ODIನಲ್ಲೂ ಶ್ರೇಯಸ್, ಅಕ್ಷರ್ ತಲೆಬಿಸಿ – ಸಿರಾಜ್ ಬೆಂಚ್ ಗಷ್ಟೇ ಸೀಮಿತನಾ?
2ನೇ ಪಂದ್ಯಕ್ಕೂ ಮೊದ್ಲೇ NZಗೆ ಆಘಾತ

ODIನಲ್ಲೂ ಶ್ರೇಯಸ್, ಅಕ್ಷರ್ ತಲೆಬಿಸಿ – ಸಿರಾಜ್ ಬೆಂಚ್ ಗಷ್ಟೇ ಸೀಮಿತನಾ?2ನೇ ಪಂದ್ಯಕ್ಕೂ ಮೊದ್ಲೇ NZಗೆ ಆಘಾತ

ನ್ಯೂಜಿಲೆಂಡ್ ವಿರುದ್ಧ ಮೊದಲನೇ ಏಕದಿನ ಪಂದ್ಯ ಗೆದ್ದಿರೋ ಭಾರತ ಸೆಕೆಂಡ್ ಮ್ಯಾಚ್​ಗೆ ರೆಡಿಯಾಗಿದೆ. ನಾಳೆ ಅಂದ್ರೆ ಶನಿವಾರ ವೆಲ್ಲಿಂಗ್ಟನ್ ರೀಜನಲ್ ಸ್ಟೇಡಿಯಂನಲ್ಲಿ ಪಂದ್ಯ ಫಿಕ್ಸ್ ಆಗಿದೆ. ಒಂದ್ಕಡೆ ಭಾರತ ಎರಡನೇ ಮ್ಯಾಚ್​ನೂ ಗೆದ್ದು ಡಾಮಿನೇಟ್ ಮಾಡೋ ಮೋಡ್​ನಲ್ಲಿದ್ರೆ ಕಿವೀಸ್ ಪಡೆ ಕಂ ಬ್ಯಾಕ್ ಗೆ ರೆಡಿಯಾಗ್ತಿದೆ. ಬಟ್ ಎರಡೂ ತಂಡಗಳಿಗೂ ಪ್ಲೇಯಿಂಗ್ 11ದೇ ತಲೆಬಿಸಿಯಾಗಿದೆ. ಭಾರತಕ್ಕೆ ಸ್ಟಾರ್​ಗಳೇ ಕೈಕೊಟ್ರೆ ಕಿವೀಸ್​ಗೆ ಪ್ಲೇಯರ್​ಗಳೇ ರೂಲ್ಡ್ ಔಟ್ ಆಗಿದ್ದಾರೆ.

ಇದನ್ನೂ ಓದಿ : RCB Vs MI ಫಸ್ಟ್ ಫೈಟ್ – ಬೆಂಗಳೂರಿಗೆ ಹೇಗಿದೆ ಶೆಡ್ಯೂಲ್?

2027ರ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೂ ಈ ಸರಣಿ ಗೆಲುವು ತುಂಬಾನೇ ಮುಖ್ಯ. ಅದ್ರಲ್ಲೂ 5 ಪಂದ್ಯಗಳ ಬಿಗ್ ಸಿರೀಸ್ ಇದು. ಮೊದಲ ಮ್ಯಾಚಲ್ಲೇ ಭಾರತ ಗೆದ್ದಿರೋದ್ರಿಂದ ಅದೇ ಪಾಸಿಟಿವ್ ವೈಬ್ಸ್​ನಲ್ಲಿ ಎರಡನೇ ಪಂದ್ಯದಲ್ಲೂ ಕಣಕ್ಕಿಳಿತಾರೆ. ಆದ್ರೆ ಮಿಚೆಲ್ ಸ್ಯಾಂಟ್ನರ್ ಕ್ಯಾಪ್ಟನ್ಸಿಯಲ್ಲಿ ಈಗಾಗ್ಲೇ ಟಿ-20ಐ ಸರಣಿ ಸೋತಿರೋದ್ರಿಂದ ಅಟ್​ಲಿಸ್ಟ್ ಏಕದಿನ ಸರಣಿ ಗೆದ್ದು ತವರಿನಲ್ಲಿ ಕಂ ಬ್ಯಾಕ್ ಮಾಡ್ಬೇಕು ಅಂತಾ ಕಿವೀಸ್ ಕೂಡ ಸ್ಪೆಷಲ್​ ಪ್ಲ್ಯಾನ್​ಗಳನ್ನ ಮಾಡ್ತಿದೆ. ಭಾರತ ಸ್ಟ್ರಾಂಗ್ ಆಗಿ ಕಾಣ್ತಿದ್ರೂ ಒಂದಷ್ಟು ವಿಚಾರಗಳಲ್ಲಿ ಅಲರ್ಟ್ ಆಗ್ಲೇಬೇಕಿದೆ. ಅದ್ರಲ್ಲೂ ಪಿಚ್​ ಇಲ್ಲಿ ಗೇಮ್ ಚೇಂಜರ್ ಆಗ್ಬೋದು.

