ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್‌ – 6 ಭಾರತೀಯರು ಸೇರಿ 7 ಮಂದಿ ಸಾವು

ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್‌ – 6 ಭಾರತೀಯರು ಸೇರಿ 7 ಮಂದಿ ಸಾವು

ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ನದಿಗೆ ಬಿದ್ದಿದೆ. ಪರಿಣಾಮ 6 ಮಂದಿ ಭಾರತೀಯರು ಸೇರಿ 7 ಮಂದಿ ಮೃತಪಟ್ಟಿರುವ ಘಟನೆ ನೇಪಾಳದ ಧಾಡಿಂಗ್ ಜಿಲ್ಲೆಯಲ್ಲಿ ನಡೆದಿದೆ.

ಸುಮಾರು 22 ಮಂದಿ ಪ್ರಯಾಣಿಕರಿದ್ದ ಬಸ್‌ ಕಠ್ಮಂಡುವಿನಿಂದ ರಮಣೀಯ ನಗರವಾದ ಪೊಖರಾಗೆ ಹೊರಟಿತ್ತು . ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ತ್ರಿಶೂಲಿ ನದಿಗೆ ಉರುಳಿ ಬಿದ್ದಿದೆ. ಪರಿಣಾಮ ಬಸ್ ನಲ್ಲಿದ್ದ 6 ಮಂದಿ ಭಾರತೀಯ ಯತ್ರಾರ್ಥಿಗಳು ಸೇರಿ 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ 19ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ತವರಿನವರಿಗೂ ಸಾವಿನ ಸುದ್ದಿ ತಿಳಿಸದೆ ಪತ್ನಿ ಅಂತ್ಯಸಂಸ್ಕಾರ ಮಾಡಿದ ಪತಿ – 20 ದಿನಗಳ ಬಳಿಕ ಬಯಲಾಯ್ತು ಸಾವಿನ ರಹಸ್ಯ

ಕಠ್ಮಂಡುವಿನಿಂದ ರಮಣೀಯ ನಗರವಾದ ಪೊಖರಾಗೆ ತೆರಳುತ್ತಿದ್ದ ಬಸ್ಸು ಪ್ರಾಂತದ ಧಾಡಿಂಗ್ ಜಿಲ್ಲೆಯ ಚಾಲೀಸ್‌ನಲ್ಲಿ ತ್ರಿಶೂಲಿ ನದಿಗೆ ಬಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಬಸ್ ತ್ರಿಶೂಲಿ ನದಿಯಲ್ಲಿ ಭಾಗಶಃ ಮುಳುಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

suddiyaana