ವಿಶ್ವದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ನ್ಯೂಯಾರ್ಕ್ ನಂಬರ್ ಒನ್ – ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರು
ವಿಶ್ವದ ಶ್ರೀಮಂತ ನಗರಗಳ ಪಟ್ಟಿ 2023ರ ಪ್ರಕಾರ ಯುನೈಟೆಡ್ ನೇಷನ್ ನ ನ್ಯೂಯಾರ್ಕ್ ನಗರ ಅತೀ ಶ್ರೀಮಂತ ನಗರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಟಾಪ್ 10 ಶ್ರೀಮಂತ ನಗರಗಳ ಪಟ್ಟಿಯಲ್ಲಿ ಅಮೆರಿಕಾದ ನ್ಯೂಯಾರ್ಕ್ ನಗರ ಸೇರಿದಂತೆ ಜಪಾನ್‌ನ ಟೋಕಿಯೋ, ಅಮೆರಿಕಾದ ದ ಬೇ ಏರಿಯಾ, ಯುನೈಟೆಡ್ ಕಿಂಗ್‌ಡಮ್‌ನ ಲಂಡನ್, ಸಿಂಗಾಪುರ್, ಲಾಸ್ ಎಂಜಲೀಸ್, ಚೀನಾದ ಹಾಂಗ್‌ಕಾಂಗ್, ಬೀಜಿಂಗ್, ಶಾಂಘೈ ಹಾಗೂ ಆಸ್ಟ್ರೇಲಿಯಾದ ಸಿಡ್ನಿ ಇವೆ.
ಇದನ್ನೂ ಓದಿ: ಸ್ನೇಹಕ್ಕೂ ಸೈ.. ಸಂಬಂಧಕ್ಕೂ ಸೈ – ದೇಶದಲ್ಲಿ ಸಂತೋಷವಾಗಿರುವ ರಾಜ್ಯಗಳಲ್ಲಿ ಮಿಜೋರಾಂ ನಂಬರ್ 1..!
ಇವಲ್ಲದೇ 1.25 ಲಕ್ಷ ಲಕ್ಷಾಧಿಪತಿಗಳನ್ನು ಹೊಂದುವ ಮೂಲಕ ದೇಶದ ಐದು ಮಹಾನಗರಗಳು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 59,400 ಮಿಲಿಯನೇರ್‌ಗಳನ್ನು ಹೊಂದಿರುವ ಮುಂಬೈ, 30,200 ಲಕ್ಷ ಜನರನ್ನು ಹೊಂದಿರುವ ಮೂಲಕ ರಾಷ್ಟ್ರ ರಾಜಧಾನಿ ದೆಹಲಿ, 12,600 ಲಕ್ಷಾಧಿಪತಿಗಳನ್ನು ಹೊಂದಿರುವ ಗಾರ್ಡನ್ ಸಿಟಿ ಬೆಂಗಳೂರು, 12,100 ಜನ ಲಕ್ಷಾಧಿಪತಿಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, 11,100 ಲಕ್ಷಾಧಿಪತಿಗಳನ್ನು ಹೊಂದಿರುವ ಹೈದರಾಬಾದ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಲಂಡನ್‌ನ ಹೂಡಿಕೆ ವಲಸೆ ಸಲಹಾ ಸಂಸ್ಥೆ ಹೆನ್ಲಿ & ಪಾರ್ಟನರ್ ಅತೀಹೆಚ್ಚು ಮಿಲಿಯನೇರ್ ಗಳನ್ನು ಹೊಂದಿರುವ ವಿಶ್ವದ ಶ್ರೀಮಂತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ ಈ ಎಲ್ಲಾ ಅಂಕಿಅಂಶಗಳು ಡಿಸೆಂಬರ್ 31, 2022 ರವೆರೆಗಿನ ಸಂಪತ್ತನ್ನು ಗಣನೆಗೆ ತೆಗೆದುಕೊಂಡು ಮಾಡಲಾಗಿದೆ.