ವೈಯಕ್ತಿಕ ಕಾರಣ ನೀಡಿ ಏಷ್ಯಾಕಪ್ ಟೂರ್ನಿ ಬಿಟ್ಟು ತಾಯ್ನಾಡಿಗೆ ಬಂದ ಬುಮ್ರಾ – ಧೋನಿಯನ್ನು ಉದಾಹರಿಸಿ ಟೀಕಿಸಿದ ಕ್ರಿಕೆಟ್‌ ಪ್ರೇಮಿಗಳು!

ವೈಯಕ್ತಿಕ ಕಾರಣ ನೀಡಿ ಏಷ್ಯಾಕಪ್ ಟೂರ್ನಿ ಬಿಟ್ಟು ತಾಯ್ನಾಡಿಗೆ ಬಂದ ಬುಮ್ರಾ – ಧೋನಿಯನ್ನು ಉದಾಹರಿಸಿ ಟೀಕಿಸಿದ ಕ್ರಿಕೆಟ್‌ ಪ್ರೇಮಿಗಳು!

ಟೀಂ ಇಂಡಿಯಾದ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರು ತಂದೆಯಾದ ಖುಷಿಯಲ್ಲಿದ್ದಾರೆ. ಅವರ ಪತ್ನಿ ಸಂಜನಾ ಗಣೇಶನ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿನ್ನೆಲೆ ಅವರು ತಯ್ನಾಡಿಗೆ ವಾಪಾಸ್ಸಾಗಿದ್ದಾರೆ. ಬುಮ್ರಾ ವೈಯಕ್ತಿಕ ಕಾರಣ ನೀಡಿ ಮಹತ್ವದ ಟೂರ್ನಿಯನ್ನು ಅರ್ಧಕ್ಕೆ ಬಿಟ್ಟು ಭಾರತಕ್ಕೆ ಆಗಮಿಸಿರುವ ವಿಚಾರ ಈಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಗ್ರಾಸವಾಗಿದೆ.

ಏಷ್ಯಾಕಪ್ ಸಲುವಾಗಿ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ್ದ ಬುಮ್ರಾ ಪಾಕಿಸ್ತಾನ ವಿರುದ್ಧದ ಪಂದ್ಯ ಮುಗಿದ ಒಂದು ದಿನದ ಬಳಿಕ ಮತ್ತೆ ತಂಡವನ್ನು ತೊರೆದು ದೇಶಕ್ಕೆ ವಾಪಸ್ಸಾಗಿದ್ದರು. ಆರಂಭದಲ್ಲಿ ಬುಮ್ರಾಗೆ ಇಂಜುರಿಯಾಗಿರಬಹುದೆಂಬ ಆತಂಕ ಅಭಿಮಾನಿಗಳನ್ನು ಕಾಡಲಾರಂಭಿಸಿತ್ತು. ಆದರೆ ಆ ಬಳಿಕ ಬುಮ್ರಾ ಅವರು ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಕಾರಣ ದೇಶಕ್ಕೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿತ್ತು. ಅದರಂತೆ ಸೋಮವಾರ ಮುಂಜಾನೆ ಅವರ ಮಡದಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನು ಬುಮ್ರಾ ಅವರೇ ಹಂಚಿಕೊಂಡಿದ್ದರು. ಆದರೆ ಟೂರ್ನಿ ಆಡುವಾಗ ವೈಯಕ್ತಿಕ ಕಾರಣ ನೀಡಿ ತಂಡವನ್ನು ತೊರೆದಿದ್ದಕ್ಕೆ ಜಸ್ಪ್ರೀತ್​ ಬುಮ್ರಾರನ್ನು ಕ್ರಿಕೆಟ್‌ ಪ್ರೇಮಿಗಳು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಭಾರತ ಕ್ರಿಕೆಟ್‌ ಟೀಂನ ವೇಗದ ಬೌಲರ್‌ ಬುಮ್ರಾಗೆ ತಂದೆಯಾದ ಖುಷಿ – ಗಂಡು ಮಗುವಿಗೆ ಜನ್ಮ ನೀಡಿದ ಸಂಜನಾ ಗಣೇಶನ್

ಮಹತ್ವದ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಬುಮ್ರಾ, ದೇಶಕ್ಕಾಗಿ ಆಡುವ ಬದಲು ತಮ್ಮ ವೈಯಕ್ತಿಕ ಕಾರಣಕ್ಕಾಗಿ ಟೂರ್ನಿ ಮಧ್ಯದಲ್ಲೇ ತಂಡವನ್ನು ತೊರೆದಿರುವುದು ಎಷ್ಟು ಸರಿ? ಬುಮ್ರಾಗೆ ದೇಶಕ್ಕಿಂತ ಕುಟುಂಬವೇ ಮುಖ್ಯವಾಯಿತಾ ಎಂದು ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದಾರೆ. ಹಾಗೆಯೇ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಉದಾಹರಿಸಿ ಬುಮ್ರಾರನ್ನು ಟೀಕೆಗೆ ಗುರಿ ಮಾಡಿದ್ದಾರೆ.

ವಾಸ್ತವವಾಗಿ ಟೀಂ ಇಂಡಿಯಾ 2015 ರ ಏಕದಿನ ವಿಶ್ವಕಪ್ ಆಡುವ ವೇಳೆ ಟೂರ್ನಿಯ ಮಧ್ಯದಲ್ಲಿ ಎಂಎಸ್ ಧೋನಿ ಅವರ ಮಡದಿ ಸಾಕ್ಷಿ ಧೋನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಹತ್ವದ ಟೂರ್ನಿಯನ್ನು ಮಧ್ಯದಲ್ಲೇ ತೊರೆಯುವುದನ್ನು ನಿರಾಕರಿಸಿದ್ದ ಧೋನಿ ಮಡದಿ ಮತ್ತು ಮಗಳನ್ನು ನೋಡಲು ಹೋಗದೆ ತಂಡದಲ್ಲಿ ಆಡುವುದನ್ನು ಮುಂದುವರೆಸಿದ್ದರು. ಇದೀಗ ಆ ಘಟನೆಯನ್ನು ಸ್ಮರಿಸಿರುವ ನೆಟ್ಟಿಗರು, ಬುಮ್ರಾ ಧೋನಿಯನ್ನು ನೋಡಿ ಕಲಿಯಲಿ ಎಂದಿದ್ದಾರೆ.

suddiyaana