ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್‌ ನಿಯಂತ್ರಿಸಲು ಹೊಸ ಪ್ಲಾನ್!‌ – ಯಶವಂತಪುರ, ಗೊರಗುಂಟೆಪಾಳ್ಯದಲ್ಲಿ ಸುರಂಗ ನಿರ್ಮಾಣಕ್ಕೆ ಚಿಂತನೆ

ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್‌ ನಿಯಂತ್ರಿಸಲು ಹೊಸ ಪ್ಲಾನ್!‌ – ಯಶವಂತಪುರ, ಗೊರಗುಂಟೆಪಾಳ್ಯದಲ್ಲಿ ಸುರಂಗ ನಿರ್ಮಾಣಕ್ಕೆ ಚಿಂತನೆ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟ್ರಾಫಿಕ್‌ ನಿಯಂತ್ರಿಸಲು ಸರ್ಕಾರ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಇತ್ತೀಚೆಗೆ ಚರ್ಚೆಗೆ ಇರುವ ವಿಚಾರ ಅಂದರೆ ಅದು ಹೆಬ್ಬಾಳದ ಬಳಿ ಎರಡೂವರೆ ಸಾವಿರ ಕೋಟಿ ವೆಚ್ಚದಲ್ಲಿ ಟನಲ್ ನಿರ್ಮಾಣ. ಅದರ ಜೊತೆಗೆ ಈಗ ಯಶವಂತಪುರ, ಗೊರುಗುಂಟೆ ಪಾಳ್ಯದಲ್ಲಿ ಟನಲ್ ನಿರ್ಮಿಸಲು ಪೀಸಿಬಲ್ ವರದಿ ಸಿದ್ದಪಡಿಸಲಾಗ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಕೆ.ಎಲ್ ರಾಹುಲ್ – ಕುಟುಂಬ ಸಮೇತ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ಕ್ರಿಕೆಟಿಗ

ಟ್ರಾಫಿಕ್ ಕಡಿಮೆ ಮಾಡಲು ಸರ್ಕಾರ ನಾನಾ ಯೋಜನೆ, ಕಾಮಗಾರಿಗಳನ್ನ ಮಾಡ್ತಾ ಇದೆ. ಇದೀಗ ರಾಜ್ಯ ಸರ್ಕಾರ ಗೊರಗುಂಟೆ ಪಾಳ್ಯದ ಬಳಿ ಮೆಟ್ರೋ ಹಾದು ಹೊಗಿರುವ ಕಾರಣ ಟನಲ್ ನಿರ್ಮಾಣ ಮಾಡಬೇಕಾ ಅಥವಾ ಫ್ಲೈಓವರ್ ಮಾಡಬೇಕಾ ಎಂಬ ಚರ್ಚೆ ನಡೀತಿದೆ. ಸುಮನಹಳ್ಳಿ ವರೆಗೂ ಕೂಡ ಡಬಲ್ ರಸ್ತೆ ಸೇರಿದಂತೆ ನಾನಾ ರೀತಿಯಲ್ಲಿ ಆಲೋಚನೆ ನಡೆಯುತ್ತಾ ಇದೆ. ಆದರೆ ಯಶವಂತಪುರ ಮತ್ತು ಗೊರಗುಂಟೆ ಪಾಳ್ಯದಲ್ಲಿ ಟ್ರಾಫಿಕ್ ಜಾಸ್ತಿ ಆಗ್ತಿದ್ದು ಟ್ರಾಫಿಕ್ ಮುಕ್ತಿಗೆ ಬೇರೆ ಮಾರ್ಗ ಕಂಡುಕೊಳ್ಳಬೇಕಿದೆ.

ಗೊರಗುಂಟೆ ಪಾಳ್ಯ ಮತ್ತು ಯಶವಂತಪುರದಲ್ಲಿ ಟನಲ್ ನಿರ್ಮಾಣ ಚರ್ಚಾ ಹಂತದಲ್ಲಿದ್ದು, ಎಷ್ಟು ಕಿಲೋ ಮೀಟರ್‍ವರೆಗೆ ಆಗಲಿದೆ. ವೆಚ್ಚ ಎಷ್ಟು ಆಗಲಿದೆ. ಯಾವಾಗ ಆರಂಭ ಅಂತಾ ಕಾದು ನೋಡಬೇಕಿದೆ.

Shwetha M