ಇದು ಗೊಂಬೆಯಲ್ಲ.. ನೇಪಾಳದ ಈ ಚಾಯ್ ವಾಲಿ! – ಚಾ ಮಾರೋ ಹುಡುಗಿ ಸೌಂದರ್ಯ ನೋಡಿ ಕಳೆದು ಹೋದ ಯುವಕರು!

ಇದು ಸೋಶಿಯಲ್ ಮೀಡಿಯಾ ಜಮಾನ.. ರಾತ್ರಿ ಬೆಳಗಾದ್ರೋಳಗೆ ಸಾಮಾನ್ಯರು ಕೂಡ ಸ್ಟಾರ್ ಆಗಿರ್ತಾರೆ.. ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾಳೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಇದೀಗ ಗೊಂಬೆಯಂತೆ ಕಾಣೋ ಸುಂದರಿಯೊಬ್ಬರಳು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾಳೆ. ಇದೀಗ ಆಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಹೊಸ ಸಿನಿಮಾ ಅನೌನ್ಸ್! – 6 ತಿಂಗಳಲ್ಲೇ ತೆರೆಗೆ ಅಪ್ಪಳಿಸಲಿದೆ ಕೆ 47!
ಹೌದು.. ನೇಪಾಳದ ಕಠ್ಮಂಡುವಿನಲ್ಲಿ ಚಹಾ ಮಾರುತ್ತಿರುವ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದಾಳೆ. ಫೇಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಈಕೆಯ ಹವಾ ಜೋರಾಗಿದೆ. ಈ ಹುಡುಗಿ ರಸ್ತೆ ಬದಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದಾಳೆ. ನೋಡಲು ರಿಯಲ್ ಗೊಂಬೆಯಂತೆ ಕಂಡ್ರು.. ಈಕೆಯ ನಗು ಹಾಗೂ ಮುಗ್ಧತೆಯೂ ಎಲ್ಲರಿಗೂ ಇಷ್ಟವಾಗಿದೆ. ಇದೀಗ ಈಕೆ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾಳೆ.
@napal-beautuful-country-in-the ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಯುವತಿಯೊಬ್ಬಳು ನೇಪಾಳದ ರಸ್ತೆಬದಿಯಲ್ಲಿ ಚಹಾ ತಯಾರಿಸುತ್ತಿರುವುದನ್ನು ಕಾಣಬಹುದು. ಚಹಾ ಮಾಡುತ್ತಿರುವ ಈ ಯುವತಿಯ ಸೌಂದರ್ಯ, ನಗು ಹಾಗೂ ಮುಗ್ಧತೆ, ಇಂಟರ್ನೆಟ್ನಲ್ಲಿ ಬಿರುಗಾಳಿ ಎಬ್ಬಿಸಿದೆ. ತಿಳಿ ನೀಲಿ ಬಣ್ಣದ ಕುರ್ತಾ, ಬಿಳಿ ಬಣ್ಣದ ದುಪ್ಪಟ್ಟಾ, ಹಣೆಗೆ ಸಣ್ಣದಾದ ಬಿಂದಿ ಹಾಗೂ ತುಟಿಗೆ ತಿಳಿ ಬಣ್ಣದ ಲಿಪ್ ಸ್ಟಿಕ್ ಹಚ್ಚಿಕೊಂಡಿದ್ದು, ಬೀದಿ ಬದಿಯಲ್ಲಿ ಚಹಾ ಮಾಡಿ ಗ್ರಾಹಕರಿಗೆ ನೀಡುತ್ತಿರುವುದನ್ನು ಕಾಣಬಹುದು. ಜಿಂಕೆಯಂತಹ ಆಕರ್ಷಕ ಕಣ್ಣುಗಳು, ನಗು, ಮುಗ್ಧತೆಯೂ ಆಕೆಯ ನಡವಳಿಕೆಯಲ್ಲಿ ಎದ್ದು ಕಾಣುತ್ತಿದೆ. ಇದೀಗ ಈ ಸುಂದರ ಯುವತಿಯನ್ನ ನೀಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೋಡಿರಿ

