ಬನ್ನಿ ಹಾಪ್ ಕ್ಯಾಚ್ ಬ್ಯಾನ್ ಹೊರಗೋಗಿ ಕ್ಯಾಚ್ಹಿಡಿದ್ರೆ ನಾಟೌಟ್
ಕ್ರಿಕೆಟ್ನಲ್ಲಿ ICC ಹೊಸ ರೂಲ್ಸ್

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕ್ರಿಕೆಟ್ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದ್ದು, ಬನ್ನಿ ಹಾಪ್ ಕ್ಯಾಚ್ಗಳನ್ನು ಔಟ್ ಎಂದು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ. 2023ರ ಬಿಗ್ ಬ್ಯಾಷ್ ಲೀಗ್ನಲ್ಲಿ ಕಂಡು ಬಂದ ವಿವಾದದ ಕಾರಣಕ್ಕೆ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. 2023 ರ ಬಿಗ್ ಬ್ಯಾಷ್ ಲೀಗ್ ಸಮಯದಲ್ಲಿ ಮೈಕೆಲ್ ನೇಸರ್ ಪ್ರಸಿದ್ಧಗೊಳಿಸಿದ ಹೆಚ್ಚು ಚರ್ಚೆಯ ‘ಬನ್ನಿ ಹಾಪ್’ ಶೈಲಿಯ ಕ್ಯಾಚನ್ನು ಗುರಿಯಾಗಿಸಿ ಈ ನಿರ್ಧಾರ ಮಾಡಲಾಗಿದೆ.
ಸಿಡ್ನಿ ಸಿಕ್ಸರ್ಸ್ ವಿರುದ್ಧ ಬ್ರಿಸ್ಟೇನ್ ಹೀಟ್ ಪರ ಮೈಕೆಲ್ ನೇಸರ್ ಕ್ಯಾಚ್ ಹಿಡಿದಿದ್ದು ಬಿಬಿಎಲ್ 2023ರಲ್ಲಿ ಚರ್ಚೆಗೆ ಕಾರಣವಾಗಿತ್ತು. ಜೋರ್ಡಾನ್ ಸಿಲ್ಕ್ ಹೊಡೆದ ಲಾಫ್ಟ್ ಶಾಟ್ ಅನ್ನು ಬೆನ್ನಟ್ಟಿದ ನೇಸರ್, ಬೌಂಡರಿಯ ಬಳಿ ಹಾರಿ ಚೆಂಡನ್ನು ಹಿಡಿದರು. ಅದನ್ನು ಗಾಳಿಯಲ್ಲಿ ಮೇಲಕ್ಕೆ ಎಸೆದರು. ಆಮೇಲೆ ಅವರಿಗೆ ಬ್ಯಾಲೆನೆಸ್ಸ್ ಸಿಕ್ಕಿಲ್ಲ. ಬೌಂಡರಿನಿಂದ ಹೊರ ಹೋಗಿ ಮತ್ತೆ ಹಾರಿ ಬಾಲ್ ಹಿಡಿದು ಬೌಂಡರಿ ಲೈನ್ ಒಳಗೆ ಎಸೆಯುತ್ತಾರೆ. ನಂತ್ರ ಬೌಂಡರಿ ಲೈನ್ ಒಳಗೆ ಬಂದು ಕ್ಯಾಚ್ ಹಿಡಿತಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದು ಔಟ್ ಅಲ್ಲ ಆದ್ರೂ ಔಟ್ ಕೊಟ್ಟಿದ್ದಾರೆ ಅನ್ನೋ ಚರ್ಚೆ ಆಗಿತ್ತು. ಹೀಗಾಗಿ ಚೆಂಡನ್ನು ಎರಡನೇ ಬಾರಿ ಸ್ಪರ್ಶಿಸಬೇಕಿದ್ದರೆ ಫೀಲ್ಡರ್ ಮೈದಾನದ ಒಳಗಿರಬೇಕು ಎಂದು ರೂಲ್ಸ್ ತರಲಾಗಿದೆ. ಈ ಹೊಸ ಕ್ಯಾಚ್ ನಿಯಮ ಅಕ್ಟೋಬರ್ 2026ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಕ್ರಿಕೆಟ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದ್ದು, ಸದ್ಯದಲ್ಲೇ ಜಾರಿಗೆ ಬರಲಿದೆ. ಪರಿಷ್ಕೃತ ನಿಯಮಗಳಲ್ಲಿ, ಇನ್ನು ಮುಂದೆ ಬನ್ನಿ ಹಾಪ್ ಕ್ಯಾಚ್ಗಳನ್ನು ಔಟ್ ಎಂದು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗೆ ಕ್ಯಾಚ್ ಹಿಡಿಯಲು ಅವಕಾಶವಿದ್ದ ಕಾರಣ, ಹಲವು ಲೀಗ್ಗಳಲ್ಲಿ ಬನ್ನಿ ಹಾಪ್ ಕ್ಯಾಚ್ಗಳ ಪ್ರಯತ್ನಗಳು ಸಹ ನಡೆದಿದ್ದವು. ಇದರ ಬೆನ್ನಲ್ಲೇ ಐಸಿಸಿಯ ಈ ನಿಯಮದ ಬಗ್ಗೆ ಅಪಸ್ವರಗಳು ಕೇಳಿ ಬಂದಿತ್ತು. ಹೀಗಾಗಿ ಇದೀಗ ಬನ್ನಿ ಹಾಪ್ ಕ್ಯಾಚ್ಗಳಿಗೆ ಬ್ರೇಕ್ ಹಾಕಲು ಐಸಿಸಿ ನಿರ್ಧರಿಸಿದೆ.
ಅದರಂತೆ ಮುಂದಿನ ದಿನಗಳಲ್ಲಿ ಫೀಲ್ಡರ್ಗಳು ಮೈದಾನದ ಹೊರಗೆ ನಿಂತು ಗಾಳಿಯಲ್ಲಿ ಚೆಂಡನ್ನು ಹೊರಕ್ಕೆ ಎಸೆಯುವಂತಿಲ್ಲ. ಹೊಸ ಕ್ಯಾಚ್ ನಿಯಮವನ್ನು ಜೂನ್ 17 ರಂದು ಗಾಲೆಯಲ್ಲಿ ನಡೆಯಲಿರುವ ಶ್ರೀಲಂಕಾ vs ಬಾಂಗ್ಲಾದೇಶ್ ನಡುವಣ ಪಂದ್ಯದಲ್ಲಿ ಪರಿಚಯಿಸಲು ಐಸಿಸಿ ನಿರ್ಧರಿಸಿದೆ. ಅಲ್ಲದೆ ಅಕ್ಟೋಬರ್ 2026 ರಲ್ಲಿ ಈ ನಿಯಮ ಅಧಿಕೃತವಾಗಿ ಜಾರಿಗೊಳ್ಳಲಿದೆ ಎಂದು ತಿಳಿಸಲಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ಈ ನಿಯಮಗಳನ್ನು ಲೀಗ್ ಕ್ರಿಕೆಟ್ನಲ್ಲಿ ಬಳಸಿಕೊಳ್ಳಬಹುದಾಗಿದೆ.