ಟ್ರೋಫಿ ಬೇಡ.. ಗಿಡಮರಗಳನ್ನ ಬೆಳೆಸೋಣ – ಸಿಎಸ್ ಕೆ ಡಾಟ್ ಬಾಲ್ ಆಟ ಫುಲ್ ಟ್ರೋಲ್

15 ಸೀಸನ್.. 12 ಸಲ ಪ್ಲೇಆಫ್.. 10 ಸಲ ಫೈನಲ್.. 5 ಸಲ ಚಾಂಪಿಯನ್ಸ್.. ಐಪಿಎಲ್ನ ದಿ ಮೋಸ್ಟ್ ಸಕ್ಸಸ್ಫುಲ್ ಟೀಂ ಚೆನ್ನೈ ಸೂಪರ್ ಕಿಂಗ್ಸ್.. ಇಲ್ಲಿ 15 ಸೀಸನ್ ಅಂತಾ ತಪ್ಪಾಗಿ ಹೇಳಿಲ್ಲ. 2 ಸೀಸನ್ ಸಿಎಸ್ಕೆ ಬ್ಯಾನ್ ಆಗಿತ್ತು. 17 ಸೀಸನ್ಗಳಲ್ಲಿ ಆ 2 ವರ್ಷನ ಲೆಸ್ ಮಾಡಿ 15 ಸೀಸನ್ ಅಂತಾ ಹೇಳಿದ್ದೇನೆ. ಹೀಗೆ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ನಲ್ಲೇ ಇರ್ತಿದ್ದ ಸಿಎಸ್ಕೆ ಈ ಸಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಪರ್ಫಾಮ್ ಮಾಡ್ತಿದೆ. ಬೇಡದ ದಾಖಲೆಗಳನ್ನ ಸರಮಾಲೆಯಲ್ಲೇ ಸೃಷ್ಟಿಸಿದೆ.
ಇದನ್ನೂ ಓದಿ : ಧೋನಿ ಬಳಗಕ್ಕೆ ಹೀನಾಯ ಸೋಲು – ಕೆಕೆಆರ್‌ಗೆ 8 ವಿಕೆಟ್‌ಗಳ ಸುಲಭ ಜಯ
ಶುಕ್ರವಾರ ಕೊಲ್ಕತ್ತಾ ಟೀಂ ವಿರುದ್ಧ ಸೋಲೋ ಮೂಲಕ ಸಿಎಸ್ಕೆ ತಂಡ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 5 ಪಂದ್ಯಗಳನ್ನು ಸೋತ ಕಳಪೆ ದಾಖಲೆ ಬರೆದಿದೆ. ಅಷ್ಟೇ ಅಲ್ಲ ಚೆನ್ನೈನ ಚೆಪಾಕ್ ಅಂಗಳದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸುವ ಮೂಲಕ ಇದೇ ಮೊದಲ ಬಾರಿಗೆ ತವರಿನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಬೇಡದ ದಾಖಲೆ ಮಾಡಿದೆ. ಅಲ್ದೇ ಇಷ್ಟು ವರ್ಷಗಳ ಇತಿಹಾಸದಲ್ಲಿ ಸಿಎಸ್ಕೆ 9 ವಿಕೆಟ್ಗಳಿಗೆ 103 ರನ್ ಗಳಿಸಿದ್ದೇ ಲೋಯೆಸ್ಟ್ ಸ್ಕೋರ್ ಆಗಿದೆ. ಹಾಗೇ 17 ವರ್ಷಗಳ ಬಳಿಕ ಆರ್ಸಿಬಿ ಚೆಪಾಕ್ನಲ್ಲಿ ಗೆಲುವು ಕಂಡಿತ್ತು. ಡಿಸಿ ಕೂಡ 10 ವರ್ಷಗಳ ಬಳಿಕ ಸಿಎಸ್ಕೆಯನ್ನ ಅವ್ರದ್ದೇ ಮೈದಾನದಲ್ಲಿ ಬೇಟೆಯಾಡಿತ್ತು. ಚೆನ್ನೈನ ಭದ್ರಕೋಟೆ ಅಂತಾ ಕರೆಸಿಕೊಳ್ತಿದ್ದ ಚೆಪಾಕ್ ಈಗ ಸಿಎಸ್ಕೆ ಕೈಯಿಂದ ಜಾರಿ ಹೋದಂತಿದೆ.
