ಒಂದು ಬಿರಿಯಾನಿಗೆ ಹೋಯ್ತು ಸ್ನೇಹಿತರ ಪ್ರಾಣ – ಭೀಕರ ಅಪಘಾತಕ್ಕೆ ಮೂವರು ಗೆಳೆಯರು ಬಲಿ !

ರಾಜಧಾನಿ ಬೆಂಗಳೂರಿನಲ್ಲಿ ಬಿರಿಯಾನಿ ತಿನ್ನಲು ಮಿಡ್ ನೈಟ್ ರೈಡ್ ಹೋದ ಸ್ನೇಹಿತರು ಮಸಣ ಸೇರಿದ್ದಾರೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರಿಯಾನಿ ತಿನ್ನಲು ಮಧ್ಯರಾತ್ರಿ ಬೈಕ್ ರೈಡ್ ಹೊರಟಿದ್ದ ಮೂವರು ಯುವ ವಿದ್ಯಾರ್ಥಿಗಳು ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ದುರಂತ ಘಟನೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.
ನೆಲಮಂಗಲದ ಸೋಲೂರು ಸಮೀಪದ ಮರೂರು ಹ್ಯಾಂಡ್ ಪೋಸ್ಟ್ ಬಳಿ ಈ ಭೀಕರ ಅಪಘಾತದ ಘಟನೆ ನಡೆದಿದೆ. ನಿನ್ನೆ ರಾತ್ರಿ ಬೆಂಗಳೂರಿನಿಂದ ಮಳವಳ್ಳಿ ಬಿರಿಯಾನಿ ತಿನ್ನಲು ಬೈಕ್‌ನಲ್ಲಿ ಹೊರಟಿದ್ದ ಮೂವರು ವಿದ್ಯಾರ್ಥಿಗಳ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಅಪಘಾತದ ತೀವ್ರತೆಯಿಂದ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಎರಡು ವಾರ ಆಡಲ್ಲ ಮಹೇಂದ್ರ ಸಿಂಗ್ ಧೋನಿ – ಥಲಾ ಅಭಿಮಾನಿಗಳಿಗೆ ಆರಂಭದಲ್ಲಿ ನಿರಾಸೆ
ಮನೋಜ್, ಅಭಿ ಮತ್ತು ನವೀನ್ ಮೂವರು ಗೆಳೆಯರು ಜೊತೆಗೆ ಬಿರಿಯಾನಿ ತಿನ್ನಲು ಹೊರಟಿದ್ದರು. ಆದರೆ ಭೀಕರ ದುರಂತಕ್ಕೆ ಮೂವರು ಬಲಿಯಾಗಿದ್ದಾರೆ. ಕೇವಲ ಒಂದು ಬಿರಿಯಾನಿಗಾಗಿ ನಮ್ಮ ಮಕ್ಕಳು ಜೀವ ಕಳೆದುಕೊಂಡರು ಎಂದು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಮೂವರೂ ವಿದ್ಯಾರ್ಥಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ಸುದ್ದಿ ತಿಳಿದು ಸ್ನೇಹಿತರು ಮತ್ತು ಸಹಪಾಠಿಗಳು ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ.
ಮಧ್ಯರಾತ್ರಿ ಸಮಯದಲ್ಲಿ ಅಧಿಕ ವೇಗದಲ್ಲಿ ಬೈಕ್ ಓಡಿಸುತ್ತಿದ್ದುದು ಮತ್ತು ಲಾರಿಯೊಂದಿಗೆ ಡಿಕ್ಕಿ ಹೊಡೆದಿರುವುದು ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. ರಸ್ತೆಯಲ್ಲಿ ಲಾರಿಗಳ ಸಂಚಾರ ಹೆಚ್ಚಾಗಿರುವುದರಿಂದ ಮಧ್ಯರಾತ್ರಿ ಬೈಕ್ ರೈಡ್ ಮಾಡುವುದು ಅಪಾಯಕಾರಿ ಎಂದು ಪೊಲೀಸರು ಎಚ್ಚರಿಸಿದ್ದಾರೆ

ನೋಡಿರಿ

