ಮೊದಲ ಬಾರಿಗೆ ಮಾನವನ ಮೆದುಳಿಗೆ ರೋಬೋಟ್ ಚಿಪ್ ಅಳವಡಿಕೆ ಯಶಸ್ವಿ! – ಎಲಾನ್ ಮಸ್ಕ್

ಮೊದಲ ಬಾರಿಗೆ ಮಾನವನ ಮೆದುಳಿಗೆ ರೋಬೋಟ್ ಚಿಪ್ ಅಳವಡಿಕೆ ಯಶಸ್ವಿ! – ಎಲಾನ್ ಮಸ್ಕ್

ಎಲಾನ್ ಮಸ್ಕ್ ಅವರ ಒಡೆತನದ ನ್ಯೂರಾಲಿಂಕ್ ಕಂಪನಿಯು ಮಹತ್ವದ ಸಾಧನೆಯೊಂದನ್ನು ಮಾಡಿದೆ. ಈ ಕಂಪನಿ ಮಾನವನ ಮೆದುಳಿಗೆ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್ ಚಿಪ್‌ ಅಳವಡಿಸುವಲ್ಲಿ ಯಶಸ್ವಿಯಾಗಿದೆ.

ಈ ಬಗ್ಗೆ ಎಲಾನ್‌ ಮಸ್ಕ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೋಮವಾರ ಮೊದಲ ಬಾರಿಗೆ ಮಾನವನ ಮೆದುಳಿನಲ್ಲಿ ನ್ಯೂರಾಲಿಂಕ್ ಅನ್ನು ಅಳವಡಿಸಲಾಗಿದೆ. ರೋಗಿಯು ಚೇತರಿಸಿಕೊಳ್ಳುತ್ತಿದ್ದಾನೆ. ನರಕೋಶಗಳ ಪತ್ತೆ ನಿಖರವಾಗಿದೆ. ಈ ಪ್ರಯೋಗವು ಭರವಸೆಯ ಫಲಿತಾಂಶವನ್ನು ನೀಡುತ್ತಿದೆ ಎಂದು ಮಸ್ಕ್ ಹೇಳಿದ್ದಾರೆ.

ಇದನ್ನೂ ಓದಿ:ಮೊಬೈಲ್‌ ಸ್ವಿಚ್ಡ್‌ ಆಫ್‌.. ಸಂಪರ್ಕಕ್ಕೆ ಸಿಕ್ಕಿಲ್ಲ.. – ಸಿಎಂ ನಾಪತ್ತೆ.. ಹುಡುಕಿ ಕೊಟ್ಟವರಿಗೆ ಬಂಪರ್ ಬಹುಮಾನ! 

ಅಮೆರಿಕನ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಕಳೆದ ವರ್ಷ ಮೇ ತಿಂಗಳಲ್ಲಿ ಮಾನವ ಮೆದುಳು ನೇರವಾಗಿ ಕಂಪ್ಯೂಟರ್‌ನೊಂದಿಗೆ ಸಂಪರ್ಕ ಸಾಧಿಸುವ ‘ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್’ (ಬಿಸಿಐ) ಪ್ರಯೋಗಗಳನ್ನು ಅನುಮೋದಿಸಿತು. ನ್ಯೂರಾಲಿಂಕ್ ಸಂಸ್ಥೆ ಸರ್ಜಿಕಲ್ ರೋಬೋಟ್ (ಆರ್‌1) ಎಂಬ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್ ಚಿಪ್‌ ಒಂದನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಈ ಬ್ರೈನ್ ಚಿಪ್ ಅನ್ನು ಹಂದಿಗಳು ಮತ್ತು ಮಂಗಗಳಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಈ ಉಪಕರಣವು ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿದೆ ಎಂದು ನ್ಯೂರಾಲಿಂಕ್ ಕಂಪನಿ ತಜ್ಞರು ಹೇಳುತ್ತಾರೆ.

ಈ ಪ್ರಯೋಗದ ಮುಖ್ಯ ಗುರಿ ಮಾನವ ಸಾಮರ್ಥ್ಯಗಳನ್ನು ಉತ್ತೇಜಿಸುವುದು ಮತ್ತು ಪಾರ್ಕಿನ್ಸನ್‌ನಂತಹ ನರವೈಜ್ಞಾನಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಎಂದು ಸಂಸ್ಥೆ ಹೇಳಿದೆ. 5 ನಾಣ್ಯಗಳ ಗಾತ್ರದ ಚಿಪ್ ಅನ್ನು ವ್ಯಕ್ತಿಯ ಮೆದುಳಿನಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಲಾಗುತ್ತದೆ. ಈ ಚಿಪ್ ತಂತ್ರಜ್ಞಾನವನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ನ್ಯೂರಾಲಿಂಕ್ 400 ಕ್ಕೂ ಹೆಚ್ಚು ವೃತ್ತಿಪರರನ್ನು ನೇಮಿಸಿಕೊಂಡಿದ್ದು, ಪ್ರಯೋಗಗಳಿಗಾಗಿ 363 ಮಿಲಿಯನ್ ಡಾಲರ್ ಹಣವನ್ನು ವ್ಯಯಿಸಿದ್ದು, ಪ್ರಯೋಗಗಳನ್ನು ಮುಂದುವರೆಸುತ್ತಿದೆ.

Shwetha M