ಸಿಂಗಾಪುರದಲ್ಲಿ ಜಿರಳೆಯ ಹೊಸ ಪ್ರಭೇದ ಪತ್ತೆ – ಪೋಕೆಮಾನ್ ಎಂದು ನಾಮಕರಣ..!
ಸಿಂಗಾಪುರದಲ್ಲಿ ಜಿರಳೆಯ ಹೊಸ ಪ್ರಭೇದ ಪತ್ತೆಯಾಗಿದ್ದು ಅದಕ್ಕೆ ನಾಮಕರಣ ಕೂಡಾ ಮಾಡಲಾಗಿದೆ. ಹೊಸ ಪ್ರಭೇದದ ಜಿರಳೆಗೆ ಪೋಕೆಮಾನ್ ಎಂದು ಹೆಸರಿಡಲಾಗಿದೆ. ಸಿಂಗಾಪುರದಲ್ಲಿ ಪತ್ತೆಯಾದ ಹೊಸ ಜಾತಿಯ ಜಿರಳೆ ಪತ್ತೆಯಾಗಿದೆ. ಈ ಜಾತಿಯ ಹೆಸರು ಫೆರೋಮೋಸಾ. ಜಿರಳೆಯನ್ನು ಹೋಲುವ ಪೋಕೆಮಾನ್ ಎಂಬ ಕಾರ್ಟೂನ್ ಆಧಾರವಾಗಿಟ್ಟುಕೊಂಡು, ಪೋಕೆ ಮಾನ್ ಎಂಬ ಹೆಸರಿಡಲಾಗಿದೆ. ಈ ಪೋಕೆಮಾನ್ ಪಾತ್ರವನ್ನು ವಿಡಿಯೋ ಗೇಮ್‌ನ ಏಳನೇ ಸರಣಿಯಲ್ಲಿ ಕಾಣಬಹುದು. ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಲೀ ಕಾಂಗ್ ಚಿಯಾನ್ ಪ್ರಕಾರ, ಈ ಜಿರಳೆ ನೋಕ್ಟಿಕೋಲಿಡೆ ಕುಟುಂಬಕ್ಕೆ ಸೇರಿದ್ದು, ಅದರಲ್ಲಿ 32 ಜಾತಿಗಳು ಇಲ್ಲಿಯವರೆಗೆ ತಿಳಿದಿವೆ. ಇದು ಅತ್ಯಂತ ಸೂಕ್ಷ್ಮವಾದ ಜಿರಳೆ ವರ್ಗದ ಅಡಿಯಲ್ಲಿ ಬರುತ್ತದೆ. ಇದು ಸಿಂಗಾಪುರದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ.
ಇದನ್ನೂ ಓದಿ: ಮೊಬೈಲ್ ನಲ್ಲಿ ಸೆರೆಯಾಯ್ತು ಹಾರುವ ವಿಚಿತ್ರ ಹಾವು – ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್!
2016ರಲ್ಲಿ, ಸಿಂಗಾಪುರದಲ್ಲಿ ಕೀಟಗಳ ವೈವಿಧ್ಯತೆಯ ಬಗ್ಗೆ ತಿಳಿಯಲು ಕೀಟ ಸಮೀಕ್ಷೆಯನ್ನು ನಡೆಸಲಾಯಿತು. ಇದರಲ್ಲಿ ಜಿರಳೆಗಳನ್ನು ನೈಸರ್ಗಿಕವಾಗಿ ಕಂಡುಹಿಡಿಯಲಾಯಿತು. ಲೀ ಕಾಂಗ್ ಚಿಯಾನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಫೂ ಮಾವೊಶೆಂಗ್ ಮತ್ತು ಯುಪಿಎಲ್ಬಿ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿನ ಕ್ರಿಸ್ಟಿಯನ್ ಲುಕಾನಾಸ್ ಇತ್ತೀಚೆಗೆ ತಮ್ಮ ಆವಿಷ್ಕಾರದ ಕುರಿತು ಲೇಖನವನ್ನು ಪ್ರಕಟಿಸಿದರು. ಮಾವೊಶೆಂಗ್ ಕೂಡ ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.