ಸೋಮವಾರ ಇಡಬೇಕು ಎಚ್ಚರಿಕೆ ಹೆಜ್ಜೆ – ಅಪ್ಪತಪ್ಪಿಯೂ ಶಿವನ ವಿರುದ್ಧ ಈ ಕೆಲಸ ಮಾಡಬೇಡಿ

ಸೋಮವಾರ ದೇವಾಧಿದೇವ ಶಿವನಿಗೆ ಅರ್ಪಿತವಾಗಿದೆ. ಈ ದಿನ ಭಕ್ತರು ಮಾಡುವ ಪ್ರತಿಯೊಂದು ಕೆಲಸವೂ ಮಹತ್ವ ಪಡೆಯುತ್ತದೆ. ಈಶ್ವರನ ಕೃಪೆ ಸದಾ ನಿಮ್ಮ ಮೇಲಿರಬೇಕು ಎಂದಾದ್ರೆ ನೀವು ಸೋಮವಾರ ಎಚ್ಚರಿಕೆ ಹೆಜ್ಜೆ ಇಡಬೇಕು.
ಹಿಂದೂ ಧರ್ಮ ದಲ್ಲಿ ಪೂಜಿಸಲ್ಪಡುವ ಕೋಟ್ಯಾಂತರ ದೇವಾನುದೇವತೆಗಳಲ್ಲಿ ಶಿವ ಪ್ರಮುಖ ಸ್ಥಾನ ಪಡೆದಿದ್ದಾನೆ. ಮಹಾದೇವನನ್ನು ನಾನಾ ಹೆಸರುಗಳಿಂದ ಭಕ್ತರು ಪೂಜೆ ಮಾಡ್ತಾರೆ. ಜಟಿಲ ಸಮಸ್ಯೆಗಳಿಗೂ ಪರಿಹಾರ ನೀಡಿ, ಕಷ್ಟಗಳನ್ನು ಪರಿಹರಿಸಬಲ್ಲ ದೇವರೆಂದ್ರೆ ಶಿವ ಎಂದು ನಂಬಲಾಗಿದೆ. ತನ್ನನ್ನು ಭಕ್ತಿಯಿಂದ ಪ್ರಾರ್ಥನೆ ಮಾಡುವ ಯಾವುದೇ ವ್ಯಕ್ತಿಗೂ ಈಶ್ವರ ಒಲಿಯಬಲ್ಲ. ಭಕ್ತರು ಕೇಳಿದ ವರವನ್ನು ನೀಡಬಲ್ಲ. ಶಿವನನ್ನು ಒಲಿಸಿಕೊಳ್ಳಲು ಜನರು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಶಿವನ ಪೂಜೆ, ಉಪವಾಸ, ಆರಾಧನೆ, ಮಂತ್ರ ಪಠಣೆ ಹೀಗೆ ಅನೇಕ ವಿಧಗಳಲ್ಲಿ ಶಿವನನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಯುತ್ತದೆ.
ಸೋಮವಾರ ಈ ಕೆಲಸಗಳನ್ನ ಅಪ್ಪಿತಪ್ಪಿ ಮಾಡಬೇಡಿ
- ಸೋಮವಾರ ಬೆಳಿಗ್ಗೆ 7 ಗಂಟೆ 30 ನಿಮಿಷದಿಂದ 9 ಗಂಟೆಯವರೆಗೆ ರಾಹುಕಾಲ ಇರುತ್ತದೆ. ಆದ್ದರಿಂದ, ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಅಥವಾ ಪ್ರಯಾಣ ಇತ್ಯಾದಿಗಳನ್ನು ಮಾಡಬಾರದು.
- ನೀವು ಯಾವ ವಾರ ಯಾವ ದಿಕ್ಕಿನಲ್ಲಿ ಪ್ರಯಾಣ ಬೆಳೆಸಬೇಕು ಎಂಬುದನ್ನು ಕೂಡ ಪುರಾಣಗಳಲ್ಲಿ ಹೇಳಲಾಗಿದೆ. ಸೋಮವಾರದಂದು ಉತ್ತರ, ಪೂರ್ವ ಮತ್ತು ಆಗ್ನೇಯ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ಸೋಮವಾರದಂದು ದಿಶಾಸುಲ್ ವಿಶೇಷವಾಗಿ ಪೂರ್ವ ದಿಕ್ಕಿನಲ್ಲಿ ಸಂಭವಿಸುತ್ತದೆ. ದಿಶಾಶೂಲದಲ್ಲಿ ಪ್ರಯಾಣ ಮಾಡುವುದರಿಂದ ಕೆಲಸದಲ್ಲಿ ವೈಫಲ್ಯ ಅಥವಾ ಅಶುಭ ಘಟನೆ ನಡೆಯುತ್ತದೆ.
- ಸೋಮವಾರ ಕೆಲ ಆಹಾರ ಸೇವನೆಯನ್ನು ತ್ಯಜಿಸಬೇಕು. ವಿಶೇಷವಾಗಿ ಶನಿದೇವನಿಗೆ ಸಂಬಂಧಿಸಿದ ಬದನೆ ಕಾಯಿ, ಹಲಸಿನ ಕಾಯಿ, ಸಾಸಿವೆ, ಕಪ್ಪು ಎಳ್ಳು, ಉದ್ದಿನಬೇಳೆಯನ್ನು ತಿನ್ನಬಾರದು. ಹಾಗೆಯೇ ಈ ದಿನ ಶನಿಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡಬೇಡಿ.
- ನಿಮ್ಮ ಜಾತಕದಲ್ಲಿ ಚಂದ್ರ ದೋಷವಿದ್ದರೆ ನೀವು ಕೆಲ ವಸ್ತುಗಳನ್ನು ಸೋಮವಾರ ಅಪ್ಪಿತಪ್ಪಿಯೂ ದಾನ ಮಾಡಬಾರದು. ನೀವು ಚಂದ್ರನ ದೋಷದಿಂದ ಬಳಲುತ್ತಿದ್ದರೆ ಸಕ್ಕರೆ, ಹಾಲು, ಮೊಸರು, ಬಿಳಿ ಬಟ್ಟೆ ಮುಂತಾದ ಬಿಳಿ ವಸ್ತುಗಳನ್ನು ಸೋಮವಾರ ಮರೆತೂ ದಾನ ಮಾಡಬೇಡಿ.

ನೋಡಿರಿ

