ನ್ಯೂಜಿಲೆಂಡ್‌ನ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್‌ಕಿನ್ಸ್‌ ಪ್ರಮಾಣವಚನ ಸ್ವೀಕಾರ

ನ್ಯೂಜಿಲೆಂಡ್‌ನ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್‌ಕಿನ್ಸ್‌ ಪ್ರಮಾಣವಚನ ಸ್ವೀಕಾರ

ನ್ಯೂಜಿಲೆಂಡ್‌ : ನ್ಯೂಜಿಲೆಂಡ್‌ನ ನೂತನ ಪ್ರಧಾನಿಯಾಗಿಕ್ರಿಸ್ ಹಿಪ್‌ಕಿನ್ಸ್‌ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ 44 ವರ್ಷದ ಕ್ರಿಸ್ ಹಿಪ್ ಕಿನ್ಸ್ , ಆರ್ಥಿಕತೆಯ ಮೇಲೆ ಕೇಂದ್ರೀಕರಿಸುವುದಾಗಿ ಭರವಸೆ ನೀಡಿದ್ದಾರೆ. ಹಿಪ್ಕಿನ್ಸ್ ಅವರಿಗೆ ಕೇವಲ 9 ತಿಂಗಳಿಗಿಂತ ಕಡಿಮೆ ಅವಧಿಯ ಅಧಿಕಾರ ಸಿಗಲಿದೆ.

ಇದನ್ನೂ ಓದಿ:  ‘ಒನ್ ಮೋರ್ ಪೆಗ್’ ಅನ್ನಂಗಿಲ್ಲ – ‘ಬ್ಯಾಲೆನ್ಸ್’ ತಪ್ಪಿದ್ರೆ ವಿಮಾನದಿಂದ್ಲೇ ಕಿಕ್ ಔಟ್!

ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ನ್ಯೂಜಿಲೆಂಡ್ ಗವರ್ನರ್-ಜನರಲ್ ಸಿಂಡಿ ಕಿರೊ ಅವರು ಅರ್ಡೆರ್ನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ನಂತರ ಕ್ರಿಸ್ ಹಿಪ್‌ಕಿನ್ಸ್‌ ಪ್ರಮಾಣವಚನ ಸ್ವೀಕರಿಸಿದರು. ಕಾರ್ಮೆಲ್ ಸೆಪುಲೋನಿ ಉಪ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದಲ್ಲೇ ಪ್ರಥಮ ಬಾರಿಗೆ ಪೆಸಿಫಿಕ್ ದ್ವೀಪಕ್ಕೆ ಸೇರಿದ ವ್ಯಕ್ತಿಯೊಬ್ಬರಿಗೆ ಈ ಹುದ್ದೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಸುಮಾರು ಐದೂವರೆ ವರ್ಷಗಳ ಕಾಲ ಉನ್ನತ ಹುದ್ದೆಯನ್ನು ಅಲಂಕರಿಸಿದ ಅರ್ಡೆರ್ನ್ ಕಳೆದ ಗುರುವಾರ ದಿಢೀರ್ ಆಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

suddiyaana