ಡ್  

  • ಕೇಪ್​ಟೌನ್​ನಲ್ಲಿ ಒಟ್ಟು 60 ಟೆಸ್ಟ್ ಮ್ಯಾಚ್​ಗಳಾಗಿವೆ
  • ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ 23 ಮ್ಯಾಚ್​ ಗೆದ್ದಿವೆ
  • ಫಸ್ಟ್ ಬೌಲಿಂಗ್ ಮಾಡಿದ ಟೀಂ 25 ಮ್ಯಾಚ್ ಗೆದ್ದಿವೆ
  • ಫಸ್ಟ್ ಇನ್ನಿಂಗ್ಸ್ ಎವರೇಜ್ ಸ್ಕೋರ್ 325 ರನ್
  • ಟೀಂ ಇಂಡಿಯಾ ಒಟ್ಟು 6 ಟೆಸ್ಟ್​ ಮ್ಯಾಚ್​ಗಳನ್ನ ಆಡಿದೆ
  • 4 ಮ್ಯಾಚ್​ಗಳಲ್ಲಿ ಸೋಲು, 2 ಮ್ಯಾಚ್ ಡ್ರಾ

 

ಹೀಗಾಗಿ ಕೇಪ್​​ಟೌನ್​ನಲ್ಲಿ ಟೀಂ ಇಂಡಿಯಾದ ಪರ್ಫಾಮೆನ್ಸ್ ಲೋ ಲೆವೆಲ್​ನಲ್ಲಿದೆ. ಇದುವರೆಗೂ ಈ ಗ್ರೌಂಡ್​​ನಲ್ಲಿ ಒಂದೇ ಒಂದು ಟೆಸ್ಟ್​ ಮ್ಯಾಚ್​​ನ್ನ ಭಾರತ ಗೆದ್ದಿಲ್ಲ. ಸೋ ನಮ್ಮ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ರೋಹಿತ್​ ಶರ್ಮಾ ಟೀಂ ಮುಂದೆ ಎಂಥಾ ಚಾಲೆಂಜ್ ಇದೆ ಅನ್ನೋದನ್ನ ಇಲ್ಲೇ ಅರ್ಥ ಮಾಡಿಕೊಳ್ಳಬಹುದು.

Sulekha