ವಾಹನ ಸವಾರರಿಗೆ ಹೊಸ ರೂಲ್ಸ್! – ಇನ್ನುಮುಂದೆ ವಾಹನ ಸೀಜ್ ಆದ್ರೆ ನೇರ  ಗುಜುರಿಗೆ!

ವಾಹನ ಸವಾರರಿಗೆ ಹೊಸ ರೂಲ್ಸ್! – ಇನ್ನುಮುಂದೆ ವಾಹನ ಸೀಜ್ ಆದ್ರೆ ನೇರ  ಗುಜುರಿಗೆ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಚಾರಿ ಪೊಲೀಸರು ವಾಹನ ಸವಾರರ ಮೇಲೆ ಕ್ರಮ ಕೈಗೊಂಡ್ರೂ ರೂಲ್ಸ್‌ ಬ್ರೇಕ್‌ ಮಾಡುತ್ತಲೇ ಇದ್ದಾರೆ. ಸಿಗ್ನಲ್ ಜಂಪ್, ರಾಂಗ್ ಸೈಡ್, ಸೀಟ್ ಬೆಲ್ಟ್ ಸೇರಿದಂತೆ ಹಲವು ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ  ಸಾರಿಗೆ ಇಲಾಖೆ ರೂಲ್ಸ್‌ ಬ್ರೇಕ್‌ ಮಾಡಿದ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲು ಹೊಸ ಪ್ಲಾನ್‌ವೊಂದನ್ನ ಮಾಡಿದೆ.

ಇದನ್ನೂ ಓದಿ: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರಿಗೆ ಬಿಡುಗಡೆ ಭಾಗ್ಯ – ವಿದೇಶಾಂಗ ವ್ಯವಹಾರ ಸಚಿವಾಲಯ ಮಾಹಿತಿ

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇತರ ನಗರ, ಪಟ್ಟಣಗಳಲ್ಲಿ ವಾಹನ ಸವಾರರು ನಿಮಯ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ 30 ಸಾವಿರ, 50 ಸಾವಿರ, 1 ಲಕ್ಷ ರೂಪಾಯಿ ದಂಡ ಬಾಕಿ ಉಳಿಸಿಕೊಂಡ ಘಟನೆಗಳು ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಸಾರಿಗೆ ಇಲಾಖೆ ಹೊಸ ಸೂತ್ರ ಮುಂದಿಟ್ಟಿದೆ. ಇದುವರೆಗೆ ದುಬಾರಿ ದಂಡ ಕಟ್ಟದ ವಾಹನಗಳನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಯಲ್ಲಿ ಇಡಲಾಗುತ್ತಿತ್ತು. ದಂಡ ಕಟ್ಟಿದ ಬಳಿಕ ವಾಹನ ಮರಳಿ ನೀಡಲಾಗುತ್ತದೆ. ಆದರೆ ಇನ್ನುಮುಂದೆ ವಾಹನಗಳನ್ನು ಮಾಲೀಕರಿಗೆ ವಾಪಸ್‌ ನೀಡಲ್ಲ. ಮೊದಲ ಹಂತದಲ್ಲಿ 50 ಸಾವಿರ ರೂಪಾಯಿಗೂ ಅಧಿಕ ಮೊತ್ತದ ದಂಡ ಬಾಕಿ ಉಳಿಸಿಕೊಂಡ ವಾಹನಗಳನ್ನು ಸೀಜ್ ಮಾಡಿ ಗುಜುರಿಗೆ ಹಾಕುವ ಹೊಸ ನಿಯಮ ಜಾರಿಗೆ ತರಲು ಪ್ಲ್ಯಾನ್‌ ಮಾಡಿದೆ.

ಹೊಸ ನಿಯಮದ ಪ್ರಕಾರ, ದುಬಾರಿ ದಂಡ ಪಾವತಿ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಗುಜುರಿಗೆ ಹಾಕಲಾಗುತ್ತದೆ. ಈ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರ ಈ ಪ್ರಸ್ತಾವನೆಯನ್ನು ಪರಿಶೀಲಿಸಲು ಮುಂದಾಗಿದೆ. ಸಾರಿಗೆ ಇಲಾಖೆ ಈ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಂಡರೆ ಹೊಸ ಕಾನೂನು ಜಾರಿಗೆ ಬರಲಿದೆ.

Shwetha M