ಮೊದಲ ಪಂದ್ಯದಲ್ಲಿ ವೇಗಿಗಳ ಅಬ್ಬರ.. ಎರಡನೇ ಪಂದ್ಯಕ್ಕೆ ಕಷ್ಟ!

ಮೊದಲ ಪಂದ್ಯ ನಡೆದಿದ್ದ ಆಕ್ಲೆಂಡ್‌ನಲ್ಲಿ ಭಾರತದ ವೇಗಿಗಳು ಮಿಂಚಿದ್ದರು. ಆದರೆ ವೆಲ್ಲಿಂಗ್ಟನ್‌ನ ಗಾಳಿ, ಸ್ವಿಂಗ್ ಮತ್ತು ಬೌನ್ಸ್ ಪರಿಸ್ಥಿತಿಗಳು ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗಕ್ಕೂ ಪರೀಕ್ಷೆಯಾಗಬಹುದು. ಹೀಗಾಗಿ ಭಾರತ ಕೆಲವು ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕಿದೆ. ವೆಲ್ಲಿಂಗ್ಟನ್‌ನಲ್ಲಿ ಗಾಳಿ ರಭಸವಾಗಿ ಬೀಸೋದ್ರಿಂದ  ಹೊಸ ಚೆಂಡಿನಲ್ಲಿ ಸ್ವಿಂಗ್ ಮತ್ತು ವೇಗಿಗಳಿಗೆ ಸಿಗುವ ನೆರವು ಭಾರತದ ಆರಂಭಿಕ ಬ್ಯಾಟರ್‌ಗಳಿಗೆ ಸವಾಲಾಗಬಹುದು. ಸೋ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭದಲ್ಲಿ ತಾಳ್ಮೆಯಿಂದ ಆಡಬೇಕಾಗುತ್ತೆ. ಪಿಚ್ ಅಷ್ಟೇ ಅಲ್ಲದೇ ಭಾರತ ತಂಡದಲ್ಲಿ ಕೆಲವೊಂದು ವಿಚಾರಗಳಲ್ಲಿ ಕಂ ಬ್ಯಾಕ್ ಮಾಡಬೇಕಿದೆ.

  ಭಾರತಕ್ಕೆ ಅಲರ್ಟ್ ಮೆಸೇಜ್!

ಮೊದಲ ಪಂದ್ಯದಂತೆಯೇ ಎರಡನೇ ಪಂದ್ಯದಲ್ಲೂ ಬೌಲಿಂಗ್ ಕಂಟ್ರೋಲ್

ಟಾಪ್ ಆರ್ಡರ್ ಬ್ಯಾಟಿಂಗ್ ಮೇಲೆ ಮಾತ್ರ ಡಿಪೆಂಡ್ ಆಗಬಾರದು

ಮೊದಲ ಪಂದ್ಯದಲ್ಲಿ 0ಗೆ ಔಟ್ ಆಗಿದ್ದ ರೋಹಿತ್ ಕಂ ಬ್ಯಾಕ್ ಮುಖ್ಯ

ಶ್ರೇಯಸ್ ಅಯ್ಯರ್ & ಅಕ್ಷರ್ ಪಟೇಲ್ ಕಡೆಯಿಂದ ಸಿಗದ ಸಪೋರ್ಟ್

ಕೆಎಲ್ ರಾಹುಲ್ ರನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡಿಸಿದ್ರೆ ಬೆಸ್ಟ್

ಮೊದಲ ಪಂದ್ಯದಂತೆಯೇ ಎರಡನೇ ಪಂದ್ಯದಲ್ಲೂ ಫೀಲ್ಡಿಂಗ್ ಎಫರ್ಟ್ಸ್

ಒಂದನೇ ಪಂದ್ಯ ಗೆದ್ದಿದ್ದೇವೆ ಎಂದ ಮಾತ್ರಕ್ಕೆ ಲೇಜಿ ಆಗೋಕೆ ಆಗಲ್ಲ. ಯಾಕಂದ್ರೆ ಟಿ-20ಐನಲ್ಲೇ ನೋಡಿ ಮೊದಲ ಮೂರು ಮ್ಯಾಚ್​ಗಳಲ್ಲಿ ಭಾರತ ಗೆದ್ರೆ ಲಾಸ್ಟ್ 2 ಮ್ಯಾಚಸ್​ನಲ್ಲಿ ಅವ್ರೇ ಗೆದ್ದಿದ್ದು. ಹೀಗಾಗಿ ಎರಡನೇ ಪಂದ್ಯಕ್ಕೂ ಮುನ್ನ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಬೇಕಾಗುತ್ತೆ.

