2024ರ ಟಿ-20 ವಿಶ್ವಕಪ್ ಗೆ ನೇರ ಅರ್ಹತೆ ಪಡೆದ ನೆದರ್ಲೆಂಡ್ಸ್

2024ರ ಟಿ-20 ವಿಶ್ವಕಪ್ ಗೆ ನೇರ ಅರ್ಹತೆ ಪಡೆದ ನೆದರ್ಲೆಂಡ್ಸ್

ಸೂಪರ್ 12 ಹಂತದ ತನ್ನ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು  ಬಗ್ಗುಬಡಿದು ನೆದರ್ಲೆಂಡ್ಸ್ ಜಯಭೇರಿ ಸಾಧಿಸಿ, 2024ರ ಟಿ-20 ವಿಶ್ವಕಪ್ ಗೆ ನೇರವಾಗಿ ಅರ್ಹತೆ ಪಡೆದಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ಈ ಪಂದ್ಯಾವಳಿ ನಡೆದಿದೆ.

ಇದನ್ನೂ ಓದಿ: ವಿಶ್ವ ದಾಖಲೆ ಬರೆದ ಪಾಕ್ ಮಹಿಳಾ ಕ್ರಿಕೆಟರ್ ಅಮೀನ್

ಐಸಿಸಿ ನಿಯಾಮವಳಿಯಂತೆ, 2022ರ ಸೂಪರ್ -12 ಹಂತದ ಗುಂಪುಗಳ ಅಗ್ರ 4  ತಂಡಗಳಿಗೆ 2024ರ ವಿಶ್ವಕಪ್ ಗೆ ನೇರ ಅರ್ಹತೆ ಲಭಿಸುತ್ತದೆ. ಹಾಗೂ ಈ 8 ತಂಡಗಳನ್ನು ಹೊರತುಪಡಿಸಿ ಕೂಟದ ಅತ್ಯುನ್ನತ ರ‍್ಯಾಂಕಿಂಗ್ ಹೊಂದಿರುವ 2 ತಂಡಗಳಿಗೂ ನೇರ ಪ್ರವೇಶ ಸಿಗಲಿದೆ. ಜೊತೆಗೆ ಅತಿಥೇಯ ರಾಷ್ಟ್ರಗಳಿಗೂ ಪಾಲ್ಗೊಳ್ಳುವ ಅವಕಾಶ ಲಭಿಸುತ್ತದೆ. ದಕ್ಷಿಣ ಆಫ್ರಿಕಾವನ್ನು ಪರಾಭವಗೊಳಿಸುವ ಮೂಲಕ ನೆದರ್ಲೆಂಡ್ಸ್ 2ನೇ ವಿಭಾಗದ ಅಂಕಪಟ್ಟಿಯಲ್ಲಿ  4ನೇ ಸ್ಥಾನಿಯಾಯಿತು.

ವೆಸ್ಟ್ ಇಂಡಿಸ್, ಯುಎಸ್ ಎ, ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ , ಅಫ್ಘಾನಿಸ್ತಾನ, ಶ್ರೀಲಂಕಾ, ನೆದರ್ಲೆಂಡ್ಸ್ ಮತ್ತು ಬಾಂಗ್ಲಾದೇಶ ಈ ತಂಡಗಳು 2024ರ ಟಿ-20 ವಿಶ್ವಕಪ್ ಗೆ ನೇರ ಅರ್ಹತೆ ಪಡೆದ ತಂಡಗಳಾಗಿವೆ.

suddiyaana