ಭಾರತ ಆಯ್ತು, ನ್ಯೂಯಾರ್ಕ್‌ನಲ್ಲೂ ಟಿಕ್‌ಟಾಕ್ ಬ್ಯಾನ್! –  ಕಾರಣವೇನು ಗೊತ್ತಾ?

ಭಾರತ ಆಯ್ತು, ನ್ಯೂಯಾರ್ಕ್‌ನಲ್ಲೂ ಟಿಕ್‌ಟಾಕ್ ಬ್ಯಾನ್! –  ಕಾರಣವೇನು ಗೊತ್ತಾ?

 ವಾಷಿಂಗ್ಟನ್: ಪ್ರಪಂಚದಾದ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಅಪ್ಲಿಕೇಷನ್‌ ಟಿಕ್‌ಟಾಕ್‌ ಭಾರತದಲ್ಲಿ ಈಗಾಗ್ಲೇ ಬ್ಯಾನ್‌ ಆಗಿದೆ. ಇದೀಗ ಮತ್ತೊಂದು ದೇಶ ಭದ್ರತಾ ಕಾಳಜಿಯ ಕಾರಣದಿಂದ ಸರ್ಕಾರಿ ಸಾಧನಗಳಲ್ಲಿ ಟಿಕ್‌ಟಾಕ್‌ ಅನ್ನು ಬ್ಯಾನ್‌ ಮಾಡಿದೆ.

ಚೀನಾ ಮೂಲದ ವೀಡಿಯೋ ಹಂಚಿಕೆ ಪ್ಲಾಟ್‌ಪಾರ್ಮ್ ಟಿಕ್‌ಟಾಕ್ ಅನ್ನು ನ್ಯೂಯಾರ್ಕ್‌ನಲ್ಲಿ ಬ್ಯಾನ್ ಮಾಡಲಾಗಿದೆ. ಟಿಕ್‌ಟಾಕ್ ನಗರದ ತಾಂತ್ರಿಕ ಜಾಲಗಳಿಗೆ ಭದ್ರತಾ ಬೆದರಿಕೆಗಳನ್ನು ಒಡ್ಡಿರುವ ಹಿನ್ನೆಲೆ ನ್ಯೂಯಾರ್ಕ್‌ ನಲ್ಲಿ ಟಿಕ್‌ಟಾಕ್‌ ಅನ್ನು ಬ್ಯಾನ್‌ ಮಾಡಲಾಗಿದೆ ಎಂದು ನ್ಯೂಯಾರ್ಕ್ ಸಿಟಿಯ ಮೇಯರ್ ಎರಿಕ್ ಆಡಮ್ಸ್ ಆಡಳಿತ ತಿಳಿಸಿದೆ. ಈ ಮೂಲಕ ಟಿಕ್‌ಟಾಕ್ ಅನ್ನು ನಿರ್ಬಂಧಿಸಿರುವ 24 ರಾಜ್ಯಗಳ ಪಟ್ಟಿಗೆ ನ್ಯೂಯಾರ್ಕ್ ಕೂಡಾ ಸೇರಿಕೊಳ್ಳುತ್ತದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಇದೇ ಇನ್‌ಸ್ಟಾಗ್ರಾಮ್‌ ನಲ್ಲಿ ನಂ. 1 ಪಾರಂಪರಿಕ ತಾಣ – ವಿಶ್ವದ 7 ಅದ್ಬುತಗಳಲ್ಲಿ ಯಾರು ಮುಂದು?

ನ್ಯೂಯಾರ್ಕ್‌ನ ಎಲ್ಲ ಏಜೆನ್ಸಿಗಳು 30 ದಿನಗಳ ಒಳಗೆ ಅಪ್ಲಿಕೇಶನ್ ಅನ್ನು ಅನ್‌ಇನ್ಸ್ಟಾಲ್ ಮಾಡಬೇಕಾಗುತ್ತದೆ. ಸರ್ಕಾರ ಒದಗಿಸಿದ ಮೊಬೈಲ್ ಸಾಧನಗಳು ಹಾಗೂ ನೆಟ್‌ವರ್ಕ್‌ಗಳಲ್ಲಿ ಇನ್ನು ಮುಂದೆ ಟಿಕ್‌ಟಾಕ್ ಹಾಗೂ ಅದರ ವೆಬ್‌ಸೈಟ್‌ಗೆ ಪ್ರವೇಶ ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ. ನ್ಯೂಯಾರ್ಕ್ ರಾಜ್ಯಾಡಳಿತ ಕೆಲವು ವಿನಾಯಿತಿಗಳೊಂದಿಗೆ 3 ವರ್ಷಗಳಿಗೂ ಹೆಚ್ಚು ಕಾಲ ಟಿಕ್‌ಟಾಕ್ ನಿಷೇಧಿಸಿ ಆದೇಶ ಹೊರಡಿಸಿದೆ.

ಟಿಕ್‌ಟಾಕ್ ಅನ್ನು 15 ಕೋಟಿಗೂ ಹೆಚ್ಚು ಅಮೆರಿಕನ್ನರು ಬಳಸುತ್ತಿದ್ದಾರೆ. ಇದು ಭದ್ರತೆಗೆ ಅಪಾಯ ಉಂಟುಮಾಡುತ್ತಿರುವುದರಿಂದ ಸರ್ಕಾರಿ ಸಾಧನಗಳಲ್ಲಿ ಬ್ಯಾನ್ ಮಾಡಲಾಗುತ್ತಿದೆ. ಭಾರತದಲ್ಲಿ ಟಿಕ್‌ಟಾಕ್ ಅನ್ನು 2020ರ ಜೂನ್‌ನಲ್ಲಿಯೇ ಬ್ಯಾನ್ ಮಾಡಲಾಗಿದೆ.

suddiyaana