ಶ್ರೇಯಸ್ ಗೆ ಕ್ಯಾಪ್ಟನ್ಸಿ CHALLENGE – T-20I ಟ್ರೇಡ್ ಮಾರ್ಕ್ ಉಳಿಸ್ತಾರಾ?
ವಿಶ್ವಕಪ್, ಒಲಿಂಪಿಕ್ಸ್ TASK ಗೆಲ್ತಾರಾ?

ಶ್ರೇಯಸ್ ಗೆ ಕ್ಯಾಪ್ಟನ್ಸಿ CHALLENGE – T-20I ಟ್ರೇಡ್ ಮಾರ್ಕ್ ಉಳಿಸ್ತಾರಾ?ವಿಶ್ವಕಪ್, ಒಲಿಂಪಿಕ್ಸ್ TASK ಗೆಲ್ತಾರಾ?

ಭಾರತ ಮತ್ತು ಐರ್ಲೆಂಡ್ ನಡುವಿನ 2 ಪಂದ್ಯಗಳ ಟಿ-20ಐ ಸರಣಿ ಹಲವು ಸ್ಪೆಷಾಲಿಟಿಗಳಿಗೆ ಸಾಕ್ಷಿಯಾಗಲಿದೆ. ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಿ ಹೊಸ ಇನ್ನಿಂಗ್ಸ್ ಸ್ಟಾರ್ಟ್ ಮಾಡ್ತಾರೆ. ಹಾಗೇ ಈ ಸರಣಿಯೊಂದಿಗೆ ಶ್ರೇಯಸ್​ಗೆ ಹೊಸ ಚಾಲೆಂಜಸ್ ಕೂಡ ಇದೆ. 2024ರ ಟಿ-20 ವಿಶ್ವಕಪ್ ಗೆದ್ದ ಮೇಲೆ ಭಾರತ ಒಂದೇ ಒಂದು ಟಿ-20 ಸರಣಿ ಸೋಲದೆ 2026ರಲ್ಲೂ ಟಿ-20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಮುಂದಿನ ಜರ್ನಿ ಶುರು ಆಗ್ತಿದೆ. ಮುಂದಿನ ವಾರ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಐರ್ಲೆಂಡ್ ವಿರುದ್ಧದ ಸಿರೀಸ್ ಭಾರತಕ್ಕೆ ಒಂಥರಾ ವಾರ್ಮ್ ಅಪ್ ಮ್ಯಾಚಸ್ ಇದ್ದಂತೆ. ಹೀಗಾಗಿ ಇಲ್ಲಿಂದಲೇ ಭಾರತದ ವಿಜಯಯಾತ್ರೆ ಶುರು ಆಗ್ಬೇಕಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡದ ಪ್ರದರ್ಶನದ ಮೇಲೆ ಬಿಸಿಸಿಐ ಹದ್ದಿನ ಕಣ್ಣಿಟ್ಟಿದೆ.

ಬಲಿಷ್ಠ ಭಾರತವನ್ನು ಅದೇ ದಾರಿಯಲ್ಲಿ ಮುನ್ನಡೆಸಬೇಕಿದೆ ಶ್ರೇಯಸ್!

ಭಾರತ ಟಿ-20ಐ ಟೀಂ ಈಗ ಜಗತ್ತಿನ ನಂಬರ್ 1 ಟೀಂ. ಬ್ಯಾಕ್ ಟು ಬ್ಯಾಕ್ ಟಿ-20 ವಿಶ್ವಕಪ್ ವಿನ್ನರ್ಸ್. ಚುಟುಕು ಮಾದರಿಯಲ್ಲಿ ಜಗತ್ತನ್ನೇ ಆಳುತ್ತಿರೋ ಭಾರತವನ್ನ ಅದೇ ದಾರಿಯಲ್ಲಿ ಮುನ್ನಡೆಸಬೇಕಿದೆ. ನಂಬರ್ 1 ಪಟ್ಟದಲ್ಲೇ ಮುಂದುವರೆಸಬೇಕಿದೆ. ಸೋ ಏನೆಲ್ಲಾ ಚಾಲೆಂಜಸ್ ಇದೆ ಅನ್ನೋದನ್ನ ನೋಡ್ತಾ ಹೋಗೋಣ.

