ಫಾಸ್ಟ್ ಟ್ಯಾಗ್ ನ್ಯೂ ರೂಲ್ಸ್ – ಮಿನಿಮಮ್ ಬ್ಯಾಲೆನ್ಸ್ ಫಿಕ್ಸ್
ಏನೆಲ್ಲಾ ಬದಲಾವಣೆ? ಯಾವುದಕ್ಕೆ ದಂಡ?

ಫಾಸ್ಟ್ ಟ್ಯಾಗ್ ನ್ಯೂ ರೂಲ್ಸ್ – ಮಿನಿಮಮ್ ಬ್ಯಾಲೆನ್ಸ್ ಫಿಕ್ಸ್ಏನೆಲ್ಲಾ ಬದಲಾವಣೆ? ಯಾವುದಕ್ಕೆ ದಂಡ?

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಹೊಸ ನಿಯಮಗಳನ್ನು ಜಾರಿಗೆ ತಂದಿದೆ  ಹೊಸ ರೂಲ್ಸ್  ಟೋಲ್ ಪ್ಲಾಜಾಗಳಲ್ಲಿ ಆಗುವ ವಂಚನೆ ಕಡಿಮೆ ಮಾಡಿ  ವಹಿವಾಟುಗಳನ್ನು ಈಸಿ ಮಾಡೋರೆ ಪ್ಲ್ಯಾನ್ ಮಾಡಲಾಗಿದೆ.  ಟೋಲ್‌ನಲ್ಲಿ ಸಾಕಷ್ಟು ಸಮಸ್ಯೆಗಳು ಆಗುತ್ತೆ.. ಕೆಲವರು ಫಾಸ್ಟ್ ಟ್ಯಾಗ್‌ನಲ್ಲಿ ಹಣ ಇಟ್ಟುಕೊಳ್ಳದೇ, ಟೋಲ್‌ನಲ್ಲಿ ಸಮಸ್ಯೆ ಉಂಟು ಮಾಡುತ್ತಾರೆ. 10-20 ನಿಮಿಷ ಕಾಯುವಂತೆ ಮಾಡುತ್ತಾರೆ. ಇದ್ರಿಂದ ಬೇರೆ ವಾಹನದ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತೆ. ಇದನ್ನ ತಪ್ಪಿಸುವ ಉದ್ದೇಶದಿಂದ ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ಹಾಗಿದ್ರೆ ಆ ರೂಲ್ಸ್ ಏನು ಅನ್ನೋದನ್ನ ನೋಡೋಣ ಬನ್ನಿ..

 ಡಬಲ್ ಟೋಲ್ ಕಟ್ಟಬೇಕು!

ವಾಹನಗಳು ಟೋಲ್ ಪ್ರವೇಶಿಸುವ ಮೊದಲು 60 ನಿಮಿಷಕ್ಕಿಂತ ಹೆಚ್ಚು ಸಮಯ ಹಾಗೂ ಟೋಲ್ ದಾಟಿದ 10 ನಿಮಿಷ ವೇಳೆಯಲ್ಲಿ ಫಾಸ್ಟ್ ಟ್ಯಾಗ್ ನಿಷ್ಕ್ರಿಯವಾಗಿದ್ದರೆ ವಹಿವಾಟು ಅಥವಾ ಟ್ರಾನ್ಸ್‌ಸಾಕ್ಷನ್ ಅನ್ನು ತಿರಸ್ಕರಿಸಲಾಗುತ್ತದೆ ಹಾಗೂ ಇದು ದೋಷ ಕೋಡ್ 176 ಅಡಿಯಲ್ಲಿ ಬರಲಿದೆ. ಕೊನೇ ಸಮಯದಲ್ಲಿ ರೀಚಾರ್ಜ್ ಮಾಡಿದರೆ ಉಂಟಾಗುವ ಹಣ ಪಾವತಿಯ ಸಮಸ್ಯೆ ತಪ್ಪಿಸಲು ಮೊದಲೇ ಫಾಸ್ಟ್ ಟ್ಯಾಗ್ ನಲ್ಲಿ ಮೊದಲೇ ನಿಗದಿತ ಹಣ ಇರಬೇಕು, ಎಂದು ಹೇಳಿದೆ.ವಂಚನೆ ಹಾಗೂ ಟೋಲ್ ಪಾವತಿ ತ್ವರಿತಗೊಳಿಸಲು ಮಾಡಿರುವ ಪ್ರಮುಖ 6 ಬದಲಾವಣೆಗಳು ಯಾವೆಲ್ಲಾ ಅನ್ನೋದನ್ನ ನೋಡೋಣ ಬನ್ನಿ.

