ಈ ವಾರ OTTಗೆ ಬಂತು ಹೊಸ ಸಿನಿಮಾಗಳ ಹಬ್ಬ! – ಮಿಸ್ ಮಾಡ್ಬೇಡಿ ಈ 5 ಸಿನಿಮಾಗಳನ್ನ!

ಈ ವಾರ OTTಗೆ ಬಂತು ಹೊಸ ಸಿನಿಮಾಗಳ ಹಬ್ಬ! – ಮಿಸ್ ಮಾಡ್ಬೇಡಿ ಈ 5 ಸಿನಿಮಾಗಳನ್ನ!

ಈ ವಾರ OTT ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯ ಹಬ್ಬ! ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಸಾಧ್ಯವಾಗದವರು ಈಗ ಮನೆಯಲ್ಲೇ ಕುಳಿತು ಹೊಸ ಸಿನಿಮಾಗಳನ್ನು ಎಂಜಾಯ್ ಮಾಡಬಹುದು. ಅಕ್ಟೋಬರ್ ಎರಡನೇ ವಾರದಲ್ಲಿ ನೆಟ್‌ಫ್ಲಿಕ್ಸ್ ಸೇರಿದಂತೆ ಪ್ರಮುಖ OTT ವೇದಿಕೆಗಳಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಹಾಗಾದರೆ ಈ ವಾರ ಯಾವ ಸಿನಿಮಾಗಳು ಬಂದಿವೆ ಅನ್ನೋದ್ದನ್ನ ನೋಡೋಣ .

ಮಂಡಾಡಿ

ಮೊದಲಿಗೆ, ಸೋರಿ ಅಭಿನಯದ ‘ಮಂಡಾಡಿ’ ಸಿನಿಮಾ ಗಮನ ಸೆಳೆಯುತ್ತಿದೆ. ದೋಣಿ ಸ್ಪರ್ಧೆಯ ಹಿನ್ನೆಲೆಯಲ್ಲಿರುವ ಈ ಕ್ರೀಡಾ ಆ್ಯಕ್ಷನ್ ಸಿನಿಮಾದಲ್ಲಿ ರೋಚಕ ಪೈಪೋಟಿ ಮತ್ತು ಭಾವನಾತ್ಮಕ ಕ್ಷಣಗಳಿವೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಹಲವು ಭಾಷೆಗಳಲ್ಲಿ ಲಭ್ಯವಿದೆ.

‘ರಿಪೋರ್ಟಿಂಗ್ ಲೈವ್

ಇನ್ನು ಪರಿಣೀತಿ ಚೋಪ್ರಾ ಅಭಿನಯದ ‘ರಿಪೋರ್ಟಿಂಗ್ ಲೈವ್’ ಸಿನಿಮಾ ಕೂಡ ಈ ವಾರದ ಪ್ರಮುಖ ಬಿಡುಗಡೆಯಾಗಿದೆ. ಅಕ್ರಮ ಮರಳು ಗಣಿಗಾರಿಕೆಯ ಜಾಲವನ್ನು ಬಯಲಿಗೆಳೆಯಲು ಪ್ರಯತ್ನಿಸುವ ಪತ್ರಕರ್ತೆಯ ಕಥೆ ಇಲ್ಲಿ ಕುತೂಹಲ ಮೂಡಿಸುತ್ತದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಹಲವು ಭಾಷೆಗಳಲ್ಲಿ ಲಭ್ಯವಿದೆ.

ಆನಿಮಲ್ಸ್

ಬೆನ್ ಅಫ್ಲೆಕ್ ಅಭಿನಯದ ‘ಆನಿಮಲ್ಸ್’ ಸಿನಿಮಾ ಅಪಹರಣ ಮತ್ತು ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಮಗನ ಅಪಹರಣದ ನಂತರ ಕುಟುಂಬ ಎದುರಿಸುವ ಸವಾಲುಗಳು ಚಿತ್ರದ ಪ್ರಮುಖ ಆಕರ್ಷಣೆ. . ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಹಲವು ಭಾಷೆಗಳಲ್ಲಿ ಲಭ್ಯವಿದೆ.

ಇದಲ್ಲದೆ, ಆನಂದ್ ದೇವರಕೊಂಡ ಅಭಿನಯದ ‘EPIC – First Semester’ ಮತ್ತು ಪಾರ್ವತಿ ತಿರುವೋತ್ತು ನಟನೆಯ ಮಲಯಾಳಂ ಥ್ರಿಲ್ಲರ್ ‘ಪ್ರಧಮ ದೃಷ್ಟ್ಯಾ ಕುಟ್ಟಕ್ಕರ್’ ಕೂಡ ಈ ವಾರದ ವೀಕ್ಷಣಾ ಪಟ್ಟಿಯಲ್ಲಿವೆ.

ಒಟ್ಟಿನಲ್ಲಿ, ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಮತ್ತು ಪ್ರಣಯ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ವಾರ OTTಯಲ್ಲಿ ಹಲವು ಆಯ್ಕೆಗಳಿವೆ. ನಿಮ್ಮ ನೆಚ್ಚಿನ ಸಿನಿಮಾವನ್ನು ಆಯ್ಕೆ ಮಾಡಿಕೊಂಡು ಈ ವಾರಾಂತ್ಯವನ್ನು ಮನರಂಜನೆಯೊಂದಿಗೆ ಕಳೆಯಿರಿ!

Kishor KV

Leave a Reply

Your email address will not be published. Required fields are marked *