ಕೆಜಿಗೆ 2 ರೂಪಾಯಿಯಂತೆ ಸಗಣಿ ಖರೀದಿ ಮಾಡುವುದಾಗಿ ಘೋಷಣೆ – ಕಾಂಗ್ರೆಸ್ ಸರ್ಕಾರದಿಂದ ಹೊಸ ಗ್ಯಾರಂಟಿ ಯೋಜನೆ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಇದೀಗ ಪಂಚರಾಜ್ಯ ಚುನಾವಣೆಯಲ್ಲೂ ಜಯಭೇರಿ ಬಾರಿಸುವ ನಿರೀಕ್ಷೆಯಲ್ಲಿದೆ. ಅದರಲ್ಲೂ ಕರ್ನಾಟಕದ ಚುಕ್ಕಾಣಿ ಹಿಡಿಯಲು ಕಾರಣವಾದ ಗ್ಯಾರಂಟಿ ಯೋಜನೆಗಳ ಅಸ್ತ್ರವನ್ನ ಇತರೆ ರಾಜ್ಯಗಳಲ್ಲೂ ಪ್ರಯೋಗ ನಡೆಸುತ್ತಿದೆ. ರಾಜಸ್ತಾನದಲ್ಲಿ ಅಧಿಕಾರದ ಚುಕ್ಕಾಣಿ ಉಳಿಸಿಕೊಳ್ಳಲು ಆಫರ್ ಗಳ ಮೇಲೆ ಆಫರ್ ಕೊಡ್ತಿದೆ.
ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಳು ಪ್ರಮುಖ ಭರವಸೆಗಳನ್ನ ನೀಡಿದೆ. ಕುಟುಂಬದ ಮಹಿಳೆಗೆ ವಾರ್ಷಿಕ 10 ಸಾವಿರ ರೂಪಾಯಿ. 1.4 ಕೋಟಿ ಜನರಿಗೆ 500 ರೂ.ಗೆ ಗ್ಯಾಸ್ ಸಿಲಿಂಡರ್, 2 ರೂ.ಗೆ ಕೆ.ಜಿ. ಸಗಣಿ ಖರೀದಿ, 50 ಲಕ್ಷ ರೂ.ಗಳ ಚಿರಂಜೀವಿ ಆರೋಗ್ಯ ವಿಮೆ, ಹಳೆ ಪಿಂಚಣಿ ಯೋಜನೆ ಮರು ಜಾರಿ, ಜಾತಿಗಣತಿ ನಡೆಸುವ ಭರವಸೆ ಸೇರಿದಂತೆ ಏಳು ಪ್ರಮುಖ ಗ್ಯಾರಂಟಿ ಅಂಶಗಳುಳ್ಳ ‘ಜನ ಘೋಷಣ ಪತ್ರ’ ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪಂಚಾಯಿತಿ ಮಟ್ಟದಲ್ಲಿ 4 ಲಕ್ಷ ಸೇರಿದಂತೆ ರಾಜ್ಯಾದ್ಯಂತ 10 ಲಕ್ಷ ಉದ್ಯೋಗ ಸೃಷ್ಟಿ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವ ಭರವಸೆ ನೀಡಲಾಗಿದೆ.
ಇದನ್ನೂ ಓದಿ : ಸತ್ತ ಎರಡು ವರ್ಷಗಳ ಬಳಿಕ ಸೈಕೋ ಕಿಲ್ಲರ್ ಅರೆಸ್ಟ್! – 2 ಕೊಲೆಯ ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ?
ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಅಶೋಕ್ ಗೆಹ್ಲೋಟ್, ಮಾಜಿ ಡಿಸಿಎಂ ಸಚಿನ್ ಪೈಲಟ್, ಆರ್‌ಪಿಸಿಸಿ ಅಧ್ಯಕ್ಷ ಗೋವಿಂದ ದೋತಾಸ್ರ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸಿ.ಪಿ.ಜೋಶಿ ಮೊದಲಾದವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. 2018ರಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳಲ್ಲಿ ಶೇ 90ರಷ್ಟು ಈಡೇರಿಸಲಾಗಿದೆ. ಕಳೆದ ಐದು ವರ್ಷ ನಮ್ಮ ಸರಕಾರ ನುಡಿದಂತೆ ನಡೆದಿದೆ. ಮುಂದಿನ ಏಳು ವರ್ಷದಲ್ಲಿ ರಾಜ್ಯ ಆರ್ಥಿಕತೆಯನ್ನು 30 ಲಕ್ಷಕ್ಕೆ ಕೋಟಿ ರೂ.ಗೆ ಹೆಚ್ಚಿಸುವ ದೂರದೃಷ್ಟಿ ಹೊಂದಲಾಗಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.