ಅಪಾರ್ಟ್‌ಮೆಂಟ್‌ನಲ್ಲಿ ಪ್ರಾಣಿ ಸಾಕುವವರಿಗೆ ಹೊಸ ರೂಲ್ಸ್‌! – ಪ್ರಾಣಿಪ್ರಿಯರನ್ನು ಕೆರಳಿಸಿದ ಹೊಸ ನಿಯಮ!

ಅಪಾರ್ಟ್‌ಮೆಂಟ್‌ನಲ್ಲಿ ಪ್ರಾಣಿ ಸಾಕುವವರಿಗೆ ಹೊಸ ರೂಲ್ಸ್‌! – ಪ್ರಾಣಿಪ್ರಿಯರನ್ನು ಕೆರಳಿಸಿದ ಹೊಸ ನಿಯಮ!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಪ್ರಾಣಿ ಪ್ರಿಯರ ಸಂಖ್ಯೆ ಹೆಚ್ಚಾಗಿದೆ. ಅನೇಕು ಸಾಕು ಪ್ರಾಣಿಗಳನ್ನು ಅರ್ಪಾರ್ಟ್‌ಮೆಂಟ್‌ಗಳಲ್ಲಿ, ಮನೆಗಳಲ್ಲಿ ಸಾಕುತ್ತಿದ್ದಾರೆ. ಇದೀಗ ಇಲ್ಲೊಂದು ಅಪಾರ್ಟ್‌ಮೆಂಟ್‌ ಅಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನಿಯಮವೊಂದನ್ನು ಜಾರಿ ಮಾಡಿದೆ. ಈ ರೂಲ್ಸ್‌ ಪ್ರಾಣಿಗಳನ್ನು ಸಾಕುವವರಿಗೆ ತಲೆನೋವಾಗಿ ಪರಿಣಮಿಸಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವವರಿಗೆ ಮನೆ ಮಾಲೀಕರು ಹೊಸ ಹೊಸ ರೂಲ್ಸ್‌ಗಳನ್ನು ಜಾರಿ ಮಾಡುತ್ತಲೇ ಇರುತ್ತಾರೆ. ಇದೀಗ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸಾವಿರಕ್ಕೂ ಹೆಚ್ಚು ನಿವಾಸಿಗಳು ವಾಸಿಸುವ ಮಹಾವೀರ್ ಅಪಾರ್ಟ್‌ಮೆಂಟ್ ನಲ್ಲಿ ನಿವಾಸಿಗಳಿಗೆ ಆಂತರಿಕ ಸುತ್ತೋಲೆಯೊಂದನ್ನು ಹೊರಡಿಸಿದೆ. ಸಾಕುಪ್ರಾಣಿಗಳನ್ನು ಹೊಂದಿರುವ ನಿವಾಸಿಗಳು 10,000 ರೂಪಾಯಿ ಠೇವಣಿ ಇಡಬೇಕೆಂದು ಅದರಲ್ಲಿ ಸೂಚನೆಯಿತ್ತು. ಅಲ್ಲದೆ ಮುಂಜಾನೆ 6 ರಿಂದ 7 ಗಂಟೆಯವರೆಗೆ, ಮಧ್ಯಾಹ್ನ 1 ರಿಂದ 2 ಮತ್ತು ರಾತ್ರಿ 10ರಿಂದ 11 ಗಂಟೆಯವರೆಗೆ ಸಾಕುಪ್ರಾಣಿಗಳನ್ನು ಹೊರಗೆ ಕರೆದುಕೊಂಡು ಹೋಗಬಹುದು ಎಂದು ಹೊಸ ರೂಲ್ಸ್‌ ಜಾರಿ ಮಾಡಿದೆ.

ಇದನ್ನೂ ಓದಿ: ದೀಪಾವಳಿಗೂ ಮುನ್ನವೇ ರಾಜ್ಯದ ಜನತೆಗೆ ಬೆಲೆ ಏರಿಕೆ ಬರೆ! – ಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ

ಸಾಕುಪ್ರಾಣಿಗಳನ್ನು ಹೊಂದಿರುವ ಅಪಾರ್ಟ್ ಮೆಂಟ್ ಮಾಲೀಕರು ಪರವಾನಗಿ ಪಡೆಯಬೇಕು ಮತ್ತು ತಮ್ಮ ಸಾಕು ಪ್ರಾಣಿಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿತ್ತು. ಅಪಾರ್ಟ್ ಮೆಂಟಿನ ನಿವಾಸಿಗಳ ಹಿತರಕ್ಷಣೆಗೆ ಇದನ್ನು ಮಾಡಲಾಗಿದೆ ಎಂದು ಇಟ್ಟಿನ ಮಹಾವೀರ್ ಅಪಾರ್ಟ್ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಅಭಿಷೇಕ್ ಅಗರ್ವಾಲ್ ಹೇಳುತ್ತಾರೆ.

ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ನೀಡಿರುವ ಸುತ್ತೋಲೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಪ್ರಾಣಿ ಪ್ರಿಯರು ಹೊಸ ರೂಲ್ಸ್‌ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

Shwetha M