ಸಿಲಿಕಾನ್‌ ಸಿಟಿಯಲ್ಲಿ ಹೆಚ್ಚಾಯ್ತು ನೀರಿನ ಸಮಸ್ಯೆ – ಬೆಂಗಳೂರಿನಲ್ಲಿ ಹೊಸ ನಿಯಮ,  ಒಬ್ಬರಿಗೆ ಒಂದೇ ಕ್ಯಾನ್‌ ನೀರು!

ಸಿಲಿಕಾನ್‌ ಸಿಟಿಯಲ್ಲಿ ಹೆಚ್ಚಾಯ್ತು ನೀರಿನ ಸಮಸ್ಯೆ – ಬೆಂಗಳೂರಿನಲ್ಲಿ ಹೊಸ ನಿಯಮ,  ಒಬ್ಬರಿಗೆ ಒಂದೇ ಕ್ಯಾನ್‌ ನೀರು!

ಮಾರ್ಚ್‌ ತಿಂಗಳ ಆರಂಭದಲ್ಲಿಯೇ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನೀರಿನ ಅಭಾವ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ವರ್ಷ ಕುಡಿಯುವ ನೀರಿನ ಸಮಸ್ಯೆ  ಹೆಚ್ಚಾಗಿಯೇ ಇದ್ದು, ಇದೀಗ  ಶುದ್ಧ ನೀರಿನ ಘಟಕಗಳಲ್ಲಿ ಒಬ್ಬರಿಗೆ ಒಂದೇ ಕ್ಯಾನ್‌ ನೀರು ಮಾತ್ರ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ರೈತರ ಪ್ರತಿಭಟನೆ – ಗಡಿಯಲ್ಲಿ ಪೊಲೀಸರಿಂದ ಕಟ್ಟೆಚ್ಚರ..!

ಹೌದು, ಈ ಬಾರಿ ಮಳೆಯ ಕೊರತೆಯಿಂದಾಗಿ ನೀರಿನ ಅಭಾವ ಹೆಚ್ಚಾಗಿದೆ. ರಾಜ್ಯದ ಬಹುತೇಕ ನದಿಗಳು ಬತ್ತಿಹೋಗಿವೆ. ಹಲವು ಜಿಲ್ಲೆಗಳಲ್ಲಿ ನೀರಿನ ಅಭಾವ ಕಾಡುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿಗೂ ಇದರ ಬಿಸಿ ತಟ್ಟಿದೆ. ನಗರದ ಬಹುತೇಕ ಬೋರ್‌ವೆಲ್‌ಗಳು ಬತ್ತಿಹೋಗುತ್ತಿದೆ. ಕಾವೇರಿ ನೀರು  ಸರಿಯಾಗಿ ಬರುತ್ತಿಲ್ಲ, ಟ್ಯಾಂಕರ್‌ ನೀರಿನ ಬೆಲೆ ದುಬಾರಿಯಾದ ಕಾರಣ ಈಗ ಬಹುತೇಕ ಮಂದಿ ಶುದ್ಧ ನೀರಿನ ಘಟಕದತ್ತ ಚಿತ್ತ ಹರಿಸಿದ್ದಾರೆ. ಇಲ್ಲೂ ನೀರಿನ ಅಭಾವದ ಜೊತೆ ಎಲ್ಲರಿಗೂ ನೀರು ಕೊಡಬೇಕಾಗಿರುವುದರಿಂದ ಹೊಸ ನಿಯಮ ಶುರುವಾಗಿದ್ದು ಒಬ್ಬರಿಗೆ ಒಂದೇ ಕ್ಯಾನ್‌ ನೀರು ನೀಡಲಾಗುತ್ತದೆ. ನಗರದ ಹಲವೆಡೆ ಅದರಲ್ಲೂ ರಾಜರಾಜೇಶ್ವರಿ ನಗರದ ಆರ್‌ಓ ಪ್ಲಾಂಟ್‌ನಲ್ಲಿ ಈ ಬೋರ್ಡ್ ಕಾಣಸಿಗುತ್ತಿದೆ.

ಜನರು ಒಂದೇ ಬಾರಿಗೆ ಮೂರು-ನಾಲ್ಕು ಕ್ಯಾನ್ ಕುಡಿಯುವ ನೀರು ಒಯ್ಯುತ್ತಿದ್ದರು.  ಹೀಗಾಗಿ ಒಬ್ಬರಿಗೆ ಒಂದೇ ಕ್ಯಾನ್ ನೀರು ಎಂಬ ನಿಯಮ ಆರ್‌ಓ ಪ್ಲಾಂಟ್‌ನಲ್ಲಿ ಜಾರಿಯಾಗಿದೆ. ಈಗಾಗಲೇ ಕೆಲವು ಕಡೆ ಬೆಳಗ್ಗೆ 8 ರಿಂದ ರಾತ್ರಿ 8 ವರೆಗೆ ನೀರು ಬಿಡಲಾಗುತ್ತಿತ್ತು. ಇದೀಗ ಬೆಳಗ್ಗೆ ಎರಡು ಗಂಟೆ ಸಂಜೆ ಎರಡು ಗಂಟೆ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವು ಕಡೆ ಆರ್‌ಓ ಪ್ಲಾಂಟ್ ನೀರಿಲ್ಲದೆ ಬಂದ್ ಆಗಿವೆ.

Shwetha M