ನೇಪಾಳದಲ್ಲಿ ಹುಡುಕಿದ್ದಷ್ಟು ಸಿಗುತ್ತಿವೆ ಹೆ*ಣಗಳು – ಸಾವಿನ ಸಂಖ್ಯೆ 584ಕ್ಕೆ ಏರಿಕೆ, 2,482ಕ್ಕೂ ಹೆಚ್ಚು ಜನ ನಾಪತ್ತೆ

ಭೀಕರ ಪ್ರವಾಹದಿಂದ ನೇಪಾಳದಲ್ಲಿ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗ್ತಿದೆ. ಶುಕ್ರವಾರ ಸಂಜೆಯ ವೇಳೆಗೆ ಮೃತರ ಸಂಖ್ಯೆ ಬರೋಬ್ಬರಿ 584ಕ್ಕೆ ಏರಿಕೆಯಾಗಿದ್ದು, 2,482ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯ (MEA) ವಕ್ತಾರ ರಂಧೀರ್ ಜೈಸ್ವಾಲ್ ಶುಕ್ರವಾರ ನೀಡಿರುವ ಮಾಹಿತಿಯಂತೆ, ನೇಪಾಳದಲ್ಲಿರುವ 320 ಭಾರತೀಯ ಪ್ರವಾಸಿಗರು/ನಾಗರಿಕರು ಪ್ರಸ್ತುತ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಸಂಖ್ಯೆ ಮೊದಲು 290 ಇತ್ತು. ವಿದೇಶಿ ಪೌರತ್ವ ಹೊಂದಿರುವ ಸುಮಾರು 100 ಭಾರತೀಯ ಮೂಲದವರೂ ಸಂಪರ್ಕದಿಂದ ಹೊರಗಿದ್ದಾರೆ.
ಇದನ್ನೂ ಓದಿ: ಶನಿ ದೋಷ ಮತ್ತು ಸಾಡೇಸಾತಿಯಿಂದ ಮುಕ್ತಿ ಬೇಕಾ- ಶನಿವಾರ ಮಾಡಿ ಈ ಕೆಲಸಗಳನ್ನ
ಕಠ್ಮಂಡುವಿಗೆ ಕರೆತರಲಾಗಿದ್ದ ತಮಿಳುನಾಡಿನ 21 ಭಾರತೀಯ ಯಾತ್ರಿಕರು ಶುಕ್ರವಾರ ದೆಹಲಿಗೆ ಸುರಕ್ಷಿತವಾಗಿ ತಲುಪಿದ್ದಾರೆ. ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 63 ಭಾರತೀಯರನ್ನು ರಕ್ಷಿಸಲಾಗಿದೆ. ಟಿಬೆಟ್‌ನಿಂದ 149 ಭಾರತೀಯರು ನೇಪಾಳ ಗಡಿಗೆ ದಾಟಿದ್ದಾರೆ. ಚೀನಾ ಭಾಗದಲ್ಲಿ ಇನ್ನು 400ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ರಕ್ಷಣಾ ಪಡೆಗಳಿಗೆ ನದಿ ಪಾತ್ರದ ತಾತ್ಕಾಲಿಕ ಹಿಮದ ಕಟ್ಟೆ (Barrier Lake) ಒಡೆದು ನೀರು ನುಗ್ಗಿದ್ದರಿಂದ ಶುಕ್ರವಾರ ಹಲವು ಬಾರಿ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಇದರ ಬೆನ್ನಲ್ಲೇ ಸುಮಾರು 50,000 ಕ್ಯೂಬಿಕ್ ಮೀಟರ್‌ನಷ್ಟು ಬೃಹತ್ ಹಿಮಪಾತ (Avalanche) ಸಂಭವಿಸಿದೆ. ಉಪಗ್ರಹ ಚಿತ್ರಗಳ ಪ್ರಕಾರ ಮೇಲ್ಭಾಗದಲ್ಲಿ ಯಾವುದೇ ಹರಿವಿಲ್ಲದ ಎರಡನೇ ಬೃಹತ್ ಸರೋವರ ರೂಪುಗೊಳ್ಳುತ್ತಿದ್ದು, ಮತ್ತಷ್ಟು ಅನಾಹುತದ ಮುನ್ಸೂಚನೆ ನೀಡಿದೆ.

ನೋಡಿರಿ