 ಫಾಸ್ಟ್ ಟ್ಯಾಗ್ ಹಣ ಪಾವತಿ

ಟೋಲ್ ಹತ್ತಿರವಾಗುವವರೆಗೆ ಫಾಸ್ಟ್ ಟ್ಯಾಗ್ ನಿಷ್ಕ್ರಿಯವಾಗಿದ್ದರೆ, ಹಣ ಪಾವತಿ ಆಗುವುದಿಲ್ಲ. 10 ನಿಮಿಷ ಮೊದಲು ನಿಷ್ಕ್ರಿಯವಾಗಿದ್ದರೂ ಹಣ ಪಾವತಿ ಆಗುವುದಿಲ್ಲ.

 ಎಷ್ಟು ಸಮಯ ನಿಗದಿ?

ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ಸುಲಭ ಮಾಡುವ ಸಲುವಾಗಿ, 70 ನಿಮಿಷ ಗ್ರೇಸ್ ಪಿರಿಯಡ್, ಅಂದರೆ ಟೋಲ್ ದಾಟುವ 70 ನಿಮಿಷ ಮೊದಲು ಫಾಸ್ಟ್ ಟ್ಯಾಗ್ ಸಕ್ರಿಯ ಮಾಡಲು ಸಮಯಾವಕಾಶ ನೀಡಲಾಗಿದೆ.

 ಬ್ಲಾಕ್ ಲಿಸ್ಟ್ ಆಗಿದ್ದರೆ ಪರಿಣಾಮ ಏನು?

ಫಾಸ್ಟ್ ಟ್ಯಾಗ್ ಟೋಲ್ ದಾಟುವ ಮುನ್ನ ಸಕ್ರಿಯ ಆಗದೇ ಇದ್ದರೆ, ಎರಡು ಬಾರಿ ಟೋಲ್ ಕಟ್ಟಬೇಕು. ಆದರೆ 10 ನಿಮಿಷ ಮೊದಲು ರೀಚಾರ್ಜ್ ಮಾಡಿದ್ದರೆ, ಒಂದು ಬಾರಿ ದಂಡದ ಹಣ ವಾಪಸ್  ಮಾಡಲು ಮನವಿ ಮಾಡಬಹುದಾಗಿದೆ.

  ಹಣ ಪಾವತಿಯಲ್ಲಿ ವಿಳಂಬ

ಟೋಲ್ ರೀಡರ್ ನಲ್ಲಿ ವಾಹನ ದಾಟಿದ ಮೇಲೆ, ಟೋಲ್ ನಲ್ಲಿ ಹಣ ಪಾವತಿ 15 ನಿಮಿಷಕ್ಕಿಂತ ವಿಳಂಬ ಆದರೆ ಫಾಸ್ಟ್ ಟ್ಯಾಗ್ ಬಳಕೆ ದಾರ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಬಹುದು.