2ನೇ ಪಂದ್ಯಕ್ಕೆ ಪ್ಲೇಯಿಂಗ್ 11

ಶುಭಮನ್ ಗಿಲ್

ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ

ಶ್ರೇಯಸ್ ಅಯ್ಯರ್

ಅಕ್ಷರ್ ಪಟೇಲ್

ಕೆಎಲ್ ರಾಹುಲ್

ನಮನ್ ಧೀರ್

ಅನ್ಶುಲ್ ಕಾಂಬೋಜ್

ಔಕಿಬ್ ನಬಿ

ಗುರ್ನೂರ್ ಬ್ರಾರ್

ಅರ್ಶದೀಪ್ ಸಿಂಗ್

ಹೀಗೆ ಆಲ್ಮೋಸ್ಟ್ ವಿನ್ನಿಂಗ್ ಕಾಂಬಿನೇಷನ್​ನೇ ಕಂಟಿನ್ಯೂ ಮಾಡ್ತಾರೆ. ಮೊಹಮ್ಮದ್ ಸಿರಾಜ್ ಈ ಮ್ಯಾಚಲ್ಲೂ ಬೆಂಚ್ ಕಾಯಬಹುದು. ಯಾಕಂದ್ರೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಚೆನ್ನಾಗಿ ಇದ್ದಿದ್ರಿಂದ ಚೇಂಜಸ್ ಮಾಡೋದು ಕಷ್ಟ. ಹೀಗಿದ್ರೂ ಕಿವೀಸ್​ನ ಸುಲಭವಾಗಿ ತಗೊಳ್ಳೋಕೆ ಆಗಲ್ಲ. ಇನ್ನು ಭಾರತವನ್ನ ಸೋಲಿಸಿ ಸರಣಿಯಲ್ಲಿ ಸಮಬಲ ಸಾಧಿಸೋಕೆ ನ್ಯೂಜಿಲೆಂಡ್ ತಮ್ಮ ಸ್ಪೆಷಲ್ ಸ್ಟ್ರಾಟಜಿಗಳನ್ನೂ ಬಳಸ್ಬೋದು. ಮೊದಲ ಪಂದ್ಯದಲ್ಲೇ ನೋಡಿ ಭಾರತ ಫಸ್ಟ್ ಓವರ್​ನಲ್ಲೇ ರೋಹಿತ್ ವಿಕೆಟ್ ಕಳ್ಕೊಂಡ್ರೂ ನೆಕ್ಸ್​ಟ್ 114 ರನ್​ಗಳವರೆಗೆ ವಿಕೆಟ್ಸ್ ಬಿದ್ದಿರಲಿಲ್ಲ. ಬಟ್ ನೆಕ್ಸ್​ಟ್ 136 ರನ್ಸ್ ವೇಳೆಗೆ 5 ವಿಕೆಟ್ಸ್ ಬಿದ್ದಿತ್ತು. ಯಾಕಂದ್ರೆ ನ್ಯೂಜಿಲೆಂಡ್ ವೇಗಿಗಳು ತಮ್ಮ ಸ್ಪೆಷಲ್ ಟ್ರಿಕ್ಸ್ ಬಳಸಿದ್ರು. ಶಾರ್ಟ್ ಬಾಲ್ ಟೆಕ್ನಿಕ್ ಮೂಲಕ ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್‌ ಮೇಲೆ ಪ್ರೆಶರ್ ಕ್ರಿಯೇಟ್ ಮಾಡಿದ್ರು.  ವೆಲ್ಲಿಂಗ್ಟನ್‌ನಲ್ಲೂ ಬಹುಶಃ ಇದೇ ತಂತ್ರ ಮಾಡಬಹುದು. ಹೀಗಾಗಿ ಮಿಡಲ್ ಆರ್ಡರ್ ಬ್ಯಾಟರ್‌ಗಳು ಬೌನ್ಸರ್‌ಗಳನ್ನು ಸಮರ್ಥವಾಗಿ ಫೇಸ್ ಮಾಡ್ಬೇಕಿದೆ. ಅದೂ ಅಲ್ದೇ ಕಿವೀಸ್​ನಲ್ಲೂ ಡೇಂಜರಸ್ ಬ್ಯಾಟರ್ಸ್ ಇದ್ದಾರೆ. ಫಸ್ಟ್ ಮ್ಯಾಚಲ್ಲಿ ಬೇಗ ಔಟ್ ಆದ್ರೂ ಸೆಕೆಂಡ್ ಮ್ಯಾಚಲ್ಲಿ ಕಂ ಬ್ಯಾಕ್ ಮಾಡ್ಬೋದು. ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಕ್ರೀಸ್ ಕಚ್ಚಿ ನಿಂತ್ರೆ ಮೋಸ್ಟ್ ಡೇಂಜರಸ್ ಆಗ್ತಾರೆ. ಸೋ ಎರಡನೇ ಪಂದ್ಯದಲ್ಲಿ ನೆಕ್ ಟು ನೆಕ್ ಫೈಟ್ ಇರೋದಂತೂ ಪಕ್ಕಾ.

Shantha Kumari

Leave a Reply

Your email address will not be published. Required fields are marked *