ಬಸ್‌ ನಿಂದ ಬಿದ್ದು ಬಾಲಕಿ ಸಾವು – ಸಾರಿಗೆ ನಿಗಮದಿಂದ ಹೊಸ ರೂಲ್ಸ್‌! 

ಬಸ್‌ ನಿಂದ ಬಿದ್ದು ಬಾಲಕಿ ಸಾವು – ಸಾರಿಗೆ ನಿಗಮದಿಂದ ಹೊಸ ರೂಲ್ಸ್‌! 

ಬೆಂಗಳೂರು: ಹಾವೇರಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿರುವ ಬಸ್ಸಿನಿಂದ ಬಿದ್ದು ಸಾವನ್ನಪ್ಪಿದ್ದಳು. ಇದೀಗ ಇಂತಹ ಘಟನೆ ಮತ್ತೆ ಮರುಕಳಿಸಬಾರದೆಂದು ಸಾರಿಗೆ ನಿಗಮ ಹೊಸ ಆದೇಶವೊಂದನ್ನು ಜಾರಿ ಮಾಡಿದೆ. ಇನ್ನು ಮುಂದೆ ಬಸ್ ಸಂಚಾರಕ್ಕೂ ಮುನ್ನ ಬಸ್ ಬಾಗಿಲು ಮುಚ್ಚಿರುವುದು ಕಡ್ಡಾಯವಾಗಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಸಾರಿಗೆ ನಿಗಮ ಸೂಚಿಸಿದೆ.

ಇದನ್ನೂ ಓದಿ:‌ ಉಚಿತ ಬಸ್‌ ಪ್ರಯಾಣ – ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ

ಬಸ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಯಾಣಿಕರು ಇರುತ್ತಾರೆ. ಅನೇಕರು ಬಸ್‌ ಮೆಟ್ಟಿಲಿನಲ್ಲಿಯೇ ನೇತಾಡಿಕೊಂಡು ಪ್ರಯಾಣಿಸುತ್ತಾರೆ. ಇದರಿಂದಾಗಿ ಅವಘಡಗಳು ಸಂಭವಿಸುತ್ತವೆ. ಹೀಗಾಗಿ ಸಾರಿಗೆ ನಿಗಮ ಹೊಸ ಆದೇಶ ಜಾರಿ ಮಾಡಿದೆ. ಇನ್ನು ಮುಂದೆ ಸಂಚಾರಕ್ಕೂ ಮುನ್ನ ಬಾಗಿಲು ಮುಚ್ಚಿರುವುದು ಕಡ್ಡಾಯವಾಗಿ ಖಾತ್ರಿಪಡಿಸಿಕೊಳ್ಳಬೇಕು. ನಿರ್ವಾಹಕರ ಸೂಚನೆ ಬಳಿಕವೇ ವಾಹನವನ್ನು ಚಾಲಕರು ಚಾಲನೆ ಮಾಡಬೇಕು. ಫುಟ್ ಬೋರ್ಡ್‍ನಲ್ಲಿ ನಿಂತು ಪ್ರಯಾಣಿಸದಂತೆ ಪ್ರಯಾಣಿಕರಿಗೆ ಸೂಚನೆ ಕೊಡಬೇಕು. ಬಸ್ ನಿಲ್ದಾಣ ತಲುಪುವ ಮುನ್ನ ಬಾಗಿಲನ್ನು ತೆರೆಯಬಾರದು ಎಂದು ಸೂಚಿಸಿದ್ದುಯ, ಈ ಆದೇಶವನ್ನು ಸಾರಿಗೆ ಸಿಬ್ಬಂದಿ ಕಟ್ಟುನಿಟ್ಟಾಗಿ ಪಾಲಿಸುವಂತೆ ನಿಗಮ ಆದೇಶ ಹೊರಡಿಸಿದೆ.

ಹಾವೇರಿಯಲ್ಲಿ 14 ವರ್ಷದ ಮಧು ಕುಂಬಾರ ಎಂಬ ಬಾಲಕಿ ಸೋಮವಾರ ಶಾಲೆಗೆ ತೆರಳುವ ವೇಳೆ ಬಸ್‍ನಿಂದ ಆಯತಪ್ಪಿ ಕೆಳಗಡೆ ಬಿದ್ದು ಸಾವನ್ನಪ್ಪಿದ್ದಳು. ಇದೀಗ ಇಂತಹ ಘಟನೆ ಮತ್ತೆ ಮರುಕಳಿಸಬಾರದೆಂದು ಸಾರಿಗೆ ನಿಗಮ ಈ ಆದೇಶ ಹೊರಡಿಸಿದೆ.

suddiyaana