ಆಗಿದ್ದು ಮೊಣಕಾಲು ಆಪರೇಷನ್!‌ – ಎಚ್ಚರವಾದಾಗ ಬಾಲಕ ಮಾತನಾಡಿದ್ದು ಫಾರಿನ್‌ ಭಾಷೆ!

ಆಗಿದ್ದು ಮೊಣಕಾಲು ಆಪರೇಷನ್!‌ – ಎಚ್ಚರವಾದಾಗ ಬಾಲಕ ಮಾತನಾಡಿದ್ದು ಫಾರಿನ್‌ ಭಾಷೆ!

ಸಾಮಾನ್ಯವಾಗಿ ಮೆದುಳಿನ ಸರ್ಜರಿ ಆದಾಗ ಕೆಲ ರೋಗಿಗಳಿಗೆ ಹಿಂದಿನದ್ದೆಲ್ಲಾ ಮರೆತು ಹೋಗುತ್ತೆ. ಮನೆಯವರ ನೆನಪು ಕೂಡ ಇರಲ್ಲ. ಆದ್ರೀಗ ಇಲ್ಲೊಂದು ಕಡೆ ವಿಚಿತ್ರ ಘಟನೆ ನಡೆದಿದೆ. ಬಾಲಕನಿಗೆ ಮೊಣಕಾಲು ಸರ್ಜರಿಯಾದ ಬಳಿಕ ಆತ ಫಾರಿನ್‌ ಭಾಷೆ ಮಾತನಾಡಲು ಶುರುಮಾಡಿದ್ದಾನೆ.

ಇದನ್ನೂ ಓದಿ: ಏಯ್..‌ ಬೆನ್ನುಮೂಳೆ ಇಲ್ಲದವನೇ.. ಬಾರೋ ಅಖಾಡಕ್ಕೆ! – ಗಿಲ್ಲಿ ಮುಂದೆ ತೊಡೆ ತಟ್ಟಿ ಸವಾಲೆಸೆದ ಅಶ್ವಿನಿ

ಹೌದು ಈ ವಿಚಿತ್ರ ಘಟನೆ ನೆದರ್​ಲ್ಯಾಂಡ್​ನಲ್ಲಿ ನಡೆದಿದೆ. ಬಾಲಕ  ಫುಟ್ಬಾಲ್ ಆಡುವಾಗ ಗಾಯಗೊಂಡು ಮೊಣಕಾಲಿನ ಶಸ್ತ್ರಚಿಕಿತ್ಸೆಗಾಗಿ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿತ್ತು ಮತ್ತು ಸುರಕ್ಷಿತವಾಗಿತ್ತು ಮತ್ತು ತಕ್ಷಣ ಯಾವುದೇ ತೊಂದರೆಯಾಗಲಿಲ್ಲ. ಬಾಲಕನಿಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಬಾಲಕ ಎಚ್ಚರವಾದಾಗ ಡಚ್ ಬದಲು ಇಂಗ್ಲಿಷ್​ನಲ್ಲಿ ಮಾತನಾಡಲು ಶುರು ಮಾಡಿದ್ದ. ನಾನು ಅಮೆರಿಕದಲ್ಲಿದ್ದೇನೆ ಎಂದು ಹೇಳುತ್ತಿದ್ದ.

17 ವರ್ಷದ ಆ ಹುಡುಗನ ಮಾತೃಭಾಷೆ ಡಚ್. ಆದ್ರೆ  ಆತ ಎಚ್ಚರವಾದಾಗ ಅವನು ಶಾಲೆಯಲ್ಲಿ ಪ್ರಾಥಮಿಕವಾಗಿ ಬಳಸುತ್ತಿದ್ದ ಇಂಗ್ಲಿಷ್ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದ. ಆರಂಭದಲ್ಲಿ, ಅವನನ್ನು ದಾಖಲಿಸಿದ ಆಸ್ಪತ್ರೆಯ ಸಿಬ್ಬಂದಿ ಇದು ಸ್ವಲ್ಪ ಸಮಯಕ್ಕೆ ಸರಿಯಾಗಬಹುದು ಎಂದು ಭಾವಿಸಿದ್ದರು, ಆದರೆ ಹಾಗಾಗಲಿಲ್ಲ.ಆದರೆ ಆತನಿಗಾಗಿತ್ತು ಫಾರಿನ್ ಲ್ಯಾಂಗ್ವೇಜ್ ಸಿಂಡ್ರೋಮ್ ಎಂಬುದನ್ನು ವೈದ್ಯರು ಪತ್ತೆಹಚ್ಚಿದರು.

ವೈದ್ಯಕೀಯ ವರದಿಯ ಪ್ರಕಾರ, ಅವನಿಗೆ ಯಾವುದೇ ಹಿಂದಿನ ಮನೋವೈದ್ಯಕೀಯ ಇತಿಹಾಸವಿರಲಿಲ್ಲ, ಯಾವ ಖಿನ್ನತೆಯೂ ಇರಲಿಲ್ಲ. ಇದು ವಿದೇಶಿ ಭಾಷಾ ಸಿಂಡ್ರೋಮ್ ಎಂದು ವೈದ್ಯರು ಗುರುತಿಸಿದ್ದಾರೆ. ಈ ಸ್ಥಿತಿಯಲ್ಲಿ ರೋಗಿಗಳು ಇದ್ದಕ್ಕಿದ್ದಂತೆ ಮತ್ತು ಅನೈಚ್ಛಿಕವಾಗಿ ತಮ್ಮ ಮಾತೃಭಾಷೆಯ ಬದಲಿಗೆ ಬೇರೆ ಭಾಷೆಯನ್ನು ಮಾತನಾಡಲು ಶುರು ಮಾಡುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.

Shwetha M