ಶ್ರೇಯಸ್ ಗೆ ಇರುವ ಸವಾಲುಗಳು!

3 ವರ್ಷದ ಬಳಿಕ ಟಿ-20ಐ ತಂಡಕ್ಕೆ ಕಂ ಬ್ಯಾಕ್ + ಕ್ಯಾಪ್ಟನ್ಸಿ

ರೋಹಿತ್ & ಸೂರ್ಯ ಸೆಟ್ ಮಾಡಿರೋ ಚಾಂಪಿಯನ್ ಟ್ರೆಂಡ್

2024ರಿಂದ ಈಚೆಗೆ ಒಮ್ಮೆಯೂ ಟಿ-20ಐ ಸರಣಿ ಸೋಲದ ದಾಖಲೆ

2026ರ ಟಿ-20 ವಿಶ್ವಕಪ್ ಬಳಿಕ ಮೊದಲ ಟಿ-20ಐ ಸರಣಿ

ಟಿ-20ಐ ಟೀಂನಲ್ಲಿದ್ದವರನ್ನು ಬಿಟ್ಟು ಕ್ಯಾಪ್ಟನ್ಸಿ ನೀಡಿರುವ ಬಿಸಿಸಿ

2028ರಲ್ಲಿ ಟಿ-20 ವಿಶ್ವಕಪ್ & ಒಲಿಂಪಿಕ್ಸ್ ನಲ್ಲಿ ಟೂರ್ನಿ

ಕ್ಯಾಪ್ಟನ್ಸಿ ಜೊತೆಗೆ ಬ್ಯಾಟಿಂಗ್ ನಲ್ಲೂ ಸದ್ದು ಮಾಡುವ ಸವಾಲ್

ಸಹ ಆಟಗಾರರ ಜೊತೆ ಉತ್ತಮ ಬಾಂಧವ್ಯ ಸಾಧಿಸಬೇಕು

ಹೀಗೆ ಶ್ರೇಯಸ್ ಅಯ್ಯರ್ ಗೆ ಕ್ಯಾಪ್ಟನ್ಸಿಯೇನೋ ಸಿಕ್ಕಿದೆ. ಆದ್ರೆ ಅದನ್ನ ಉಳಿಸಿಕೊಳ್ಳೋ ಸವಾಲೂ ಇದೆ. ಹೌದು ಐರ್ಲೆಂಡ್ ವಿರುದ್ಧದ ಸರಣಿ ಏನೋ ಈಸಿ ಅನ್ನಿಸ್ಬೋದು. ಇದುವರೆಗೂ ಒಮ್ಮೆಯೂ ಭಾರತ ಐರ್ಲೆಂಡ್ ವಿರುದ್ಧ ಟಿ-20ಐ ಮಾದರಿಯಲ್ಲಿ ಸೋತಿಲ್ಲ. 2018 ರಿಂದ ಭಾರತ ಮೂರು ಬಾರಿ ಟಿ20ಐಗಳಿಗಾಗಿ ಐರ್ಲೆಂಡ್ ಪ್ರವಾಸ ಮಾಡಿದೆ, ಅಲ್ಲಿ ವಿರಾಟ್ ಕೊಹ್ಲಿ , ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಿದ್ದಾರೆ. ಬುಮ್ರಾ ನಾಯಕನಾಗಿ ಐರ್ಲೆಂಡ್‌ನಲ್ಲಿ ಎಂದಿಗೂ ಬ್ಯಾಟಿಂಗ್ ಮಾಡಿಲ್ಲವಾದರೂ, ಕೊಹ್ಲಿ ಮತ್ತು ಪಾಂಡ್ಯ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಈ ಸಲ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಿ ಅಬ್ಬರಿಸಲೇಬೇಕಿದೆ.

Shantha Kumari