ಐಪಿಎಲ್ ಮ್ಯಾಚ್ ನೋಡ್ಬೇಕಾದ್ರೆ ಪ್ರತಿ ಡಾಟ್ ಬಾಲ್‌ನ ಸ್ಕೋರ್ ಗ್ರಾಫಿಕ್ಸ್‌ನಲ್ಲಿ ಹಸಿರು ಮರಗಳ ಚಿಹ್ನೆಗಳು ಕಾಣಿಸಿಕೊಳ್ತವೆ. ಅಂದ್ರೆ ಅದ್ರ ಅರ್ಥ ಪ್ರತೀ ಡಾಟ್ ಬಾಲ್‌ಗೆ ಮರಗಳನ್ನ ಪ್ಲಾಂಟ್ ಮಾಡ್ಲಾಗುತ್ತೆ. ಟಾಟಾ ಗ್ರೂಪ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ಬಿಸಿಸಿಐ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೌಲ್ ಮಾಡುವ ಪ್ರತಿ ಡಾಟ್ ಬಾಲ್‌ಗೆ 18 ಮರಗಳನ್ನು ನೆಡುವುದಾಗಿ ಭರವಸೆ ನೀಡಿದೆ. ಅಂದ್ರೆ ಇದು 18ನೇ ಸೀಸನ್ ಆಗಿರೋದ್ರಿಂದ 18 ಸಸಿ ನೆಡಲಾಗುತ್ತೆ. ವಿಷ್ಯ ಅಂದ್ರೆ ಕೆಕೆಆರ್ ವಿರುದ್ಧದ ಮ್ಯಾಚಲ್ಲಿ ಸಿಎಸ್ಕೆ 61 ಡಾಟ್ ಬಾಲ್ಗಳನ್ನ ಆಡಿದೆ. ಅಂದ್ರೆ 10.1 ಓವರ್‌ಗಳು, ಇದು ಇನ್ನಿಂಗ್ಸ್‌ನ ಅರ್ಧದಷ್ಟು. ಮತ್ತೊಂದೆಡೆ, ಕೆಕೆಆರ್ ಅಷ್ಟೇ ಎಸೆತಗಳಲ್ಲೇ ಟಾರ್ಗೆಟ್ ರೀಚ್ ಆಗಿ ಮ್ಯಾಚ್ ಗೆದ್ದುಕೊಳ್ತು. ಈ ಸೀಸನ್ನಲ್ಲಿ 6 ಪಂದ್ಯಗಳನ್ನ ಆಡಿರುವ ಸಿಎಸ್ಕೆ ಒಟ್ಟಾರೆಯಾಗಿ 245 ಡಾಟ್ ಬಾಲ್ಗಳನ್ನ ಆಡಿದೆ. ಇದು ಉಳಿದೆಲ್ಲಾ ತಂಡಗಳಿಗಿಂತ ಜಾಸ್ತಿ. ಹೀಗಾಗೇ ಟ್ರೋಲರ್ಸ್ ಚೆಪಾಕ್ ಮೈದಾನದ ಸುತ್ತ ಮುತ್ತ ಗಿಡಮರಗಳೇ ಬೆಳೆದಿರುವಂತೆ ಎಡಿಟ್ ಮಾಡಿ ಟ್ರೋಲ್ ಮಾಡ್ತಿದ್ದಾರೆ. ಸಿಎಸ್ಕೆ ತಂಡದ ಲೋಗೋದಲ್ಲಿರುವ ಸಿಂಹ ಲೋಗೋದಿಂದ ಮಾಯವಾಗಿದೆ. ಸಿಎಸ್ಕೆ ಬೆಳೆಸುತ್ತಿರೋ ಫಾರೆಸ್ಟ್ನಲ್ಲಿ ವಾಸ ಮಾಡಲು ಹೋಗಿದೆ ಅಂತಾ ಲೇವಡಿ ಮಾಡಿದ್ದಾರೆ. ಅಚ್ಚರಿಯ ವಿಷ್ಯ ಅಂದ್ರೆ ಈ ಬಾರಿ ಐಪಿಎಲ್ನಲ್ಲಿ ಸಿಎಸ್ಕೆ ಲೀಡ್ ಮಾಡ್ತಿದ್ದ ರುತುರಾಜ್ ಗಾಯಕ್ವಾಡ್ ರೂಲ್ಡ್ಔಟ್ ಆಗಿದ್ದಾರೆ. ಮೊಣಕೈ ಇಂಜುರಿ ಕಾರಣ ನೀಡಿ ಹೊರಗೆ ಉಳಿದಿದ್ದಾರೆ. ಹೀಗಾಗಿ ಧೋನಿ ಕ್ಯಾಪ್ಟನ್ ಆಗಿ ಮತ್ತೆ ಲೀಡ್ ಮಾಡ್ತಿದ್ದಾರೆ. ಆದ್ರೆ ಫಾರ್ಮ್ನಲ್ಲಿ ಇದ್ದ ಗಾಯಕ್ವಾಡ್ರನ್ನ ಧೋನಿಯೇ ಕೈ ಮುರಿದು ಕೂರಿಸಿದ್ದಾರೆ ಎನ್ನುವಂತೆ ಟ್ರೋಲ್ ಮಾಡಿದ್ದಾರೆ.