ಡಿ.31 ರಂದೇ ಈ ದೇಶದಲ್ಲಿ ನ್ಯೂ ಇಯರ್! – ಹೊಸ ವರ್ಷಾಚರಣೆಯಲ್ಲೂ ಇಷ್ಟೊಂದು ವ್ಯತ್ಯಾಸ?

ಡಿ.31 ರಂದೇ ಈ ದೇಶದಲ್ಲಿ ನ್ಯೂ ಇಯರ್! – ಹೊಸ ವರ್ಷಾಚರಣೆಯಲ್ಲೂ ಇಷ್ಟೊಂದು ವ್ಯತ್ಯಾಸ?

2023ಕ್ಕೆ ಬೈ ಬೈ ಹೇಳಿ 2024ನ್ನ ಗ್ರ್ಯಾಂಡ್ ಆಗಿ ವೆಲ್ಕಂ ಮಾಡಿದ್ದಾಯ್ತು. ಹಳೇ ಕ್ಯಾಲೆಂಡರ್ ಎಸೆದು ಹೊಸ ಕ್ಯಾಲೆಂಡರ್ ಮನೆಗೆ ತಂದಾಯ್ತು. ಆದ್ರೆ ನಿಮಗೆ ಗೊತ್ತಾ ಹೊಸ ವರ್ಷದ ಆಚರಣೆಯನ್ನು ಹಲವೆಡೆ ಬೇರೆ ಬೇರೆ ದಿನಗಳಂದು ಆಚರಿಸಲಾಗುತ್ತದೆ. ಕೆಲವೆಡೆ ಡಿಸೆಂಬರ್ 31ರಂದೇ ಸೆಲೆಬ್ರೇಟ್ ಮಾಡ್ತಾರೆ.  ಇನ್ನೂ ಕೆಲ ಕಡೆ ಜನವರಿ 1ರಂದು ಆಚರಿಸಲಾಗುತ್ತದೆ. ಹೊಸ ವರ್ಷದ ಬಗೆಗಿನ ಅಚ್ಚರಿಯ ಮಾಹಿತಿ ಇಲ್ಲಿದೆ.

ನಾವು ನೀವೆಲ್ಲಾ ಮಧ್ಯರಾತ್ರಿ 12 ಗಂಟೆಯಿಂದಲೇ ಹ್ಯಾಪಿ ನ್ಯೂ ಇಯರ್‌ ಅಂತಾ ಸಂಭ್ರಮಿಸುತ್ತಾ ಇದ್ದೇವೆ. ಕೆಲವ್ರು ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿದ್ದಾರೆ. ಇನ್ನೂ ಕೆಲವ್ರು ಫ್ಯಾಮಿಲಿ ಸಮೇತ ಪಿಕ್ನಿಕ್ ಹೋಗಿದ್ದಾರೆ. ಮತ್ತೊಂದಷ್ಟು ಜನ ಸೋಮವಾರ ರಜೆ ಇಲ್ಲ ಅನ್ಕೊಂಡು ಡ್ಯೂಟಿಗೆ ಹೋಗಿದ್ದಾರೆ. ಆದ್ರೆ ನ್ಯೂ ಇಯರ್​ನ ಜಗತ್ತಿನ ಎಲ್ಲಾ ರಾಷ್ಟ್ರಗಳು ಒಂದೇ ದಿನ ಸೆಲೆಬ್ರೇಟ್ ಮಾಡೋದಿಲ್ಲ. ವಿವಿಧ ದೇಶಗಳು ತಮ್ಮ ಸಂಪ್ರದಾಯಗಳು ಮತ್ತು ಹಬ್ಬಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.

ಇದನ್ನೂ ಓದಿ: ಹೊಸವರ್ಷಕ್ಕೆ ಸಿಬ್ಬಂದಿಗೆ ಗುಡ್‌ನ್ಯೂಸ್‌ ಕೊಟ್ಟ ಬಿಎಂಟಿಸಿ – 6,960 ಕೇಸ್‌ಗಳು ಖುಲಾಸೆ!

ಸಾಮಾನ್ಯವಾಗಿ ಹೊಸ ವರ್ಷ ಎಂದಾಗ ಆಸ್ಟ್ರೇಲಿಯಾ, ಅಮೇರಿಕಾಗಳಲ್ಲಿ ಸಿಡಿಮದ್ದು ಸಿಡಿಸುವುದನ್ನು ನಾವು ಕಾಣುತ್ತೇವೆ. ಆದರೆ ವಾಸ್ತವವಾಗಿ ಇದು ಕೇವಲ ಪ್ರಾತಿನಿಧಿಕವಷ್ಟೇ. ವಿಶ್ವದಲ್ಲಿ ಮೊದಲು ಹೊಸ ವರ್ಷವನ್ನು ಸ್ವಾಗತಿಸೋದು ಒಸಿಯಾನಿಯಾದ ಜನ. ಟೊಂಗಾ, ಸಮೊವಾ, ಕಿರಬಾಸ್ ದೇಶಗಳು ಹೊಸ ವರ್ಷವನ್ನು ಮೊದಲು ಸ್ವಾಗತಿಸುತ್ತಾರೆ. ಈ ಸಮಯದಲ್ಲಿ ಭಾರತದಲ್ಲಿ ಡಿಸೆಂಬರ್ 31ರ ಮಧ್ಯಾಹ್ನ 3.30 ಆಗಿರುತ್ತದೆ. ಅಂತೆಯೇ ಯುನೈಟೆಡ್ ಸ್ಟೇಟ್ಸ್ ಹತ್ತಿರದ ಜನವಸತಿಯಿಲ್ಲದ ದ್ವೀಪಗಳಾದ ಬೇಕರ್ ಐಲ್ಯಾಂಡ್ ಮತ್ತು ಹೌಲ್ಯಾಂಡ್​ಗಳು ಹೊಸ ವರ್ಷವನ್ನು ಭಾರತೀಯ ಕಾಲಮಾನದ ಪ್ರಕಾರ ಜನವರಿ 1 ರ ಮುಂಜಾನೆ 5.30ಕ್ಕೆ ಸೆಲೆಬ್ರೇಟ್ ಮಾಡುತ್ತವೆ. ಇದಕ್ಕೆ ಕಾರಣ ಸಮಯ.

ಭಾರತ ಮತ್ತು ವಿದೇಶಿ ಸಮಯಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಭಾರತಕ್ಕಿಂತ ಕೆಲ ದೇಶಗಳು ಹೊಸ ವರ್ಷವನ್ನು ನಮಗಿಂತ ಮೊದಲು ಆಚರಿಸುತ್ತವೆ. ಜಗತ್ತಿನಲ್ಲಿ ನ್ಯೂ ಇಯರ್ ಆಚರಣೆಯಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ. ಅದೆಲ್ಲಾ ಏನೇ ಇದ್ರೂ ನಾವು 2024ನ್ನ ಸಂಭ್ರಮದಿಂದ ಸ್ವಾಗತಿಸೋಣ. ಖುಷಿಯಿಂದ ಬದುಕೋಣ.

Shwetha M