ಟ್ರಾಫಿಕ್ ಪೊಲೀಸರು ವಾಹನ ತಡೀತಾರೆ ಅನ್ನೋ ಕಿರಿಕಿರಿ ಇನ್ಮುಂದೆ ಇರಲ್ಲ – ಸಂಚಾರಿ ನಿಯಮಗಳಿಗೆ ಹೊಸ ಮಾರ್ಗಸೂಚಿ..!

ಟ್ರಾಫಿಕ್ ಪೊಲೀಸರು ವಾಹನ ತಡೀತಾರೆ ಅನ್ನೋ ಕಿರಿಕಿರಿ ಇನ್ಮುಂದೆ ಇರಲ್ಲ – ಸಂಚಾರಿ ನಿಯಮಗಳಿಗೆ ಹೊಸ ಮಾರ್ಗಸೂಚಿ..!

ರೋಡ್ ಸೈಡ್ ಟ್ರಾಫಿಕ್ ಪೊಲೀಸರು ನಿಂತಿದ್ದಾರೆ. ಅವರೇನಾದರೂ ವಾಹನಗಳ ಹತ್ತಿರ ಬಂದರೆ ಸವಾರರಿಗೆ ಅದೇನೋ ಟೆನ್ಷನ್. ಬೇಗ ತಲುಪಬೇಕಿತ್ತು. ಇವರು ನೋಡಿದರೆ ಈಗಲೇ ನಮ್ ಗಾಡಿ ಅಡ್ಡ ಹಾಕಬೇಕಿತ್ತಾ ಅಂತಾ ಗೊಣಗಿಕೊಂಡೇ ವಾಹನ ನಿಲ್ಲಿಸುವ ಅನಿವಾರ್ಯತೆ. ಇನ್ ಮುಂದೆ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ತಡೆದು ನಿಲ್ಲಿಸುತ್ತಾರೆ ಎಂಬ ಚಿಂತೆಯಿಲ್ಲ. ಯಾಕೆಂದರೆ, ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುವುದು ಕಂಡುಬಂದರೆ ಮಾತ್ರ ತಡೆಯಿರಿ. ಇಲ್ಲದಿದ್ರೆ ವಾಹನ ಸವಾರರನ್ನು ತಡೆಯಬೇಡಿ ಎಂದು ಡಿಜಿ ಐಜಿಪಿ ಅಲೋಕ್ ಮೋಹನ್ ಸಂಚಾರ ನಿಯಮಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.

ಇದನ್ನೂ ಓದಿ:  ಜೂನ್‌ 11 ರಂದು ಶಕ್ತಿ ಯೋಜನೆಗೆ ಚಾಲನೆ – ಟಿಕೆಟ್‌.. ಟಿಕೆಟ್.. ಎಂದು ಕಂಡಕ್ಟರ್‌ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ!

ತುರ್ತಾಗಿ ಹೋಗುವ ಸಮಯದಲ್ಲಿ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ತಡೆದು ನಿಲ್ಲಿಸುವುದರಿಂದ ಸವಾರರು ಕಿರಿಕಿರಿಯನ್ನು ಅನುಭವಿಸುತ್ತಾರೆ. ಈ ವಿಚಾರದಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರ ವಿಚಾರದಲ್ಲಿ ಸಿಕ್ಕಾಪಟ್ಟೆ ಅಸಹನೆ ಇದೆ. ಈಗ ಇದೊಂದು ವಿಚಾರದಲ್ಲಿ ವಾಹನ ಸವಾರರು ಫ್ರೀಯಾಗಿಯೇ ಸವಾರಿ ಮಾಡಬಹುದು. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುವುದು ಕಂಡುಬಂದರೆ ಮಾತ್ರ ತಡೆಯಿರಿ. ಇಲ್ಲದಿದ್ರೆ ವಾಹನ ಸವಾರರನ್ನು ತಡೆಯಬೇಡಿ ಎಂದು ಡಿಜಿ ಐಜಿಪಿ ಅಲೋಕ್ ಮೋಹನ್ ಸಂಚಾರ ನಿಯಮಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಪೀಕ್ ಅವರ್ ಟ್ರಾಫಿಕ್ ಪ್ರಾರಂಭವಾಗುವ ಮೊದಲೇ ಸಂಚಾರಿ ಪೊಲೀಸರು ಆಯಾ ಸ್ಥಳಗಳಲ್ಲಿ ನಿಯೋಜಿಸಿಕೊಳ್ಳಬೇಕು. ಸಂಚಾರಿ ಪೊಲೀಸ್ ಸಿಬ್ಬಂದಿ ದಟ್ಟಣೆಯ ಸಮಯಕ್ಕಿಂತ ಮೊದಲು ತಮ್ಮ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಈ ಹೊಸ ಕ್ರಮವು ರಿಯಲ್ ಟೈಮ್ನಲ್ಲಿ ಸಂಚಾರ ದಟ್ಟಣೆಯನ್ನು ತಡೆಗಟ್ಟಲು ಸಹಾಯ ಮಾಡಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಸಂಚಾರಿ ಪೊಲೀಸರು ಸಾಧ್ಯವಾದಾಗಲೆಲ್ಲಾ ದೇಹಕ್ಕೆ ಧರಿಸಿರುವ ಕ್ಯಾಮೆರಾಗಳನ್ನು ಧರಿಸಿಕೊಳ್ಳಬೇಕು. ಈ ಕ್ರಮವು ವಿವಾದಗಳು ಅಥವಾ ದೂರುಗಳ ಪ್ರಕರಣಗಳಲ್ಲಿ ಸಾಕ್ಷ್ಯವನ್ನು ಒದಗಿಸುತ್ತವೆ.

ಅಲ್ಲದೇ, ಪಾರ್ಕಿಂಗ್ ನಿರ್ಬಂಧ ಇರುವ ಪ್ರದೇಶಗಳಲ್ಲಿ ನಿಲುಗಡೆ ಮಾಡುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಅಂತಹ ಸಂದರ್ಭಗಳಲ್ಲಿ ವಾಹನಗಳನ್ನು ಕೂಡಲೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಮತ್ತು ಇತರ ಅಧಿಕಾರಿಗಳು ತಮ್ಮ ವಿವೇಚನೆಯ ಆಧಾರದ ಮೇಲೆ, ಅವರ ಅಧಿಕಾರದ ವ್ಯಾಪ್ತಿಯಲ್ಲಿ ಸಂಚಾರ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿದ್ದಾರೆ ಎಂದು ಡಿಜಿ ಐಜಿಪಿ ಅಲೋಕ್ ಮೋಹನ್ ಹೇಳಿದ್ದಾರೆ.

suddiyaana