ಭಾರತದ ಗೆಲುವು ಕಸಿದ ಬ್ಯಾಡ್‌ಲೈಟ್ – RCB ಬೆಸ್ಟ್ ಟೀಂ ಎಂದ ಧೋನಿ
ಕನ್ನಡಿಗ ರಾಘು ಕಾಲಿಗೆ ಬಿದ್ದ ತಿಲಕ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ, ಅಂತರರಾಷ್ಟ್ರೀಯ ಪುರುಷರ ಟಿ20 ಕ್ರಿಕೆಟ್‌ನಲ್ಲಿ 200 ಗೆಲುವು ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಐತಿಹಾಸಿಕ ಸ್ಥಾನ ಪಡೆದಿದೆ. ಒತ್ತಡದ ಸನ್ನಿವೇಶದಲ್ಲಿ ತಂಡ ತೋರಿದ ಹೋರಾಟ ಈ ಸಾಧನೆಗೆ ಕಾರಣವಾಯಿತು. ಸತತವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ.
ನ್ಯೂಜಿಲೆಂಡ್ ವಿರುದ್ಧ2ನೇ ಟಿ20ಐ ಪಂದ್ಯ ಗೆಲ್ಲಿಸಿಕೊಟ್ಟ ತಿಲಕ್ ವರ್ಮಾ, ಭಾರತ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಕನ್ನಡಿಗ ರಾಘವೇಂದ್ರ ದಿವಗಿಯ ಕಾಲುಗಳಿಗೆ ನಮಸ್ಕರಿಸಿದ್ದು, ಈ ಫೋಟೋಗಳು ಸಖತ್ ವೈರಲ್ ಆಗ್ತಿವೆ. ಈ ಹಿಂದೆಯೂ ಒಮ್ಮೆ ತಿಲಕ್ ವರ್ಮಾ ಡ್ರೆಸ್ಸಿಂಗ್ ರೂಮ್’ನಲ್ಲಿ ಅವರ ಕಾಲಿಗೆ ಬಿದಿದ್ದರು. ಈ ಸೂರ್ಯಕುಮಾರ್ ಯಾದವ್ ಟಿ20 ತಂಡದ ನಾಯಕನಾಗಿದ್ದಾಗಲೂ ರಾಘವೇಂದ್ರನ ಕಾಲಿಗೆ ನಮಸ್ಕಾರ ಮಾಡುತ್ತಿದ್ದರು.
ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಆಟಗಾರರ ಮೇಲಿನ ಹೆಚ್ಚುತ್ತಿರುವ ಪಂದ್ಯದ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಿರಂತರ ಸರಣಿಗಳು ಮತ್ತು ಟೂರ್ನಿಗಳಿಂದ ಆಟಗಾರರಿಗೆ ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯ ಸಿಗುತ್ತಿಲ್ಲ. ಗಾಯದ ಸಮಸ್ಯೆಗಳನ್ನು ಕಡಿಮೆ ಮಾಡಲು ಕ್ರಿಕೆಟ್ ವೇಳಾಪಟ್ಟಿಯನ್ನು ರೂಪಿಸುವಾಗ ಆಟಗಾರರ ದೈಹಿಕ ಸಾಮರ್ಥ್ಯ ಮತ್ತು ಚೇತರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ
ಇದನ್ನೂ ಓದಿ: ತಿಲಕ್ ಹೊಸ CHASE ಮಾಸ್ಟರ್ – NOT OUT ಆದ್ರೆ 100% ಗೆಲುವು
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗದ ಮಧ್ಯಪ್ರದೇಶದ ಆಲ್‌ರೌಂಡರ್ ಸಾರಾಂಶ್ ಜೈನ್ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬಿಹಾರ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್ ಪಡೆದು ಎದುರಾಳಿ ತಂಡವನ್ನು ಕೇವಲ 99 ರನ್‌ಗಳಿಗೆ ಕಟ್ಟಿಹಾಕಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗದಿದ್ದರೂ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಸಾರಾಂಶ್, ಆಯ್ಕೆಗಾರರ ಗಮನ ಸೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ
ಐಪಿಎಲ್ 2027 ರ ಮಿನಿ ಹರಾಜು ಪ್ರಕ್ರಿಯೆಯು 2026 ರ ಡಿಸೆಂಬರ್ 16 ರಂದು ಗೋವಾದ ಐಟಿಸಿ ಗ್ರಾಂಡ್ ಗೋವಾ ಹೋಟೆಲ್‌ನಲ್ಲಿ ಬಿಗ್ ಆ್ಯಕ್ಷನ್ ನಡೆಯಲಿದೆ. ಈ ಹರಾಜಿಗೂ ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 15 ರಂದು ಬಿಸಿಸಿಐ ಅಧಿಕಾರಿಗಳು ಮತ್ತು ಎಲ್ಲಾ 10 ಫ್ರಾಂಚೈಸಿಗಳ ಮಾಲೀಕರ ನಡುವೆ ವಿಶೇಷ ಸಭೆ ನಡೆಯಲಿದೆ. ಇದರಲ್ಲಿ ಹರಾಜಿನ ನಿಯಮಾವಳಿಗಳ ಬಗ್ಗೆ ಅಂತಿಮ ಚರ್ಚೆ ನಡೆಯಲಿದೆ.