ಹೆಚ್ಚುವರಿ ಶುಲ್ಕ ವಾಪಸ್  

ಫಾಸ್ಟ್ ಟ್ಯಾಕ್ ಬ್ಲಾಕ್ ಲಿಸ್ಟ್ ನಲ್ಲಿದ್ದು, ಅಥವಾ ಕಡಿಮೆ ರೀಚಾರ್ಜ್ ಹೊಂದಿದ್ದರೆ ಟೋಲ್ ದಾಟುವಾಗ ಡಬಲ್ ಶುಲ್ಕ ಅಥವಾ ಹೆಚ್ಚುವರಿ ಶುಲ್ಕ ಕಡಿತ ಆದರೆ, 15 ದಿನಗಳ ಬಳಿಕ ಅಷ್ಟೇ ಬ್ಯಾಂಕ್ ಗಳಿಂದ ಶುಲ್ಕ ವಾಪಾಸಾತಿಗೆ ಮನವಿ ಮಾಡಬಹುದು.ಇನ್ನೂ ಫಾಸ್ಟ್ ಟ್ಯಾಗ್ ಹೊಸ ನಿಯಮಗಳ ದಂಡದಿಂದ ತಪ್ಪಿಸಿಕೊಳ್ಳೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ..

ದಂಡ ತಪ್ಪಿಸೋಕೆ ನೀವ್ ಏನ್ ಮಾಡ್ಬೇಕು?

1) ಫಾಸ್ಟ್ ಟ್ಯಾಗ್ ನಲ್ಲಿ ನಿಗದಿತ ಹಣ ಇರುವಂತೆ ನೋಡಿಕೊಳ್ಳಬೇಕು

2)ಬ್ಲಾಕ್ ಲಿಸ್ಟ್ ಗೆ ಹೋಗದಂತೆ, ಫಾಸ್ಟ್ ಟ್ಯಾಗ್ ಆಕ್ಟಿವ್ ಇರುವಂತೆ ನೋಡಿಕೊಳ್ಳಬೇಕು.

3)ನಂತರ ಹೆಚ್ಚುವರಿ ಹಣ ಕಡಿತ ಆಗುವುದನ್ನು ತಪ್ಪಿಸಲು ಹಣ ಇದ್ಯಾ ಇಲ್ವಾ  ನ್ನೋದು ನೋಡಿಕೊಳ್ಳಬೇಕು

4)ಫಾಸ್ಟ್ ಟ್ಯಾಗ್ ಟ್ಯಾಬ್ ಅನ್ನು ಆಕ್ಟಿವ್ ಇರಿಸಿಕೊಳ್ಳಬೇಕು, ಇದರಿಂದ ಹಣ ಪಾವತಿ ರಿಜೆಕ್ಟ್ ಆಗುವ ಸಾಧ್ಯತೆ ತಡೆಯಬಹುದು.

ದೇಶದಾದ್ಯಂತ ಟೋಲ್ ಪ್ಲಾಝಾಗಳಲ್ಲಿ ನಗದುರಹಿತ ವ್ಯವಹಾರ ಉತ್ತೇಜಿಸಲು ಎಲೆಕ್ಟ್ರಾನಿಕ್ ಉಪಕರಣದ ಮೂಲಕ ಶುಲ್ಕ ಸಂಗ್ರಹಿಸುವ ವಿಧಾನಕ್ಕೆ ಫಾಸ್ಟ್ ಟ್ಯಾಗ್ ಅನ್ನು ಜಾರಿಗೆ ತರಲಾಗಿದೆ. ವಾಹನಗಳು ಟೋಲ್ ದಾಟುವಾಗ  ಬ್ಯಾಂಕ್ ನಿಂದ ಟೋಲ್ ಶುಲ್ಕ ಪಾವತಿ ಆಗಲಿದೆ. ನೀವು ದಂಡವನ್ನ ತಪ್ಪಿಸಿಕೊಳ್ಳಲು ಮುಂಜಾಗ್ರತೆ ಕ್ರಮಗಳನ್ನ ಕೈಗೊಳ್ಳಿ.

Kishor KV

Leave a Reply

Your email address will not be published. Required fields are marked *