ಸಂಚಾರ ದಟ್ಟಣೆ ಕಂಟ್ರೋಲ್​ಗೆ ಟ್ರಾಫಿಕ್‌ ಪೊಲೀಸರಿಂದ ಹೊಸ ಪ್ಲಾನ್! – ರೋಡ್‌ನಲ್ಲಿ ಹಾರಾಡಲಿವೆ ಡ್ರೋನ್​ಗಳು!

ಸಂಚಾರ ದಟ್ಟಣೆ ಕಂಟ್ರೋಲ್​ಗೆ ಟ್ರಾಫಿಕ್‌ ಪೊಲೀಸರಿಂದ ಹೊಸ ಪ್ಲಾನ್! – ರೋಡ್‌ನಲ್ಲಿ ಹಾರಾಡಲಿವೆ ಡ್ರೋನ್​ಗಳು!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಏನೇ ಮಾಡಿದ್ರೂ ಸಂಚಾರ ದಟ್ಟಣೆ ಕಂಟ್ರೋಲ್‌ ಮಾಡಲು ಸಾಧ್ಯ ಆಗ್ತಿಲ್ಲ. ಸರ್ಕಾರ ಕೂಡ ನಾನಾ ಪ್ರಯತ್ನಗಳನ್ನ ಮಾಡ್ತಾನೆ ಇದೆ. ಆದ್ರೂ ವಾಹನ ದಟ್ಟಣೆ ಕಡಿಮೆ ಆಗ್ತಿಲ್ಲ. ಇದೀಗ ಸಂಚಾರಿ ಪೊಲೀಸರು ಹೊಸ ಪ್ಲಾನ್‌ ಒಂದನ್ನ ಮಾಡಿದ್ದಾರೆ. ಇನ್ನುಮುಂದೆ ಡ್ರೋನ್‌ ಮೂಲಕ ಪ್ರಮುಖ ಟ್ರಾಫಿಕ್ ಜಂಕ್ಷನ್ ಕ್ಲಿಯರ್ ಮಾಡೋಕೆ ಪೊಲೀಸರು ಮುಂದಾಗಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ  ಹೆಚ್ಚಾಗುತ್ತಿರುವ ಹಿನ್ನೆಲೆ ಸಂಚಾರ ದಟ್ಟಣೆ ಕಂಟ್ರೋಲ್ ಮಾಡಲು ಹೊಸ ಪ್ಲಾನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಇನ್ಮೇಲೆ ಪ್ರತಿ ದಿನವೂ ಡ್ರೋನ್​ಗಳು ಹಾರಾಡಲಿವೆ. ಡ್ರೋನ್​​​ಗಳ ಮೂಲಕ ಪ್ರಮುಖ ಟ್ರಾಫಿಕ್ ಜಂಕ್ಷನ್ ಕ್ಲಿಯರ್ ಮಾಡೋಕೆ ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಚೀನಾದಿಂದ ಮೊದಲ ಚಾಲಕ ರಹಿತ ರೈಲು ರವಾನೆ – ಯಾವಾಗಿನಿಂದ ಮೆಟ್ರೋ ಸಂಚಾರ ಆರಂಭ?

