ಅಧಿಕಾರ ಸಾಕು… “ಪ್ರಧಾನಿ ಹುದ್ದೆ”ಯಿಂದ ಕೆಳಗಿಳಿಯುತ್ತೇನೆ ಎಂದು ನ್ಯೂಜಿಲೆಂಡ್ ಪಿಎಂ ಹೇಳಿದ್ದೇಕೆ?

‘ನನಗೆ ಅಧಿಕಾರ ಸಾಕು, ಮುಂದಿನ ತಿಂಗಳು ತಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ’ ಎಂದು ಹೇಳುವ ಮೂಲಕ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡನ್ ಎಲ್ಲರಿಗೂ ಶಾಕ್ ನೀಡಿದ್ದಾರೆ.
‘ದೊಡ್ಡ ಜವಾಬ್ದಾರಿ ಇರುವ ಈ ಉನ್ನತ ಹುದ್ದೆಯನ್ನು ತನಗೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತನ್ನ ಹುದ್ದೆಯಿಂದ ಕೆಳಗಿಳಿಯಲು ಇದು ಸೂಕ್ತ ಸಮಯ’ ಅಂತ ಲೇಬರ್ ಪಾರ್ಟಿ ಸದಸ್ಯರ ಸಭೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪತ್ತೆಯಾಯ್ತು “ಕಿತ್ತಳೆ ಬಣ್ಣದ ಬಾವಲಿ” – ಇದೆಷ್ಟು ಅಪಾಯಕಾರಿ ಗೊತ್ತಾ?
‘ಇದೊಂದು ದೊಡ್ಡ ಮತ್ತು ಅತ್ಯಂತ ಜವಾಬ್ದಾರಿಯುತ ಹುದ್ದೆ. ಈ ದೊಡ್ಡ ಹುದ್ದೆಯನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಇಂತಹ ಹುದ್ದೆಗೆ ಸೂಕ್ತ ವ್ಯಕ್ತಿ ಇದ್ದರೆ ಉತ್ತಮ. ನನಗೆ ಪ್ರಧಾನಿ ಹುದ್ದೆ ನಿಭಾಯಿಸಲು, ಪದವಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
2017 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರಧಾನ ಮಂತ್ರಿಯಾದ ಜೆಸಿಂಡಾ ಆರ್ಡನ್, ಮೂರು ವರ್ಷಗಳ ನಂತರ ನಡೆದ ಚನಾವಣೆಯಲ್ಲಿ ತನ್ನ ಲೇಬರ್ ಪಾರ್ಟಿಯನ್ನು ವಿಜಯದತ್ತ ಮುನ್ನಡೆಸಿದರು. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಅವರ ಪಕ್ಷ ಹಾಗೂ ವೈಯಕ್ತಿಕ ಜನಪ್ರಿಯತೆ ಕುಸಿತ ಕಂಡಿದೆ. ಹಾಗಾಗಿ ರಾಜೀನಾಮೆ ನೀಡಲು ಇದೂ ಒಂದು ಕಾರಣ ಅಂತ ಹೇಳಲಾಗುತ್ತಿದೆ.
ಪ್ರಧಾನಿ ಜೆಸಿಂಡಾ ಆರ್ಡನ್ ಅವರ ಹೇಳಿಕೆ ಪಕ್ಷದ ನಾಯಕರು ಹಾಗೂ ದೇಶದ ಪ್ರಜೆಗಳಿಗೆ ಆಶ್ಚರ್ಯ ಉಂಟುಮಾಡಿದೆ. ಜೆಸಿಂಡಾ ರಾಜೀನಾಮೆ ನೀಡಿಕೆಗೂ ಮುನ್ನವೇ ಹತ್ತಾರು ಲೆಕ್ಕಾಚಾರಗಳು ಶುರುವಾಗಿವೆ.