CSKಗೆ ಹೊಸ ಕೋಚ್ ಆಯ್ಕೆ ! – ಸ್ಟೀಫನ್ ಫ್ಲೆಮಿಂಗ್ ಜಾಗಕ್ಕೆ ಜಹೀರ್ ಖಾನ್

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಐಪಿಎಲ್ 2027ರ ಸೀಸನ್‌ಗೆ ಮಾಜಿ ಟೀಂ ಇಂಡಿಯಾ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ಹೊಸ ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಈ ಮೂಲಕ ಸುಮಾರು 18 ವರ್ಷಗಳ ಕಾಲ ಸಿಎಸ್‌ಕೆ ತಂಡದ ಕೋಚ್ ಆಗಿದ್ದ ಸ್ಟೀಫನ್ ಫ್ಲೆಮಿಂಗ್ ಅವರ ಸ್ಥಾನವನ್ನು ಜಹೀರ್ ಖಾನ್ ತುಂಬಲಿದ್ದಾರೆ.
ಸಿಎಸ್‌ಕೆ ತಂಡದ ಕೋಚಿಂಗ್ ಜವಾಬ್ದಾರಿ ಜಹೀರ್ ಖಾನ್ ಪಾಲಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಭಾರತ ಪರ 2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಹೀರ್, ನಿವೃತ್ತಿಯ ನಂತರ ಐಪಿಎಲ್ ತಂಡಗಳ ಮ್ಯಾನೇಜ್‌ಮೆಂಟ್ ಮತ್ತು ಮೆಂಟರ್ ಆಗಿಯೂ ಕೆಲಸ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್‌ನಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಸಂಬಂಧಿಸಿದ ಜವಾಬ್ದಾರಿ ನಿರ್ವಹಿಸಿದ್ದ ಅವರು, ಲಖನೌ ಸೂಪರ್ ಜೈಂಟ್ಸ್ ತಂಡದಲ್ಲೂ ಮೆಂಟರ್ ಆಗಿದ್ದರು.
ಇದನ್ನೂ ಓದಿ: ಚಿನ್ನಕ್ಕಾಗಿ ಭಾರತ vs ಶ್ರೀಲಂಕಾ ಫೈಟ್ ! – ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ
ಇದೀಗ ಸಿಎಸ್‌ಕೆ ತಂಡದಲ್ಲಿ ಜಹೀರ್ ಖಾನ್ ಮತ್ತು ಎಂಎಸ್ ಧೋನಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಹೊಸ ಕೋಚ್ ನೇಮಕದ ವಿಚಾರದಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ವರದಿಗಳೂ ಬಂದಿವೆ.
ಸ್ಟೀಫನ್ ಫ್ಲೆಮಿಂಗ್ ಅವರ ದೀರ್ಘಕಾಲದ ಯುಗ ಮುಗಿದ ಬಳಿಕ ಸಿಎಸ್‌ಕೆ ಹೊಸ ಕೋಚಿಂಗ್ ಅಧ್ಯಾಯ ಆರಂಭಿಸುತ್ತಿದೆ. ಜಹೀರ್ ಖಾನ್ ನೇತೃತ್ವದಲ್ಲಿ ತಂಡದ ಯುವ ಆಟಗಾರರ ಅಭಿವೃದ್ಧಿ, ಬೌಲಿಂಗ್ ವಿಭಾಗ ಮತ್ತು ಮುಂದಿನ ಐಪಿಎಲ್ ಸಿದ್ಧತೆಗಳ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.

ನೋಡಿರಿ