ಟೋಯಿಂಗ್ ಇಲ್ಲದ ಕಾರಣ ನೋ ಪಾರ್ಕಿಂಗ್ ಕಡೆ ವಾಹನ ಸವಾರರು ವಾಹನ ಪಾರ್ಕ್ ಮಾಡ್ತಿದ್ದಾರೆ. ಮಾರ್ಕೆಟ್ ರಸ್ತೆಗಳು, ಮುಖ್ಯ ಜಂಕ್ಷನ್ ಕನೆಕ್ಟ್ ಆಗೋ ರಸ್ತೆಗಳು, ಸಣ್ಣ ಸಣ್ಣ ರಸ್ತೆಗಳಲ್ಲಿ ಹೇಗೆ ಬೇಕಂಗೆ ವಾಹನ ಪಾರ್ಕ್ ಮಾಡಿ ಹೋಗ್ತಿದ್ದಾರೆ. ಅಲ್ಲದೇ ಕೆಲ ಮುಖ್ಯ ಜಂಕ್ಷನ್​ಗಳಲ್ಲಿ ಸಿಗ್ನಲ್ ಬಿಡುವುದರ ಬಗ್ಗೆ ಗೊಂದಲ ಇರುತ್ತೆ. ಒಂದು ಜಂಕ್ಷನ್​ನಲ್ಲಿ ಯಾವ ರೂಟ್ ನಲ್ಲಿ ಹೆಚ್ಚು ವಾಹನಗಳಿದೆ. ಯಾವ ಸಿಗ್ನಲ್ ಬೇಗ ಬಿಡಬೇಕು, ಸಿಗ್ನಲ್ ಬಿಟ್ಟಾಗ ವಾಹನಗಳನ್ನು ಕ್ಲಿಯರ್ ಮಾಡೋದು ಹೇಗೆ ಅನ್ನೋದನ್ನ ನಿಯಂತ್ರಿಸೋದ್ರಲ್ಲಿ ಸಂಚಾರಿ ಪೊಲೀಸರು ಫೇಲ್ ಆಗುತ್ತಿದ್ದಾರೆ. ಹೀಗಾಗಿ ಡ್ರೋನ್ ಮೂಲಕ ಇದೆಲ್ಲವನ್ನೂ ಗಮನಿಸಿ ಕ್ಲಿಯರ್ ಮಾಡಲು ಸಹಾಯವಾಗಲಿದೆ.

ಡ್ರೋನ್ ಹಾರಿಸಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಪರಿಹರಿಸಲು ಸಹಾಯವಾಗುತ್ತೆ. ಕೆಲವೊಮ್ಮೆ ಆ್ಯಂಬುಲೆನ್ಸ್ ಟ್ರಾಫಿಕ್​ನಲ್ಲಿ ಸಿಕ್ಕಿ ಹಾಕಿಕೊಂಡರೆ ಮೂಮೆಂಟ್ ನೋಡಿ ಕ್ಲಿಯರ್ ಮಾಡಲು ಸಹಾಯವಾಗಲಿದೆ. ಇದ್ರಿಂದ ಪೀಕ್ ಹವರ್ ನಲ್ಲಿ ಸಂಚಾರ ದಟ್ಟಣೆ ಸರಿಪಡಿಸಬಹುದು.

ಯಾವ್ಯಾವ ಜಂಕ್ಷನ್ಗಳಲ್ಲಿ ಡ್ರೋನ್ ಹಾರಾಟ?

ಆಯಾ ಠಾಣಾ ವ್ಯಾಪ್ತಿಯ ಪ್ರಮುಖ ಜಂಕ್ಷನ್​ಗಳಲ್ಲಿ ಡ್ರೋನ್​​ಗಳು ಹಾರಾಡಲಿವೆ. ಮೆಜೆಸ್ಟಿಕ್, ಎಂಜಿ ರೋಡ್, ರಾಜಭವನ, ಚಾಲುಕ್ಯ ಸರ್ಕಲ್, ತುಮಕೂರು ರಸ್ತೆ, ಹೆಬ್ಬಾಳ, ಕೋರಮಂಗಲ, ಸಿಲ್ಕ್ ಬೋರ್ಡ್, ಮಾರತ್ತಹಳ್ಳಿ, ಬೆಳ್ಳಂದೂರು ಹೀಗೆ ಯಾವ್ಯಾವ ಜಂಕ್ಷನ್​ಗಳಲ್ಲಿ ಅತಿ ಹೆಚ್ಚು ಟ್ರಾಫಿಕ್ ಇದೆ ಅಲ್ಲೆಲ್ಲಾ ಡ್ರೋನ್​ಗಳ ಬಳಕೆ ಮಾಡಿಕೊಳ್ಳಲಾಗುತ್ತೆ. ಡ್ರೋನ್​ಗಳ ಮೂಲಕ ಪರಿಶೀಲನೆ ನಡೆಸಿ ಕೂಡಲೇ ಸಂಚಾರ ಕ್ಲಿಯರ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಪ್ರಾಯೋಗಿಕವಾಗಿ ಪ್ರಮುಖ ಜಂಕ್ಷನ್​ಗಳಲ್ಲಿ ಡ್ರೋನ್​ಗಳು ಹಾರಾಡುತ್ತಿವೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಡ್ರೋನ್​ಗಳು ಹಾರಾಡಲಿವೆ.

Shwetha M