ನೆಪ್ಚ್ಯೂನ್ ಗ್ರಹದ ಮೇಲೆ ನಿಗೂಢ ಕಪ್ಪು ಚುಕ್ಕೆ ಪತ್ತೆ! –  ಪ್ರಕಾಶಮಾನವಾದ ಚುಕ್ಕೆಯ ರಹಸ್ಯವೇನು?

ನೆಪ್ಚ್ಯೂನ್ ಗ್ರಹದ ಮೇಲೆ ನಿಗೂಢ ಕಪ್ಪು ಚುಕ್ಕೆ ಪತ್ತೆ! –  ಪ್ರಕಾಶಮಾನವಾದ ಚುಕ್ಕೆಯ ರಹಸ್ಯವೇನು?

ಭಾರತದ ಚಂದ್ರಯಾನದ ಬಳಿಕ ಸೌರಮಂಡಲದ ಬಗ್ಗೆ ಜನರಿಗಿರುವ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಅದ್ರಲ್ಲೂ ಖಗೋಳ ವಿಜ್ಞಾನಿಗಳಂತೂ ನಿತ್ಯವೂ ಸೌರಮಂಡಲಕ್ಕೆ ಸಂಬಂಧಿಸಿದ ಒಂದಲ್ಲಾ ಒಂದು ಸೀಕ್ರೆಟ್​ಗಳನ್ನು ಪತ್ತೆ ಹಚ್ಚುತ್ತಲೇ ಇದ್ದಾರೆ. ಇದೀಗ ನೆಪ್ಚ್ಯೂನ್ ಗ್ರಹಕ್ಕೆ ಸಂಬಂಧಿಸಿ ಖಗೋಳ ವಿಜ್ಞಾನಿಗಳು ಮಹತ್ವದ ಸಂಗತಿಯೊಂದನ್ನ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಚಂದ್ರಯಾನ – 3 ಸಕ್ಸಸ್‌ ಬೆನ್ನಲ್ಲೇ ಹೊಸ ಕ್ರಾಂತಿಗೆ ಮುಂದಾದ ಇಸ್ರೋ – ಆದಿತ್ಯ-ಎಲ್ 1 ಉಡಾವಣೆಗೆ ಮುಹೂರ್ತ ಫಿಕ್ಸ್!

ನೆಪ್ಚ್ಯೂನ್ ಗ್ರಹದ ಮೇಲೆ ಇದೇ ಮೊದಲ ಬಾರಿ ಕಪ್ಪು ಚುಕ್ಕೆಯೊಂದು ಪತ್ತೆಯಾಗಿದೆ. ಅಷ್ಟೇ ಅಲ್ಲ, ಕಪ್ಪು ಚುಕ್ಕೆ ಬಳಿ ಇನ್ನೊಂದು ಪ್ರಕಾಶಮಾನವಾದ ಚುಕ್ಕೆ ಕೂಡ ಪತ್ತೆಯಾಗಿದೆ. ಚಿಲಿಯಲ್ಲಿರುವ ವಿಶ್ವದ ಅತೀ ದೊಡ್ಡ ಟೆಲಿಸ್ಕೋಪ್​ ಮೂಲಕ ನೆಪ್ಚ್ಯೂನ್ ಗ್ರಹದ ಮೇಲಿರುವ ಬ್ರೈಟ್ ಮತ್ತು ಡಾರ್ಕ್ ಸ್ಪಾಟ್​ಗಳನ್ನ ಪತ್ತೆಹಚ್ಚಲಾಗಿದೆ.

ಇನ್ನು ಗುರು ಗ್ರಹದ ಮೇಲೂ ಕೆಂಪು ಬಣ್ಣದ ಚುಕ್ಕೆಯಿದ್ದು, ಅದನ್ನ ವಿಜ್ಞಾನಿಗಳು ಈ ಹಿಂದೆಯೇ ಕಂಡುಹಿಡಿದಿದ್ರು. ಆದ್ರೆ ಇದಕ್ಕೆ ಮೂಲ ಕಾರಣ ಏನು ಅನ್ನೋದು ವಿಜ್ಞಾನಿಗಳಿಗೆ ಇನ್ನೂ ಕೂಡ ಗೊತ್ತಾಗಿಲ್ಲ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಇನ್ನೂ ಕೂಡ ಅಧ್ಯಯನಗಳು ನಡೆಯುತ್ತಲೇ ಇದೆ.

suddiyaana