ಹಸಿರು ಪಟಾಕಿ ಎಂದು ತಿಳಿಯಲು ಬಂತು ಹೊಸ ಕ್ಯೂ ಆರ್​ ಕೋಡ್​ ಸ್ಕ್ಯಾನ್! ​​​​​– ಏನು ಇದರ ವಿಶೇಷತೆ?

ಹಸಿರು ಪಟಾಕಿ ಎಂದು ತಿಳಿಯಲು ಬಂತು ಹೊಸ ಕ್ಯೂ ಆರ್​ ಕೋಡ್​ ಸ್ಕ್ಯಾನ್! ​​​​​– ಏನು ಇದರ ವಿಶೇಷತೆ?

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಜನರು ಈಗಾಗಲೇ ಪಟಾಕಿ ಖರೀದಿಸಲು ಆರಂಭಿಸಿದ್ದಾರೆ. ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಮಾತ್ರ ಹಾರಿಸಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಕೆಲ ಗ್ರಾಹಕರಿಗೆ ಹಸಿರು ಪಟಾಕಿ ಯಾವುದು ಎಂಬ ಗೊಂದಲದಲ್ಲಿ ಇರುತ್ತಾರೆ. ಇನ್ನು ಮುಂದೆ ಪಟಾಕಿ ಖರೀದಿಸುವಾಗ ಈ ಗೊಂದಲವಿರುವುದಿಲ್ಲ. ಇನ್ನು ಮುಂದೆ ಹಸಿರು ಪಟಾಕಿಗಳನ್ನು ನಿಮ್ಮ ಫೋನ್‌ನಲ್ಲಿಯೇ ಪತ್ತೆಹಚ್ಚಬಹುದು.

ದೀಪಾವಳಿಗೂ ಮುನ್ನವೇ ದೇಶದಲ್ಲಿ ಪಟಾಕಿ ದುರಂತ ಸಂಭವಿಸುತ್ತಿದೆ. ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 14 ಜನ ಸಾವೀಗೀಡಾಗಿದ್ದರು. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತು ಕೊಂಡಿದ್ದು, ರಾಜ್ಯದಲ್ಲಿ ಗಣೇಶ ಚತುರ್ಥಿ, ಸಭೆ-ಸಮಾರಂಭ ಮತ್ತು ರಾಜಕೀಯ ಕಾರ್ಯಕ್ರಮದಲ್ಲಿ ಪಟಾಕಿ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಹಾರಿಸಬೇಕು ಎಂಬ ಸುಪ್ರೀಂ ಕೋರ್ಟ್​ ಆದೇಶವನ್ನು ಪಾಲಿಸಬೇಕೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದೀಗ ಹಸಿರು ಪಟಾಕಿಗಳನ್ನು ಪತ್ತೆಹಚ್ಚಲು ಕ್ಯೂ ಆರ್​ ಕೋಡ್​​​​ ಬಂದಿದೆ.

ಇದನ್ನೂ ಓದಿ: ಅತ್ತಿಬೆಲೆ ಅಗ್ನಿ ದುರಂತದಿಂದ ಎಚ್ಚೆತ್ತುಕೊಂಡ ಸರ್ಕಾರ! – ಇನ್ನು ಮುಂದೆ ಈ ಹಬ್ಬಗಳಲ್ಲಿ ಪಟಾಕಿ ನಿಷೇಧ!

ಹೌದು ನಿಮ್ಮ ಮೊಬೈಲ್​ನಿಂದ ಪಟಾಕಿ ಬಾಕ್ಸ್ ಮೇಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪರೀಕ್ಷಿಸಬಹುದು. ಈ ಬಗ್ಗೆ ತಮಿಳುನಾಡು ಪಟಾಕಿ ತಯಾರಕರ ಸಂಘದ ಉಪಾಧ್ಯಕ್ಷ ಅಯ್ಯನ್ ಪಟಾಕಿ ಕಾರ್ಖಾನೆ ಎಂಡಿ ಜಿ ಅಬಿರುಬೆನ್ ಮಾತನಾಡಿ ಶಿವಕಾಶಿಯಲ್ಲಿ ಪಟಾಕಿ ತಯಾರಕರು ಹಸಿರು ಪಟಾಕಿ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಸಿರು ಲೋಗೋ ಹೊರತುಪಡಿಸಿ, ಈ ವರ್ಷ ನಾವು ‘ಕ್ಯೂಆರ್ ಕೋಡ್’ ಪರಿಕಲ್ಪನೆ ಹೊರತಂದಿದ್ದೇವೆ. ಸ್ಕ್ಯಾನ್ ಮಾಡಿದಾಗ, ಉತ್ಪನ್ನವು ಶೇಕಡಾ 100 ರಷ್ಟು ಹಸಿರು ಪಟಾಕಿ ಎಂದು ಗ್ರಾಹಕರಿಗೆ ಭರವಸೆ ಬರಲು ಕಂಪನಿ, ಉತ್ಪಾದನಾ ಸ್ಥಳ, ದಿನಾಂಕ ಮತ್ತು ಇತರ ವಿವರಗಳನ್ನು ನೀಡುತ್ತದೆ ಎಂದರು.

ಸಾಂಪ್ರದಾಯಿಕ ಪಟಾಕಿಗಳು ಇನ್ನೂ ಲಭ್ಯವಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು  ಅಂಗಡಿ ಮಾಲೀಕರು ಮತ್ತು ವ್ಯಾಪಾರಿಗಳು ಮಾರಾಟವಾಗದ ಪಟಾಕಿಗಳನ್ನು ಸಂಗ್ರಹಿಸಿರಬಹುದು ಮತ್ತು ಅವುಗಳನ್ನು ಮಾರಾಟ ಮಾಡಲು ಕಾಯುತ್ತಿದ್ದಾರೆ. ಆದರೆ ಹಸಿರು ಪಟಾಕಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚುತ್ತಿದೆ ಮತ್ತು ಮುಂದೆ ಹಸಿರು ಪಟಾಕಿಗಳು ಮಾತ್ರ ಇರುತ್ತವೆ ಎಂದು ಹೇಳಿದರು.

Shwetha M