ಮಹೇಂದ್ರ ಸಿಂಗ್ ಧೋನಿ RCB ತಂಡವು ಬೆಳೆಯುತ್ತಿರುವ ರೀತಿಯನ್ನು ಮನಸಾರೆ ಕೊಂಡಾಡಿದ್ದಾರೆ. ಪೇಪರ್‌ನಲ್ಲಿ ನಿಮ್ಮ ತಂಡ ಎಷ್ಟು ಬಲಿಷ್ಠವಾಗಿದೆ ಎನ್ನುವುದು ಅಷ್ಟೇನೂ ಮುಖ್ಯವಲ್ಲ. ಪಂದ್ಯ ನಡೆಯುವ ದಿನ ನೀವು ಯಾವ ರೀತಿ ಆಡುತ್ತೀರಾ ಎನ್ನುವುದು ಮುಖ್ಯವಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ನಾವು ಲಯ ಕಂಡುಕೊಳ್ಳಲು ಪರದಾಡಿದ್ದೇವೆ ಎನ್ನುವುದು ಸತ್ಯ. ಅದೇ ಎರಡು ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಷ್ಟೇ ಚೆನ್ನಾಗಿ ಆಡಿದೆ ಎನ್ನುವುದು ಸತ್ಯ ಎಂದು ಧೋನಿ ಹೇಳಿದ್ದಾರೆ.
ಐಪಿಎಲ್ 2027ಕ್ಕೆ ಸಜ್ಜಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಎಂಟು ವರ್ಷಗಳಿಂದ ಬ್ಯಾಟಿಂಗ್ ಕೋಚ್ ಆಗಿದ್ದ ಮೈಕ್ ಹಸ್ಸಿ ತಂಡದಿಂದ ಹೊರಬಂದಿದ್ದಾರೆ. ಬೌಲಿಂಗ್ ಕೋಚ್ ಎರಿಕ್ ಸಿಮನ್ಸ್ ಸೇರಿದಂತೆ ಇತರ ಸಿಬ್ಬಂದಿಯಲ್ಲೂ ಬದಲಾವಣೆ ನಡೆದಿದೆ. ಗರೆಥ್ ಬ್ಯಾಟಿ ಅವರನ್ನು ಸಿಎಸ್‌ಕೆ ತಂಡದ ನೂತನ ಅಸಿಸ್ಟೆಂಟ್ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.
ಭಾರತ ಎ ಮತ್ತು ನ್ಯೂಝಿಲೆಂಡ್ ಎ ನಡುವಣ 3 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ. ರೋಚಕ ಘಟ್ಟ ತಲುಪಿದ್ದ ಈ ಪಂದ್ಯದಲ್ಲಿ ಭಾರತ ಎ ತಂಡದ ಗೆಲುವಿಗೆ ಕೇವಲ 1 ವಿಕೆಟ್ ಅಗತ್ಯವಿದ್ದಾಗ ಮಂದ ಬೆಳಕು ಎದುರಾದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಹೀಗಾಗಿ ಗೆಲುವಿನ ಹೊಸ್ತಿಲಲ್ಲಿದ್ದ ಭಾರತ ಎ ತಂಡಕ್ಕೆ ಕೇವಲ 1 ವಿಕೆಟ್ ದೂರದಲ್ಲಿ ಜಯ ಕೈತಪ್ಪಿದಂತಾಗಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜು ನಾಳೆ ಸಂಜೆ ಕೇರಳದ ಕೊಚ್ಚಿಯಲ್ಲಿರುವ ಗ್ರಾಂಡ್ ಹಯಾತ್ ಹೋಟೆಲ್‌ನಲ್ಲಿ ನಡೆಯಲಿದೆ. ಈ 146 ಆಟಗಾರ್ತಿಯರಲ್ಲಿ ಮೊದಲ ಸೆಟ್ನಲ್ಲಿ 6 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಸೋಫಿಯಾ ಡಂಕ್ಲಿ, ಗುಣಾಲನ್ ಕಮಲಿನಿ , ರಾಘವಿ ಬಿಸ್ತ್ , ತೇಜಲ್ ಹಸಬ್ನಿಸ್, ಆಯುಷಿ ಸೋನಿ ಮೊದಲ ಸುತ್ತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟೀಂ ಇಂಡಿಯಾ ಆಟಗಾರ ವೈಭವ್ ಸೂರ್ಯವಂಶಿ ಅವರ 10 ವರ್ಷದ ಸಹೋದರ ಆಶೀರ್ವಾದ್ ಸೂರ್ಯವಂಶಿ ಸ್ಥಳೀಯ ಟೂರ್ನಮೆಂಟ್‌ನಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 87 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ವೈಭವ್ ಬೆನ್ನಲ್ಲೇ ಅವರ ಕುಟುಂಬದಿಂದ ಮತ್ತೊಂದು ಪ್ರತಿಭೆ ಹೊರಹೊಮ್ಮುತ್ತಿದೆ.

ನೋಡಿರಿ

